ಹಿರಿಯ ನ್ಯಾಯವಾದಿ ಸೋಮನಾಥ ಪಟ್ಟಶೆಟ್ಟಿಗೆ.
ಜೀ ಕನ್ನಡ ನ್ಯೂಜನಿಂದ ವೀರ ಕನ್ನಡಿಗ ಅವಾರ್ಡ್
Senior Advocate Somnath Pattashetti.
Veera Kannadiga Award from Zee Kannada News
ಗಂಗಾವತಿ.:ನಗರದ ಹಿರಿಯ ನ್ಯಾಯವಾದಿ, ವೀರಶೈವ ಸಮಾಜದ ಮುಖಂಡ ಸೋಮನಾಥ ಪಟ್ಟಣಶೆಟ್ಟಿ ಅವರಿಗೆ ಜೀ ಕನ್ನಡ ನ್ಯೂಜ್ ಅವರು ವೀರ ಕನ್ನಡಿಗ ಅವಾರ್ಡ್ ಘೋಷಣೆ ಮಾಡಿದ್ದಾರೆ. ಕನ್ನಡ ನಾಡು ನುಡಿ ಏಳ್ಗೆಗೆ ಶ್ರಮಿಸುತ್ತಿರುವ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ರಾಜ್ಯದ ವಿವಿಧ ಜಿಲ್ಲೆಗಳಿಂದ ಗುರುತಿಸಿರುವ ಜೀ ಕನ್ನಡ ನ್ಯೂಜ್ ಅವರು ಪ್ರತಿ ವರ್ಷ ಈ ಅವಾರ್ಡ್ ನೀಡುತ್ತಾರೆ. ಪ್ರಸಕ್ತ 2025 ನೇ ಸಾಲಿನ ಅವಾರ್ಡ್ ಗೆ ನ್ಯಾಯವಾದಿ ಪಟ್ಟಣಶೆಟ್ಟಿ ಅವರನ್ನು ಕಲ್ಯಾಣ ಕರ್ನಾಟಕ ಭಾಗದಿಂದ ಆಯ್ಕೆ ಮಾಡಲಾಗಿದೆ. ಕಳೆದ 40 ವರ್ಷಗಳಿಂದ ವಕೀಲ ವೃತ್ತಿ ಮಾಡುತ್ತಿರುವ ಸೋಮನಾಥ ಪಟ್ಟಣಶೆಟ್ಟಿ ಅವರು ಗಂಗಾವತಿಯ ಹಿರಿಯ ನ್ಯಾಯವಾದಿಯಾಗಿದ್ದು, ವಿವಿಧ ಬ್ಯಾಂಕ್ ಮತ್ತು ಇನ್ಸೂರೆನ್ಸ್ ಕಂಪನಿಗಳಿಗೆ ಕಾನೂನು ಸಲಹೆಗಾರರಾಗಿದ್ದಾರೆ. ವಕೀಲ ವೃತ್ತಿಯ ಜೊತೆಗೆ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜಕ್ಕೆ ವಕೀಲ ವೃತ್ತಿಗೆ ಮಾದರಿಯಾಗಿದ್ದಾರೆ. ಬಡವರಿಗೆ ಸರಕಾರಿ ಯೋಜನೆಗಳು ನೇರವಾಗಿ ತಲುಬೇಕು. ರಸ್ತೆ ಸುಧಾರಣೆ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳ ಅಭಿವೃದ್ಧಿಯಾಗಬೇಕೆಂಬ ಕಳಕಳಿ ಹೊಂದಿದ್ದಾರೆ. ಅವರ ಸೇವಾ ಮನೋಭಾವನೆ ಮತ್ತು ಕನ್ನಡದ ಕಳಕಳಿಯನ್ನು ಗುರುತಿಸಿ ಜೀ ನ್ಯೂಜ್ ಅವರು ಈ ಅವಾರ್ಡ್ ನೀಡಲಿದ್ದಾರೆ.
ಡಿ.4 ರಂದು ಬೆಂಗಳೂರಿನ ಅಶೋಕ ಹೊಟೇಲ್ ನಲ್ಲಿ ಸಂಜೆ 5.00 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗಡೆ, ಸಚಿವರಾದ ಹೆಚ್.ಕೆ.ಪಾಟೀಲ್,
ರಾಮಲಿಂಗಾರೆಡ್ಡಿ, ಶಿವರಾಜ ತಂಗಡಗಿ, ಚಲುರಾಯಸ್ವಾಮಿ, ಸಂತೋಷ ಲಾಡ್ ಸೇರಿ ಮತ್ತಿತರ ಗಣ್ಯರು ಅವಾರ್ಡ್ ನೀಡಿ ಅಭಿನಂದಿಸಲಿದ್ದಾರೆ ಎಂದು ಜೀ ಕನ್ನಡ ನ್ಯೂಜ್ ನ ಸಂಪಾದಕ ರವಿ.ಎಸ್ ಅವರು ತಿಳಿಸಿದ್ದಾರೆ. ವಿಶೇಷವಾದ ವೀರ ಕನ್ನಡಿಗ ಅವಾರ್ಡ್ ಪಡೆಯತ್ತಿರುವ ನ್ಯಾಯವಾದಿ ಸೋಮನಾಥ.ಎಸ್.ಪಟ್ಟಣಶೆಟ್ಟಿ ಅವರಗೆ ಸಿಎಂ ಸಿದ್ದರಾಮಯ್ಯ ಸೇರಿದಂತೆ, ರಾಜ್ಯ ಸರಕಾರದ ಸಚಿವರು, ಸಂಸದರು, ಶಾಸಕರು, ವಕೀಲರು, ಪತ್ರಕರ್ತರು, ಅಭಿಮಾನಿಗಳು ಶುಭ ಹಾರೈಸಿದ್ದಾರೆ.
Kalyanasiri Kannada News Live 24×7 | News Karnataka
