More people die from AIDS due to lack of information than from AIDS - Prof. Kariguli*ಏಡ್ಸ್ ನಿoದ ಸತ್ತವರಿಗಿಂತಲೂ ಮಾಹಿತಿ ಕೊರತೆಯಿಂದ ಏಡ್ಸ್ ಗೆ ಬಲಿಯಾದವರೇ ಹೆಚ್ಚು- ಪ್ರೊ.ಕರಿಗೂಳಿ*

ಶ್ರೀರಾಮನಗರದ ಚಿಲುಕೂರಿ ನಾಗೇಶ್ವರ ರಾವ್ ಸರಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ದಿನಾಂಕ 01 ನೇ ಡಿಸೆಂಬರ್ 2025 ರಂದು ರಾಷ್ಟ್ರೀಯ ಸೇವಾ ಯೋಜನೆ ಮತ್ತು ರೆಡ್ ಕ್ರಾಸ್ ಘಟಕಗಳ ಇವರ ಅಡಿಯಲ್ಲಿ ವಿಶ್ವ ಏಡ್ಸ್ ದಿನಾಚರಣೆಯ ಜಾಗೃತಿ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸಹಪ್ರಾಧ್ಯಾಪಕರಾದ ಡಾ. ಸರ್ಫರಾಜ್ ಅಹ್ಮದ ರವರು ಏಡ್ಸ್ ದುಷ್ಪರಿಣಾಮಗಳು ಮತ್ತು ಏಡ್ಸ್ ಹರಡುವ ವಿಧಾನಗಳು ಮತ್ತು ಅದರಿಂದ ಹೇಗ ನಾವು ಜಾಗೃತರಿರ ಬೇಕು ಎಂಬ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ಕರಿಗೂಳಿಯವರು ಏಡ್ಸ್ ರೋಗದಿಂದ ಸತ್ತವರಿಗಿಂತ *ಸಕಾಲಕ್ಕೆ ಏಡ್ಸ್ ಕುರಿತು ಮಾಹಿತಿ ದೊರೆಯದೇ ಸತ್ತುಹೋಗುತ್ತಿರುವುದು* ತುಂಬಾ ಆಘಾತಕಾರಿ… ಆದುದರಿಂದ *ಜಾಗೃತರಾಗಿ- ಇತರರನ್ನು ಜಾಗೃತರಾಗಿಸಿ*
*”ಆರೋಗ್ಯವಂತರಾಗಿರಿ, ಅನಾರೋಗ್ಯದಿಂದ ನರಳುವವರಿಗೆ ಮಾನಸಿಕ ಸ್ಥೈರ್ಯ ತುಂಬಿರಿ”*
ಎಂದು ಸಲಹೆ ನೀಡಿದರು .ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸಂಚಾಲಕರಾದ ಶ್ರೀ ವೀರೇಶ ರವರು ಕಾರ್ಯಕ್ರಮದ ನಿರೂಪಣೆ ಮಾಡಿದರು ಸಹಾಯಕ ಪ್ರಾಧ್ಯಾಪಕರಾದ ಶ್ರೀರವಿಕುಮಾರ, ಶ್ರೀಶಂಕ್ರಪ್ಪ, ಶ್ರೀವಿರುಪಾಕ್ಷ ಕೆ, ಡಾ.ಶಶಿಕುಮಾರ ಮತ್ತು ಎಲ್ಲಾ ಅತಿಥಿ ಉಪನ್ಯಾಸಕರು ಹಾಗೂ ಆಡಳಿತ ಸಿಬ್ಬಂದಿಗಳಾದ ಜಬೀನಾಬೇಗಂ,ವಿನಾಯಕ,ಚಿನ್ನವರಪ್ರಸಾದ, ಶರಣ, ಶಾಂತಿ ಹಾಗೂ ಕಾಲೇಜಿನ ಎಲ್ಲಾ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಉಪಸ್ಥಿತ ರಿದ್ದರು.
Kalyanasiri Kannada News Live 24×7 | News Karnataka
