ಬಸವ ತಾಲಿಬಾನಿಗಳೆಂದಿರುವ ಕನ್ನೇರಿ ಸ್ವಾಮಿಗೆ ರಾಜ್ಯದಿಂದ ಗಡಿಪಾರು ಮಾಡಿ
Kanneri Swami, who is called Basava Taliban, should be exiled from the state.
ಬಸವಣ್ಣನವರನ್ನು ಮತ್ತು ಬಸವತತ್ವ ಆರಾಧಕರನ್ನು ತಾಲಿಬಾನಿಗಳೆಂದು ಪದೇ ಪದೇ ಹೇಳಿಕೆ ನೀಡಿ ಕೋಮು ಗಲಭೆಗೆ ಪ್ರಚೋಧಿಸುತ್ತಿರುವ ಕನ್ನೇರಿ ಸ್ವಾಮಿಗಳನ್ನು ರಾಜ್ಯದಿಂದ ಗಡಿಪಾರು ಮಾಡಬೇಕು.
ಕನ್ನೇರಿ ಮಠದ ಸ್ವಾಮಿಗೆ ಧೈರ್ಯವಿದ್ದರೆ ಯಾರು ಮಧ್ಯವ್ಯಸನಿಗಳಾಗಿದ್ದಾರೋ, ಯಾರು ಬೋರ್ಮುಡಾ ಧರಿಸಿದ್ದಾರೋ, ಯಾರು ತಮ್ಮ ಭಕ್ತರಿಗೆ ಸರಾಯಿ ಕುಡಿಯಿರಿ ಎಂದು ಹೇಳಿದ್ದಾರೋ ಅಂಥವರ ಹೆಸರು ಹೇಳಿ ಅವರ ವಿರುದ್ಧ ಮಾತಾಡಬೇಕೇ ವಿನಾ ಸಾರಾಸಗಟವಾಗಿ ಬಸವ ತತ್ವದವರನ್ನು ತಾಲಿಬಾನಿ ಎಂದು ಹೇಳುವ ಚಟವೇಕೆ?
ಕನ್ನೇರಿ ಸ್ವಾಮಿಗೆ ಸುಪ್ರೀಂ ಕೋರ್ಟ್ ಒಳ್ಳೆಯ ಪ್ರಜೆಯಲ್ಲ ಎಂದು ಹೇಳಿ ಛೀ ಮಾರಿ ಹಾಕಿದರೂ ಸಹಿತ ಉದ್ಧೇಶ ಪೂರ್ವಕವಾಗಿಯೇ ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡುವ ಚಟುವಟಿಕೆ ಮಾಡುತ್ತಿರುವುದರ ಹಿಂದೆ ಬಹುದೊಡ್ಡ ಹುನ್ನಾರವಿದೆ. ಬಸವತತ್ವದವರನ್ನು ತಾಲಿಬಾನಿಗೆ ಹೋಲಿಸುವ ಇವರೇ ಉಗ್ರ ತಾಲಿಬಾನಿಗಳು. ತಾಲಿಬಾನಿಗಳು ಸಮಾಜದಲ್ಲಿ ಗೊಂದಲ ಮೂಡಿಸಿ ಶಾಂತಿ ಕದಡುವರು ಹಾಗೆಯೇ ಇವರು ಪದೇ ಪದೇ ಇಂತಹ ಹೇಳಿಕೆ ನೀಡಿ ಸಮಾಜದಲ್ಲಿ ಕ್ಷೋಭೆಯನ್ನುಂಟು ಮಾಡುತ್ತಿದ್ದಾರೆ ಆದ್ದರಿಂದ ತಾನು ತಾಲಿಬಾನಿ ಗುಣ ಹೊಂದಿರುವ ಕಾರಣ ತಾಲಿಬಾನಿ ಎಂದು ಹಣೆಪಟ್ಟಿ ಕಟ್ಟಿ ಇವರನ್ನು ಬಂಧಿಸಬೇಕು.
ತನ್ನ ಮಠದಲ್ಲಿ ಸನಾತನಿ ಧರ್ಮದ ಮೂಸಿಯಂ ಮಾಡಿ, ಭಕ್ತರಿಂದ ಟಿಕೆಟ್ ಪಡೆದು ಕೊಟ್ಯಾಂತರ ರೂಪಾಯಿ ಸಂಗ್ರಹಿಸಿ ಮಠವನ್ನು ವ್ಯಾಪಾರಿಕರಣ ಮಾಡಿರುವುದು ಇದು ಬಸವ ಸಂಸ್ಕೃತಿಯೆ? ಬಸವತತ್ವ ಮಠವನ್ನು ವೈದಿಕರಣಗೊಳಿಸಿ, ಬಸವ ತತ್ವ ನಿಜಾಚರಣೆಯಲ್ಲಿರುವವರಿಗೆ ಬರೀ ಹೊಲಸು ಮಾತಾಡುತ್ತಾ ತಿರುಗುವ ಮತ್ತು ಬಸವಾದಿ ಶರಣರ ಒಂದು ಭಾವಚಿತ್ರ ಹಾಕದೇ ಲಿಂಗಾಯತ ಧರ್ಮ ವಿರೋಧಿ ಗುಣ ಬೆಳೆಸಿಕೊಂಡಿರುವ ಕನ್ನೇರಿ ಸ್ವಾಮಿಗೆ ಬಸವತತ್ವದವರ ಬಗ್ಗೆ ಮಾತನಾಡುವ ಯಾವ ಹಕ್ಕು ಇದೆ. ಕಾಲು ಕೆದರಿ ಜಗಳಕ್ಕೆ ಕಾಯುತ್ತಿರುವ ಕನ್ನೇರಿ ಸ್ವಾಮಿ ಎಚ್ಚರಿಕೆಯಿಂದಿರಬೇಕು. ಬಸವತತ್ವವನ್ನು ಮತ್ತು ಬಸವತತ್ವದವರನ್ನು ತಾಲಿಬಾನಿಗೆ ಹೋಲಿಸಿದ್ದು ಅಕ್ಷಮ್ಯವಾಗಿದೆ. ಬಸವತತ್ವದವರು ಬೀದಿಗೆ ಬಂದು ನಿಮಗೆ ಪಾಠ ಕಲಿಸುವುದಕ್ಕೆ ಮುಂಚೆ ಕ್ಷಮೆ ಕೇಳಿಕೊಂಡು ಸುಪ್ರೀಂ ಕೋರ್ಟ್ ಆದೇಶದಂತೆ ನಡೆದುಕೊಂಡು ಮಠದಲ್ಲಿ ಇದ್ದರೆ ಒಳಿತು. ಆದಷ್ಟು ಬೇಗನೇ ಈ ಮಾನಸಿಕ ಅಸ್ವಸ್ಥ ಸ್ವಾಮಿಯನ್ನು ಸರಕಾರವು ಮಧ್ಯಸ್ಥಿಕೆ ವಹಿಸಿ ಗಡಿಪಾರು ಮಾಡಿ ಅವರ ಮಠವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಪ್ರತಿಯೊಬ್ಬ ಬಸವಭಕ್ತರು ಮತ್ತು ಲಿಂಗಾಯತ ಮಠಾಧೀಶರು ಇವರ ವಿರುದ್ಧ ಧ್ವನಿ ಎತ್ತಬೇಕು. ಬಸವಣ್ಣನವರನ್ನೇ ತಾಲಿಬಾನಿ ಸಂಸ್ಕೃತಿಗೆ ಹೋಲಿಸುವ ಇವರ ನಡೆಯನ್ನು ಖಂಡಿಸಬೇಕು ಮತ್ತು ಇವರ ಜೊತೆಗೆ ಎಲ್ಲಿಯೂ ವೇದಿಕೆ ಹಂಚಕೊಳ್ಳಬಾರದು.
*ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಕಲ್ಯಾಣ ಮಹಾಮನೆ ಮಹಾಮಠ ಗುಣತೀರ್ಥವಾಡಿ-ಬಸವಕಲ್ಯಾಣ*
Kalyanasiri Kannada News Live 24×7 | News Karnataka
