Breaking News

ಸ್ಥಗಿತಗೊಂಡ ಸೌಹಾರ್ದ ಸಹಕಾರಿ ಸಂಘಗಳ ಸಮಾಪನೆ: ಆಕ್ಷೇಪಣೆ ಆಹ್ವಾನ

ಸ್ಥಗಿತಗೊಂಡ ಸೌಹಾರ್ದ ಸಹಕಾರಿ ಸಂಘಗಳ ಸಮಾಪನೆ: ಆಕ್ಷೇಪಣೆ ಆಹ್ವಾನ

Closure of suspended friendly cooperative societies: Objections invited
ಕೊಪ್ಪಳ ಡಿಸೆಂಬರ್ 02, (ಕರ್ನಾಟಕ ವಾರ್ತೆ): ಪ್ರಾಂತೀಯ ವ್ಯವಸ್ಥಾಪಕರು, ಕರ್ಣಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು, ಕಲಬುರಗಿ ಪ್ರಾಂತೀಯ ಕಚೇರಿಯ ವರದಿಯನ್ವಯ ಜಿಲ್ಲೆಯಲ್ಲಿ ಕರ್ನಾಟಕ ಸಹಖಾರಿ ಸಂಘಗಳ ಕಾಯ್ದೆ 1997 ರ ಅಡಿಯಲ್ಲಿ ನೋಂದಣಿಗೊAಡು ಸಂಘದ ಬೈಲಾ ರೀತ್ಯಾ ಕಾರ್ಯನಿರ್ವಹಿಸದೇ ಸ್ಥಗಿತಗೊಂಡಿರುವ ಸಹಕಾರ ಸಂಘಗಳನ್ನು ಸಮಾಪನೆಗೊಳಿಸಲು ಹಾಗೂ ಮುಂದೆ ಇವುಗಳನ್ನು ನೋಂದಣಿ ರದ್ದತಿಗೆ ಕ್ರಮವಿಡಲಾಗುತ್ತಿದ್ದು, ಈ ಕುರಿತು ಸಂಬAಧಿಸಿದವರಿAದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
ಕನಕಗಿರಿ ತಾಲ್ಲೂಕಿನ ನವಲಿಯ ವಿಶ್ವಾಸ ಸ್ವಶಕ್ತಿ ಮಹಿಳಾ ಸೌಹಾರ್ದ ಸ್ವ ಸಹಾಯ ಸಹಕಾರಿ ನಿ., ಕುಷ್ಟಗಿ ತಾಲ್ಲೂಕಿನ ಹನುಮಸಾಗರದ ಅನ್ನಪೂರ್ಣೇಶ್ವರಿ ಸ್ವಶಕ್ತಿ ಮಹಿಳಾ ಸೌಹಾರ್ದ ಸ್ವ ಸಹಾಯ ಸಹಕಾರಿ ನಿ., ಕುಷ್ಟಗಿಯ ಕಾಯಕಲ್ಪ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿ., ಕುಕನೂರಿನ ಐಶ್ವರ್ಯ ಸ್ವಶಕ್ತಿ ಮಹಿಳಾ ಸೌಹಾರ್ದ ಸ್ವ ಸಹಾಯ ಸಹಕಾರಿ ನಿ. ಹಾಗೂ ಯಲಬುರ್ಗಾ ತಾಲ್ಲೂಕು ರೆಡ್ಡಿ ನೌಕರರ ಪತ್ತಿನ ಸಹಕಾರಿ ಸಂಘ ನಿ., ಮತ್ತು ಕೊಪ್ಪಳದ ಮಹಾಲಕ್ಷಿö್ಮÃ ಸ್ವಶಕ್ತಿ ಮಹಿಳಾ ಸೌಹಾರ್ದ ಸ್ವ ಸಹಾಯ ಸಹಕಾರಿ ನಿ., ಈ ಸಹಕಾರ ಸಂಘಗಳನ್ನು ಸಮಾಪನೆಗೊಳಿಸಲು ಕ್ರಮ ವಹಿಸಲಾಗುತ್ತಿದೆ.
ಈ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಈ ಪ್ರಕಟಣೆ ಹೊರಡಿಸಿದ 15 ದಿನಗಳೊಳಗಾಗಿ ಅಗತ್ಯ ದಾಖಲಾತಿಗಳೊಂದಿಗೆ ಸಕ್ಷಮ ನಿಬಂಧಕರಿಗೆ ಸಲ್ಲಿಸಬೇಕು ಎಂದು ಕೊಪ್ಪಳ ಸಹಕಾರ ಸಂಘಗಳ ಉಪ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About Mallikarjun

Check Also

screenshot 2025 12 02 17 10 25 65 6012fa4d4ddec268fc5c7112cbb265e7.jpg

ಸೋಮನಹಳ್ಳಿ ಎ.ಪಿ.ಎಸ್ ಪಿಯುಸಿ ಕಾಲೇಜಿನಲ್ಲಿ ವಿಜ್ಞಾನ ಹಾಗೂ ಕಲೆಯ ವಸ್ತುಪ್ರದರ್ಶನ

ಸೋಮನಹಳ್ಳಿ ಎ.ಪಿ.ಎಸ್ ಪಿಯುಸಿ ಕಾಲೇಜಿನಲ್ಲಿ ವಿಜ್ಞಾನ ಹಾಗೂ ಕಲೆಯ ವಸ್ತುಪ್ರದರ್ಶನ Science and Art Exhibition at Somanahalli APS …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.