Appeal for assistance in identifying woman's body
ಕೊಪ್ಪಳ ಡಿಸೆಂಬರ್ 02, (ಕರ್ನಾಟಕ ವಾರ್ತೆ): ಕೊಪ್ಪಳ ನಗರದ ಜಿಲ್ಲಾಸ್ಪತ್ರೆಗೆ 2025ರ ಜನವರಿ 16 ರ ಸಂಜೆ ಬಿ ತುಳಸಿ ಗಂಡ ಬಿ. ರಾಜು ಎಂಬ 50 ರಿಂದ 55 ವರ್ಷದ ಮಹಿಳೆಯನ್ನು ಯಾರೋ ಚಿಕಿತ್ಸೆಗಾಗಿ ದಾಖಲಿಸಿ ಹೋಗಿದ್ದು, ಮಹಿಳೆಯು ಚಿಕಿತ್ಸೆ ಫಲಕಾರಿಯಾಗದೆ 2025ರ ಜನವರಿ 17 ರ ಬೆಳಗಿನ ಜಾವ ಮೃತಪಟ್ಟಿರುತ್ತಾರೆ. ಮಹಿಳೆಯ ವಾರಸುದಾರರು ಪತ್ತೆಯಾಗದ ಕಾರಣ ಮಹಿಳೆಯ ಶವವನ್ನು ಜಿಲ್ಲಾಸ್ಪತ್ರೆಯ ಶಿಥಿಲಾಗಾರದಲ್ಲಿ ಇರಿಸಲಾಗಿದೆ. ಈ ಕುರಿತು ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 01/2025 ಕಲಂ 194 ಬಿಎನ್‌ಎಸ್‌ಎಸ್ ಅಡಿ ಪ್ರಕರಣ ದಾಖಲಾಗಿದೆ.
ಮೃತ ಮಹಿಳೆಯ ಚಹರೆ:
ಮಹಿಳೆಯು ದುಂಡುಮುಖ, ಗೋಧಿ ಮೈಬಣ್ಣ, ತಲೆಯಲ್ಲಿ ಉದ್ದನೆಯ ಕಪ್ಪು ಬಿಳಿ ಮಿಶ್ರಿತ ಕೂದಲು ಹೊಂದಿದ್ದು, ನೀಲಿ ಬಣ್ಣದ ಡಿಸೈನ್ ಇರುವ ನೈಟಿ ಧರಿಸಿರುತ್ತಾರೆ. ಇತರೆ ಬೇರೆ ಯಾವುದೇ ಗುರುತುಗಳು ಕಂಡು ಬಂದಿರುವುದಿಲ್ಲ.
ಮೇಲ್ಕAಡ ಚಹರೆಯ ಮಹಿಳೆಯ ಬಗ್ಗೆ ಯಾವುದಾದರೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದಲ್ಲಿ, ಮೃತಳ ಗುರುತು, ವಿಳಾಸ ಪತ್ತೆಯಾದಲ್ಲಿ ನಗರ ಠಾಣೆ ಪಿಐ: 9480803745, 08539-220333, ನಗರ ಠಾಣೆ ಪಿಎಸ್‌ಐ: 9611589433, ಕೊಪ್ಪಳ ಕಂಟ್ರೋಲ್ ರೂಂ.08539-230100, 230222, ಸಂಪರ್ಕಿಸಿ ಮಾಹಿತಿ ನೀಡುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆ ಪ್ರಕಟಣೆ ಕೋರಿದೆ.
Kalyanasiri Kannada News Live 24×7 | News Karnataka