ನಗರ ಬೆಳೆದರೆ ನಮ್ಮ ಕಸುಬುಗಳು ಉಳಿಯುತ್ತವೆ: ನಾಗರಾಜ್ ಸವಿತಾ
If the city grows, our crafts will survive: Nagaraj Savita
ಕೊಪ್ಪಳ: ನಗರಸಭೆ ಆವರಣದಲ್ಲಿ 26ನೇ ದಿನದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಮತ್ತು ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯೆ ವೇದಿಕೆಯ ಬಲ್ಡೋಟ (ಬಿಎಸ್.ಪಿಎಲ್), ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ, ಎಕ್ಸಿಂಡಿಯಾ ಇವುಗಳ ವಿಸ್ತರಣೆ ವಿರೋಧಿಸಿ, ಬಸಾಪುರ ಕೆರೆ ಸಾರ್ವಜನಿಕರಿಗೆ ಮುಕ್ತಗೊಳಿಸಲು ಆಗ್ರಹಿಸಿ ನಡೆದಿರುವ ಧರಣಿ ಸತ್ಯಾಗ್ರಹವನ್ನು ಬೆಂಬಲಿಸಿದ ನಗರದ ಸವಿತಾ ಸಮಾಜ ಸಂಘ ಪಾಲ್ಗೊಂಡಿತು. ಸಂಘದ ಅಧ್ಯಕ್ಷ ನಾಗರಾಜ ಸವಿತಾ ಅವರು ಮಾತನಾಡಿ ಕೊಪ್ಪಳ ನಗರ ಯಾವತ್ತೂ ನಮ್ಮಂತವರಿಗೆ ಅನ್ನ ಕೊಟ್ಟಿದೆ. ನಾವು ಹಿರಿಯರ ಕಾಲದಿಂದ ಇಲ್ಲಿ ಬದುಕು ಕಟ್ಟಿಕೊಂಡಿದ್ದೇವೆ. ಗವಿಮಠ ಆಶೀರ್ವಾದ ನಮಗೆ ಇರುವದರಿಂದ ಯಾವತ್ತು ನಮಗೆ ಇಲ್ಲಿ ಅನ್ನದ ಕೊರತೆ ಆಗಿಲ್ಲ. ಆದರೆ ಕೊಪ್ಪಳ ಕಳೆದ ಐದು ವರ್ಷಗಳಿಂದ ಅಭಿವೃದ್ಧಿಯಾಗುವುದು ಕುಂಠಿತಗೊಂಡಿದದೆ. ಇಲ್ಲಿನ ನಿವೇಶನಗಳು ಮಾರಾಟಕ್ಕೆ ಇದ್ದರೂ ಖರೀದಿಸುವವರಿಲ್ಲ. ಕರಿದೂಳು, ಹೊಗೆ, ಬೂದಿ ಬಾಧಿಸುತ್ತಿದ್ದು ಪೂರ್ವ ಭಾಗ ಮತ್ತು ದಕ್ಷಿಣದ ಭಾಗ ಸಂಪೂರ್ಣ ಪಾಳು ಬಿದ್ದಿವೆ. ನಗರ ಬೆಳೆದರೆ ಅಷ್ಟೇ ನಮ್ಮ ಭವಿಷ್ಯ ಮತ್ತು ನಮ್ಮ ಮುಂದಿನ ಪೀಳಿಗೆ ಉಳಿಯುತ್ತವೆ. ಇಲ್ಲದಿದ್ದರೆ ಇಲ್ಲಿ ಬದುಕುವರು ಆತಂಕದಿಂದ ನಗರ ಬಿಟ್ಟು ಬೇರೆ ಕಡೆ ಸ್ಥಳಾಂತರವಾಗುವ ಆಸಕ್ತಿ ತೋರುತ್ತಿದ್ದಾರೆ. ಮುಂದೆ ಇಲ್ಲಿ ಜನವಸತಿ ಇಲ್ಲದಿದ್ದರೆ ನಮ್ಮ ವ್ಯವಹಾರ, ಕಸುಬುಗಳಾದರು ಹೇಗೆ ಉಳಿದಾವು ಎನ್ನುವ ಆತಂಕ ಉಂಟಾಗಿದೆ. ನಾವು ಸ್ವಚ್ಛ ಪರಿಸರ, ಸ್ವಚ್ಛ ಗಾಳಿ, ಸ್ವಚ್ಛ ಪರಿಸರ ಬಯಸಿದರೆ, ಕಾರ್ಖಾನೆಗಳು ಅದರಲ್ಲಿ ಬಲ್ದೋಟ ವಿಸ್ತರಣೆ ಆತಂಕವನ್ನು ಹೆಚ್ಚು ಮಾಡಿದೆ. ಶ್ರೀ ಗವಿಮಠವನ್ನು ಒಳಗೊಂಡು ಇಡೀ ನಗರವನ್ನು ಅಪಾಯಕ್ಕೆ ದೂಡಿದೆ. ಆದ್ದರಿಂದ ನಗರದ ಪ್ರತಿಯೊಬ್ಬರು ನಾವು ಒಗ್ಗಟ್ಟಾಗಿ ಗವಿಶ್ರೀಗಳು ಹೋರಾಟಕ್ಕೆ ಕೊಟ್ಟ ಕರೆಯಂತೆ ಅವರ ವಚನವನ್ನು ಪಾಲಿಸುತ್ತೇವೆ ಎಂದು ಹೇಳಿದರು. ಇನ್ನೊಬ್ಬ ಶಿವಮೂರ್ತಿ ಸವಿತಾ ಅವರು ನಾವು ವೇದಿಕೆ ಮತ್ತು ನಗರದ ಹಿರಿಯರು ನಿರ್ಣಯಿಸಿದಂತೆ ಕೊಪ್ಪಳದಿಂದ ಕಾರ್ಖಾನೆಗಳು ತೊಲಗುವವರೆಗೆ ಹೋರಾಡಲು ಸಿದ್ಧ ಎಂದರು. ಸವಿತಾ ಸಮಾಜ ಸಹಕಾರಿ ಸಂಘದ ಸದಸ್ಯರಾದ ರವಿ ಮೆಡಿಗುಂದ, ಈಶಪ್ಪ ಸವಿತಾ, ವಿಠಲ ಗೌರಿ ಅಂಗಳ, ಶ್ರೀನಿವಾಸ್ ಗೋಪದಿನ್ನಿ, ದೇವಪ್ಪ ಗೌರಿ ಅಂಗಳ, ರಾಘವೇಂದ್ರ ಸವಿತಾ, ಬಡೆಪ್ಪ ಮಲ್ಕಾಪುರ, , ಸಣ್ಣ ಯಲ್ಲಪ್ಪ ಯೋಗಿ ಸವಿತಾ, ಶ್ರೀನಿವಾಸ್ ಸವಿತಾ, ವೆಂಕಟೇಶ್ ಗೋಪದಿನ್ನಿ, ಗವಿಸಿದ್ದಪ್ಪ ಹಿರೇಬಗನಾಳ, ಶಿವಪ್ಪ ದೇವರಮನಿ, ಜಗದೀಶ್ ಕುಂಬಾರ್, ಗಣೇಶ್ ವಿಶ್ವಕರ್ಮ, ಮಹೇಶ್ ವದ್ನಾಳ, ಕಲ್ಲಪ್ಪ ಸವಿತಾ, ಮಂಜುನಾಥ ಸವಿತಾ, ದೇವಪ್ಪ ಸವಿತಾ ಇವರು ಭಾಗವಹಿಸಿದ್ದರು. ಧರಣಿ ನೇತೃತ್ವವನ್ನು ಜಂಟಿ ಕ್ರಿಯಾ ವೇದಿಕೆಯ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಸಂಚಲಕರಾದ ಮಲ್ಲಿಕಾರ್ಜುನ ಗೋನಾಳ (ಕೆ.ಬಿ.ಗೋನಾಳ), ರವಿ ಕಾಂತನವರ, ಶಿವಪ್ಪ ಹಡಪದ, ಮಖಬೂಲ್ ರಾಯಚೂರು, ಯಮನೂರಪ್ಪ ಹಾಲಳ್ಳಿ ಬಸಾಪುರ, ಮೂಕಪ್ಪ ಮೇಸ್ತ್ರಿ ಬಸಾಪುರ, ಬಸವರಾಜ ಶೀಲವಂತರ, ಕಾಶಪ್ಪ ಚಲವಾದಿ, ಎಸ್.ಎ.ಗಫಾರ್ ಇದ್ದರು
Kalyanasiri Kannada News Live 24×7 | News Karnataka
