ಜಡಕ್ಕೆ ಜೀವ ತುಂಬುವ ಸಂಜೀವಿನಿಯೇ ಪುಸ್ತಕ
A book is the medicine that brings life to the inert.
ಗಂಗಾವತಿ: ಪುಸ್ತಕವೆಂದರೆ ಕೇವಲ ಅಕ್ಷರ, ಹಾಳೆಗಳ ಕಟ್ಟಲ್ಲ ಅದು ಮನುಷ್ಯ ಜೀವನದ ಜಡತ್ವಕ್ಕೆ ಚೈತನ್ಯ ತುಂಬುವ ಸಂಜೀವಿನಿ ಇದ್ದಹಾಗೆ ಹಾಗಾಗಿ ಪುಸ್ತಕವೆಂದರೆ ಜ್ಞಾನ ಚೇತನವೆಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಅವರು ಅಭಿಪ್ರಾಯ ಪಟ್ಟರು.

ಅವರು ಗಂಗಾವತಿಯ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಕಲ್ಮಠ ಶ್ರೀ ಚನ್ನಬಸವ ಸ್ವಾಮಿ ಮಹಿಳಾ ಮಹಾವಿದ್ಯಾಲಯದ ಕನ್ನಡ ವಿಭಾಗ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರಗಳ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ನನ್ನ ನೆಚ್ಚಿನ ಪುಸ್ತಕ ಅಭಿಪ್ರಾಯ ಮಂಡನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಂದುವರೆದು ಹಿಂದೆ ಪುಸ್ತಕ ಮುದ್ರಣ ಬಹಳ ಕಷ್ಟದಾಯಕವಾಗಿತ್ತು ಹಾಗಾಗಿ ಅಷ್ಟು ಸಂಖ್ಯೆಕೆಯ ಪುಸ್ತಕಗಳು ಲಭ್ಯವಿರಲಿಲ್ಲ ಆದರೆ ಓದುಗರ ಸಂಖ್ಯೆ ಅಧಿಕವಾಗಿತ್ತು. ಈಗ ಮುದ್ರಣ ಸರಳವಾಗಿದ್ದು ದಿನಂಪ್ರತಿ ನೂರಾರು ಪುಸ್ತಕಗಳು ಹೊರ ಬರುತ್ತಿವೆ ಆದರೆ ಓದುಗರ ಸಂಖ್ಯೆ ತೀರಾ ಕಡಿಮೆಯಾಗಿರುವುದು ವಿಪರ್ಯಾಸದ ಸಂಗತಿ ಹಾಗಾಗಿ ಮಕ್ಕಳಿಗೆ, ಯುವಕರಿಗೆ ಮತ್ತು ಸಾರ್ವಜನಿಕರಿಗೆ ಓದುವ ಸಂಸ್ಕೃತಿಯನ್ನು ಬೆಳೆಸುವ ಉದ್ದೇಶದಿಂದ ಪುಸ್ತಕ ಪ್ರಾಧಿಕಾರವು ಮನೆಮನೆಗೆ ಗ್ರಂಥಾಲಯ ಮತ್ತು ಶಾಲೆ ಕಾಲೇಜುಗಳಲ್ಲಿ ನನ್ನ ಮೆಚ್ಚಿನ ಪುಸ್ತಕ ಎಂಬ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು ಸಾನಿಧ್ಯ ವಹಿಸಿದ್ದ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ. ಡಾ. ಕೊಟ್ಟೂರು ಮಹಾಸ್ವಾಮಿಗಳು ಮಾತನಾಡಿ ಇಂದು ಪುಸ್ತಕ ಹಿಡಿಯಬೇಕಾಗಿದ್ದ ವಿದ್ಯಾರ್ಥಿಗಳ ಕೈಗಳಲ್ಲಿ ಮೊಬೈಲ್ ಬಂದಿರುವುದು ಅತ್ಯಂತ ಆತಂಕ ಕಾರಿಯಾದ ಸಂಗತಿಯಾಗಿದೆ .ಅದು ವಿದ್ಯಾರ್ಥಿಗಳ ಇಚ್ಛಾಶಕ್ತಿಯನ್ನು ಕುಂಠಿತಗೊಳಿಸುತ್ತದೆ ಆದರೆ ಪುಸ್ತಕ ಓದಿನಿಂದ ವಿಷಯಗಳನ್ನು ಗ್ರಹಿಸುವ, ಅರ್ಥೈಸುವ, ಅಭಿವ್ಯಕ್ತಿಸುವ ಸಾಮರ್ಥ್ಯ ಬಂದು ಬದುಕನ್ನು ಕಲಿತುಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಸಮಾರಂಭದಲ್ಲಿ ಹಲವು ವಿದ್ಯಾರ್ಥಿನಿಯರು ತಮ್ಮ ತಮ್ಮ ಮೆಚ್ಚಿನ ಪುಸ್ತಕಗಳ ಕುರಿತು ಅಭಿಪ್ರಾಯಗಳನ್ನು ಮಂಡಿಸಿದರು. ಅವುಗಳಲ್ಲಿ ಉತ್ತಮ ಅಭಿಪ್ರಾಯಗಳಿಗೆ ಪ್ರಮಾಣ ಪತ್ರ ಸಹಿತ ಗ್ರಂಥ, ಬಹುಮಾನಗಳನ್ನು ನೀಡಿ ಪುರಸ್ಕರಿಸಲಾಯಿತು ಕಾಲೇಜಿನ ಪ್ರಾಚಾರ್ಯ ಮತ್ತು ಪುಸ್ತಕ ಪ್ರಾಧಿಕಾರದ ಸದಸ್ಯ ಡಾ. ಶರಣಬಸಪ್ಪ ಕೋಲ್ಕಾರ್ ಅವರು ಮಾತನಾಡಿ ಪ್ರಾಧಿಕಾರದ ಹಲವು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ಉಪಾಧ್ಯಕ್ಷರಾದ ಕೆ ಚನ್ನಬಸಯ್ಯ ಸ್ವಾಮಿಯವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಾಹಿತಿ ಪ್ರೊ. ಜಗದೇವಿ ಕಲಶೆಟ್ಟಿ, ಸಂಸ್ಥೆಯ ಕಾರ್ಯದರ್ಶಿ ಶರಣೆಗೌಡ ಜಿ ಮಾಲಿ ಪಾಟೀಲ್, ರಾಚಯ್ಯಸ್ವಾಮಿ ಹುಚ್ಚೇಶ್ವರಮಠ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ಡಾ. ಕೆ ಎಂ ಬಸವರಾಜ್ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ವಾಣಿಶ್ರೀ ಪಾಟೀಲ್ ಹಾಗೂ ಅಧ್ಯಾಪಕರು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
Kalyanasiri Kannada News Live 24×7 | News Karnataka
