
ಕಾತರಕಿಯಲ್ಲಿ ಇಂದಿನಿಂದ ಗ್ರಾಮದೇವತೆ ದ್ಯಾಮಮ್ಮ ದೇವಿ ಜಾತ್ರಾ ಮಹೋತ್ಸವ

Village Goddess Dyamamma Devi Jatra Festival to begin in Kataraki from today
ಕೊಪ್ಪಳ: ತಾಲೂಕಿನ ಕಾತರಕಿ ಗ್ರಾಮದ ಗ್ರಾಮದೇವತೆ ಶ್ರೀ ದ್ಯಾಮಮ್ಮ ದೇವಿಯ ಜಾತ್ರಾ ಮಹೋತ್ಸವ ಒಂಬತ್ತು ವರ್ಷಗಳ ನಂತರ ಅತ್ಯಂತ ವಿಜೃಂಭಣೆಯಿಂದ ಜರುಗುತ್ತಿದೆ ನವಂಬರ್ 23ರಿಂದ 25ರವರೆಗೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿವೆ.
23 ರವಿವಾರದಂದು ಬೆಳಿಗ್ಗೆ ಪೂರ್ಣ ಕುಂಭದೊಂದಿಗೆ ಗಂಗಾಸ್ಥಳಕ್ಕೆ ಹೋಗಿ ಪೂಜೆ ನೆರವೇರಿಸಿ ವಿವಿಧ ಕಲಾ ತಂಡಗಳು ಹಾಗೂ ವಾದ್ಯ ಮೇಳದೊಂದಿಗೆ ಗ್ರಾಮದೇವತೆಯ ಮೆರವಣಿಗೆ ಜರುಗುವುದು. ಪೂಜೆ ಪುನಸ್ಕಾರಗಳ ನಂತರ ಬೆಳಗ್ಗೆ 11 ಗಂಟೆಗೆ ಮಹಿಳಾ ಘೋಷ್ಠಿ ಜರುಗಲಿದ್ದು ಕೊಪ್ಪಳದ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಯೋಗಿನಿ ಅಕ್ಕನವರು ಭಾಗವಹಿಸುವರು. ಕಾರ್ಯಕ್ರಮದ ಉದ್ಘಾಟನೆಯನ್ನು ಕಲಬುರ್ಗಿ ನಗರದ ಪಿಎಸ್ಐ ಯಶೋಧಾ ಕಟಕೆ ನೆರವೇರಿಸಲಿದ್ದು, ಮಾತೃಶ್ರೀ ವನಜ ಗಂಗಾಧರ ಪುರೋಹಿತ ಅವರು ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಲೀಲಾವತಿ ಮಲ್ಲಿಕಾರ್ಜುನ ಕಾರಟಗಿ, ಶಿವಮ್ಮ ಈಶಪ್ಪ ಬೈರಣ್ಣವರ್, ನಿರ್ಮಲ ಬಳ್ಳೊಳ್ಳಿ, ಶೋಭಾ ಬಸವರಾಜ್ ಮೇಟಿ, ಮಂಜುಳಾ ಅಂಬರೀಶ್ ಕರಡಿ, ರಶ್ಮಿ ರಾಜಶೇಖರ್ ಹಿಟ್ನಾಳ, ಲಕ್ಷ್ಮಿ ದೇವಿ ಸಿ.ವಿ. ಚಂದ್ರಶೇಖರ್, ಸುನಂದಾ ಈಶಪ್ಪ ಗದ್ದಿಕೇರಿ, ಸರ್ವಮಂಗಳ ಪಾಟೀಲ್, ಶಿವಗಂಗಾ ಭೂಮ್ಮಕ್ಕನವರ್, ಜ್ಯೋತಿ ಎಂ ಗೊಂಡಬಾಳ, ಲತಾ ಚಿನ್ನೂರ, ಶಕುಂತಲಾ ಹುಡೇಜಾಲಿ, ಕೋಮಲ ಕುದುರಿಮೋತಿ, ಅನ್ನಪೂರ್ಣ ಮನ್ನಾಪುರ, ಮಹಾಲಕ್ಷ್ಮಿ ಕಂದಾರಿ ಇತರರು ಭಾಗವಹಿಸುವರು. ಮಧ್ಯಾಹ್ನ ಉಡಿ ತುಂಬ ಕಾರ್ಯಕ್ರಮ ನಂತರ ಭಕ್ತಿ ಸಂಗೀತ ಕಾರ್ಯಕ್ರಮ ಜನಪದ ಸಂಗೀತ ಸಂಜೆ ಧಾರ್ಮಿಕ, ಅಮೃತ ಮತ್ತು ಕೃಷಿ ಚಿಂತನ ಕಾರ್ಯಕ್ರಮ ಜರುಗುವದು. ನಾಡೋಜ ಶ್ರೀ ಅನ್ನದಾನೇಶ್ವರ ಮಹಾಸ್ವಾಮಿಗಳು, ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಸಾಂಗ್ಲಿಯ ಶ್ರೀ ಅಮೃತಾನಂದ ಮಹಾಸ್ವಾಮಿಗಳು, ಹಿರೇಸಿಂದೋಗಿ ಶ್ರೀ ಚಿದಾನಂದ ಮಹಾಸ್ವಾಮಿಗಳು, ಮೈನಳ್ಳಿಯ ಶ್ರೀ ಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಚೈತನ್ಯಾನಂದ ಮಹಾಸ್ವಾಮಿಗಳ ಜೊತೆಗೆ ಶ್ರೀ ಶಿವರಾಮ ಕೃಷ್ಣಾನಂದರು, ಶ್ರೀ ಶ್ರೀನಿವಾಸ್ ಜೋಶಿ, ಮೋಹನ್ ಪುರೋಹಿತರು, ಶ್ರೀ ಗವಿಸಿದ್ದಯ್ಯ ಹಿರೇಮಠ ಪೂಜ್ಯರ ನೇತೃತ್ವದಲ್ಲಿ ಕೂಡ್ಲಿಗಿಯ ಕೃಷಿ ಪಂಡಿತ ಹುಲಿಕೆರೆ ವಿಶ್ವೇಶ್ವರ ಸಜ್ಜನ್ ಅವರ ಕೃಷಿ ಚಿಂತನ ಕಾರ್ಯಕ್ರಮ ನಡೆಯುವುದು. ಈ ಚಿಂತನ ಕಾರ್ಯಕ್ರಮದಲ್ಲಿ ಸಂಸದ ರಾಜಶೇಖರ್ ಹಿಟ್ನಾಳ, ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಶಾಸಕರಾದ ಹಾಲಪ್ಪಾಚಾರ್, ಕೆ. ಬಸವರಾಜ ಹಿಟ್ನಾಳ, ಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ, ಬಿಜೆಪಿ ಮುಖಂಡರಾದ ಬಸವರಾಜ್ ಕ್ಯಾವಟರ್, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಪ್ರಾಧಿಕಾರ ಅಧ್ಯಕ್ಷ ಶ್ರೀನಿವಾಸ್ ಗುಪ್ತಾ, ಮಾಜಿ ಜಿ.ಪಂ. ಅಧ್ಯಕ್ಷರಾದ ಎಚ್.ಎಲ್. ಹಿರೇಗೌಡ್ರು ಮತ್ರು ಎಸ್. ಬಿ. ನಾಗರಳ್ಳಿ, ಮುಖಂಡರಾದ ಶಾಂತಣ್ಣ ಮುದುಗಲ್, ಅಂದಾನಪ್ಪ ಅಗಡಿ, ಮಹೇಂದ್ರ ಚೋಪ್ರಾ, ಬಾಲಚಂದ್ರನ್ ಇತರರು ಭಾಗವಹಿಸುವರು. ನಂತರ ಭಕ್ತಿ ಸಂಗೀತ ಶ್ರೀ ಗವಿಸಿದ್ದೇಶ್ವರ ಸಂಚಾರ ಕಲಾತಂಡ ಗವಿಮಠ ಇವರಿಂದ ಜರುಗುವುದು ಎಂದು ಶ್ರೀ ಗ್ರಾಮದೇವತೆ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.




