
ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಲಿಟಲ್ ಹಾರ್ಟ್ ಶಾಲೆಯ ವಿದ್ಯಾರ್ಥಿ ರಾಜ್ಯಮಟ್ಟದಿಂದ ರಾಷ್ಟ್ರಮಟ್ಟದಲ್ಲಿ ಪ್ರಥಮ ಗೆಲುವು ಸಾಧಿಸಲಿ: ಕ್ಷೇತ್ರಶಿಕ್ಷಣಾಧಿಕಾರಿ ಬಿ.ನಟೇಶ

May the student of Little Heart School achieve his first victory at the state level and national level in the athletics event: Field Education Officer B. Natesha
ಗಂಗಾವತಿ: ನಗರದ ಪ್ರತಿಷ್ಠಿತ ಶಾಲೆಯಾದ ಲಿಟಲ್ ಹಾರ್ಟ್ ಶಾಲೆಯ ವಿದ್ಯಾರ್ಥಿ ಕುಮಾರ ರಾಕೇಶ ಶಾಲಾ ಶಿಕ್ಷಣ ಇಲಾಖೆಯಿಂದ ಹಾಸನದಲ್ಲಿ ಆಯೋಜಿಸಲಾಗಿದ್ದ 14 ವರ್ಷದ ಒಳಗಿನ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಕೊಪ್ಪಳ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಲಿಟಲ್ ಹಾರ್ಟ್ಸ್ ಶಾಲೆಯ 8 ನೇ ತರಗತಿಯ ವಿದ್ಯಾರ್ಥಿ ಕುಮಾರ ರಾಕೇಶ 80 ಮೀ ಅಡೆತಡೆ ಓಟದಲ್ಲಿ (ಹರ್ಡೇಲ್ಸ್) 12.18 ಸೆಕೆಂಡ್ ನಲ್ಲಿ ಗುರಿಯನ್ನು ಮುಟ್ಟಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ನಟೇಶ ಅವರು ಮಾತನಾಡಿ ಲಿಟಲ್ ಹಾರ್ಟ್ ಶಾಲೆಯ ವಿದ್ಯಾರ್ಥಿ ಕುಮಾರ ರಾಕೇಶ ಅಡೆತಡೆ ಓಟದಲ್ಲಿ ಕೊಪ್ಪಳ ಜಿಲ್ಲೆಯಿಂದ ರಾಜ್ಯಮಟ್ಟದ ಆಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಮೊಟ್ಟ ಮೊದಲ ವಿದ್ಯಾರ್ಥಿಯಾಗಿ ಕೊಪ್ಪಳ ಜಿಲ್ಲೆಯಲ್ಲೇ ಇತಿಹಾಸ ಸೃಷ್ಟಿಸಿದ ಈ ವಿದ್ಯಾರ್ಥಿಯು ಡಿಸೆಂಬರ್ 14ರಂದು ನಡೆಯುವ ರಾಷ್ಟ್ರಮಟ್ಟದ ಅಥೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆಯಲಿ ಈ ವಿದ್ಯಾರ್ಥಿಗೆ ಶಿಕ್ಷಣ ಇಲಾಖೆಯಿಂದ ಲಿಟಲ್ ಹಾರ್ಟ್ ಶಾಲೆಯ ಮುಖ್ಯಸ್ಥರಿಗೂ ಕಾರ್ಯದರ್ಶಿಗಳಿಗೂ ಸಿಬ್ಬಂದಿ ವರ್ಗದವರಿಗೂ ಶುಭ ಹಾರೈಸಿದರು.
ಶಾಲೆಯ ಮುಖ್ಯಸ್ಥರಾದ ಜಗನ್ನಾಥ ಆಲಂಪಲ್ಲಿ ಮಾತನಾಡಿ ಕೊಪ್ಪಳ ಜಿಲ್ಲೆಯಿಂದ ಪ್ರತಿನಿಧಿಸಿದ್ದ ಕ್ರೀಡಾಪಟುಗಳಲ್ಲಿ ಕೇವಲ ಈ ಒಬ್ಬ ವಿದ್ಯಾರ್ಥಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ನಮ್ಮ ಶಾಲೆಗೆ ಮತ್ತು ಕೊಪ್ಪಳ ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ನಮ್ಮ ಶಾಲೆಗೆ ಸಹಕರಿಸಿದ ಶಾಲಾ ಸಿಬ್ಬಂದಿ ವರ್ಗದವರಿಗೂ ಮತ್ತು ಪಾಲಕರಿಗೂ ಧನ್ಯವಾದ ಜೊತೆಗೆ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ ನಮ್ಮ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ ಕುಮಾರ ರಾಕೇಶ ವಿದ್ಯಾರ್ಥಿಗೆ ಅಭಿನಂದನೆ ತಿಳಿಸಿದರು.
ಶಾಲೆಯ ಮುಖ್ಯೋಪಾಧ್ಯಾಯನಿ ಶ್ರೀಮತಿ ಪ್ರಿಯಾ ಕುಮಾರಿ ಮಾತನಾಡಿ ನಗರದ ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಈ ವಿದ್ಯಾರ್ಥಿಯ ಸ್ನೇಹಿತರು. ಶಾಲಾ ಶಿಕ್ಷಕರು ಸಾಧನೆಗೈದ ಈ ವಿದ್ಯಾರ್ಥಿಯನ್ನು ತೆರೆದ ವಾಹನದಲ್ಲಿ ನಿಲ್ಲಿಸಿ ಅದ್ದೂರಿ ಮೆರವಣಿಗೆಯೊಂದಿಗೆ ಶಾಲೆಗೆ ಕರೆತರಲಾಯಿತು.ಶಾಲೆಯಲ್ಲಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಟಿ.ಪಿ.ಒ ರವರು ಆಗಮಿಸಿ ವಿದ್ಯಾರ್ಥಿಯ ಸಾಧನೆಯನ್ನು ಕೊಂಡಾಡಿ ರಾಷ್ಟ್ರೀಯ ಮಟ್ಟದಲ್ಲೂ ಈ ವಿದ್ಯಾರ್ಥಿ ಯಶಸ್ಸು ಗಳಿಸಲಿ ಎಂದು ಶುಭ ಕೋರಿದರು.ಮತ್ತು ಈ ವಿದ್ಯಾರ್ಥಿಗೆ ಪ್ರತಿನಿತ್ಯ ತರಬೇತಿ ನೀಡಿದ ಶಾಲೆಯ ದೈಹಿಕ ಶಿಕ್ಷಕರಾದ ಸೋಮಶೇಖರ ಹಾಗೂ ಛತ್ರಪ್ಪ ರವರನ್ನು ಮತ್ತು ಶಾಲೆಯ ಮುಖ್ಯಸ್ಥರಿಗೆ ಸಿಬ್ಬಂದಿ ವರ್ಗದವರಿಗೆ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕ ವರ್ಗದವರು ಮತ್ತು ಸಿಬ್ಬಂದಿ ವರ್ಗದವರು ಪಾಲಕರು ಉಪಸ್ಥಿತರಿದ್ದರು.


