೯ ವರ್ಷದ ಬಳಿಕ ಕಾತರಕಿ ದ್ಯಾಮಮ್ಮದೇವಿ ಜಾತ್ರೆಗೆ ಸಿದ್ಧತೆ ಜೋರು
Preparations in full swing for Kataraki Dyamammadevi fair after 9 years

ಕೊಪ್ಪಳ: ತಾಲೂಕಿನ ತುಂಗಭದ್ರಾ ಹಿನ್ನೀರ ಗ್ರಾಮ ಕಾತರಕಿಯ ಗ್ರಾಮ ದೇವತೆ ಶ್ರೀ ದ್ಯಾಮಮ್ಮದೇವಿಯ ಜಾತ್ರಾ ಮಹೋತ್ಸವ ಇದೇ ೨೩ ರಿಂದ ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆಯುತ್ತಿದ್ದು ಅದಕ್ಕಾಗಿ ಭರದ ಸಿದ್ಧತೆಗಳು ಆರಂಭಗೊAಡಿವೆ.
ದ್ಯಾಮಮ್ಮದೇವಿ ದೇವಸ್ಥಾನದ ಮುಂದೆ ಬೋರ್ ಕೊರೆಸುವದು, ಮೂರು ದಿನಗಳ ಕಾಲ ನಡೆಯುವ ಜಾತ್ರೆಗೆ ಬಂದ ಭಕ್ತರಿಗೆ ಮೂರು ಹೊತ್ತು ಊಟ ಪ್ರಸಾದ ಸಿದ್ಧಪಡಿಸಲು ಕಟ್ಟಿಗೆ ಹಾಗೂ ದವಸ ಧಾನ್ಯಗಳನ್ನು ಸುಚಿಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ, ಊರಿನ ಅನೇಕ ಜನ ಮಹಿಳೆಯರು ಪುರುಷರು ಸ್ವಯಂಪ್ರೇರಿತವಾಗಿ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಈ ಎರಡೂ ಕಾರ್ಯಕ್ರಮಗಳಿಗೆ ಪೂಜೆ ಮಾಡುವ ಮೂಲಕ ಊರಿನ ಹಿರಿಯರು ಚಾಲನೆ ನೀಡಿದರು. ಕೊಪ್ಪಳದ ಭಾಗ್ಯನಗರ ಈಗ ಅತ್ಯಂತ ದೊಡ್ಡದಾಗಿ ಬೆಳೆದಿದ್ದು, ಅವರೆಲ್ಲರೂ ಕಾತರಕಿ ಇಂದ ಬಂದ ಜನರಾಗಿದ್ದಾರೆ, ಹಾಗಾಗಿ ಭಾಗ್ಯನಗರ ದೊಡ್ಡ ಬಳಗವೂ ಸೇರಿದಂತೆ ಅನೇಕ ಊರುಗಳಲ್ಲಿ ವಾಸವಾಗಿರುವ ಜನರು ಈ ಜಾತ್ರೆಗೆ ಬರುತ್ತಿದ್ದು ಹಬ್ಬದ ಸಂಭ್ರಮ ಮನೆ ಮಾಡಿದೆ. ಮೂರು ದಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ. ಅಧ್ಯಕ್ಷ ಹೆಚ್. ಎಲ್. ಹಿರೇಗೌಡ್ರ, ಮುಖಂಡರಾದ ವೆಂಕನಗೌಡ್ರ ಹಿರೇಗೌಡ್ರ, ಕೊಟ್ರಯ್ಯ ಅಬ್ಬಿಗೇರಿ, ಶಂಕ್ರಗೌಡ್ರ ಹಿರೇಗೌಡ್ರ, ಮಲ್ಲಣ್ಣ ಗುಗ್ರಿ, ಕೃಷ್ಣಪ್ಪ ಬಟಗೇರಿ, ಡಾ. ಸುರೇಶ ಹುರಕಡ್ಲಿ, ವಿಶ್ವನಾಥ ಕಂಪ್ಲಿ, ಮಂಜುನಾಥ ಮೇಟಿ, ನಾಗರಾಜ ಹುರಕಡ್ಲಿ, ಈಶ್ವರಗೌಡ್ರ ನಾಗನಗೌಡ್ರ, ಬಸವರಾಜ ಹಿರೇಮಠ, ಸುಭಾಸ ಬೈರಣ್ಣ, ಈಶಪ್ಪ ಹೊಳೆಯಪ್ಪÀನವರ, ನಾಯಕಪ್ಪ ತಳವಾರ, ತಿಪ್ಪಣ್ಣ ವಡ್ಡಿನ, ಸಿದ್ರಾಮಪ್ಪ ಗೊಶನಗೌಡ್ರ, ಜಗದೀಶ ಪೋಲಿಸಪಾಟೀಲ್, ಬಸವರಾಜ ಹುಬ್ಬಳ್ಳಿ, ಯೊಗಾನಂದ ಹೊಳೆಯಪ್ಪನವರ, ವೆಂಕಪ್ಪ ಕೊರಗಲ್, ಸುರೇಶ ತಳವಾರ, ವಿಜಯಲಕ್ಷಿö್ಮ ಹಿರೇಮಠ, ಪದ್ಮಾವತಿ ಹಿರೇಗೌಡ್ರ, ಹಂಪಮ್ಮ ಅಬ್ಬಿಗೇರಿಮಠ, ನೀಲಮ್ಮ ಹುರಕಡ್ಲಿ, ಶೈಲಮ್ಮ ಕನಕಗಿರಿ ಶಟ್ರು, ಗವಿಸಿದ್ಧಪ್ಪ ಅರಿಕೇರಿ, ಸಂಗಪ್ಪ ಕನಕಲ, ಯರಿಯಪ್ಪಗೌಡ, ರಾಜು ಬೈರಣ್ಣ, ಶಂಕ್ರಪ್ಪ ಹುರಕಡ್ಲಿ ಸೇರಿದಂತೆ ಅನೇಕರು ಇದ್ದರು.
Kalyanasiri Kannada News Live 24×7 | News Karnataka
