ಕಾಂಗ್ರೆಸ್ ಕಛೇರಿಯಲ್ಲಿ ಇಂದಿರಾಗಾಂಧಿ ಜನ್ಮ ದಿನಾಚರಣೆ
Indira Gandhi's birthday celebrated at Congress office
ಕೊಪ್ಪಳ: ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಜ್ಯೋತಿ ಎಂ. ಗೊಂಡಬಾಳ ಅವರು, ಇಂದಿರಾ ಗಾಂಧಿ ಅವರು ದೇಶಕ್ಕೆ ನಂದಾ ದೀಪ ಇದ್ದ ಹಾಗೆ, ಕಾಂಗ್ರೆಸ್ ಮತ್ತು ದೇಶ ಅವರನ್ನು ಸದಾ ಸ್ಮರಿಸಬೇಕು. ಅವರು ಕೊಟ್ಟಿರುವ ಯೋಜನೆಗಳೇ ಇಂದಿಗೂ ನಡೆದುಕೊಂಡು ಹೋಗುತ್ತಿವೆ. ಅವರ ಅಭಿವೃದ್ಧಿ ಸೂಚಿ ಕಾರ್ಯಗಳು ಅವರ ದೂರದೃಷ್ಟಿತ್ವಕ್ಕೆ ಸಾಕ್ಷಿ. ಅವರ ಧೈರ್ಯಕ್ಕೆ ವಿರೋಧ ಪಕ್ಷದವರೇ ದುರ್ಗಿ ಸಿಂಹಿಣಿ ಎಂದಿದ್ದರು ಎಂದರು.
ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ಸುರೇಶ ದಾಸರಡ್ಡಿ ಮಾತನಾಡಿ, ಇಂದಿರಾ ಗಾಂಧಿ ವ್ಯಕ್ತಿತ್ವವನ್ನು ಇಂದಿನ ರಾಜಕಾರಣಿಗಳಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ ಇಂದಿರಾಜಿ ಅವರ ಸುಧಾರಣಾ ನೀತಿಗಳು, ಪಂಚವಾರ್ಷಿಕ ಯೋಜನೆಗಳ ಶೈಲಿ ಮತ್ತು ವಿದೇಶಿ ಶತ್ರುಗಳನ್ನು ಹಿಮ್ಮೆಟ್ಟಿಸಿದ ರೀತಿ ಅಭಿನಂದನಾರ್ಹ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣಾ ಇಟ್ಟಂಗಿ ಮತ್ತು ಅಕ್ಬರ್ ಪಾಶಾ ಪಲ್ಟನ್, ನಗರಸಭೆ ಸದಸ್ಯರಾದ ಬಸಯ್ಯ ಹಿರೇಮಠ, ನಗರ ಬ್ಲಾಕ್ ಅಧ್ಯಕ್ಷ ಕಾಟನ್ ಪಾಶಾ, ಪ್ರಚಾರ ಸಮಿತಿ ನಗರ ಅಧ್ಯಕ್ಷ ಶರಣಪ್ಪ ಸಜ್ಜನ, ಜಿ. ಪಂ. ಮಾಜಿ ಸದಸ್ಯ ಪ್ರಸನ್ನ ಗಡಾದ, ಜಿಲ್ಲಾ ಯುವ ಘಟಕ ಮಾಜಿ ಅಧ್ಯಕ್ಷ ಗವಿಸಿದ್ದನಗೌಡ ಪಾಟೀಲ, ಮಹಿಳಾ ಮುಖಂಡರಾದ ಕಿಶೋರಿ ಬೂದನೂರ, ಪದ್ಮಾವತಿ ಕಂಬಳಿ, ಮಲ್ಲಿಕಾರ್ಜುನ ಪೂಜಾರ, ಸಾವಿತ್ರಿ ಗೊಲ್ಲರ, ಫರಿದಾ ತಂಬಾಕದವರ, ಸೌಭಾಗ್ಯ ಗೊರವರ, ಗಂಗಮ್ಮ ತಳವಾರ, ಮಂಜುಳಾ ಉಂಡಿ, ಶಿಲ್ಪಾ ಗುಡ್ಲಾನೂರ, ಅಂಜಲಿ ಇತರರು ಇದ್ದರು.
Kalyanasiri Kannada News Live 24×7 | News Karnataka
