ಬೈಕ್ ಸವಾರರ ಮೇಲೆ ಕಾಡಾನೆ ದಾಳಿ; ಓರ್ವ ಸಾವು, ಮತ್ತೋರ್ವ ಪಾರ.
Wild elephant attacks bikers; one dead, another escapes
ವರದಿ : ಬಂಗಾರಪ್ಪ .ಸಿ.
ಹನೂರು :ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ
ಬೈಕ್ನಲ್ಲಿ ತೆರಳುತ್ತಿದ್ದಾಗ ಏಕಾಏಕಿ ಕಾಡಾನೆ ದಾಳಿ ಮಾಡಿದ್ದು, ಘಟನೆಯಲ್ಲಿ ಓರ್ವ ಮೃತಪಟ್ಟರೆ, ಮತೊಬ್ಬ ಸ್ವಲ್ಪದರಲ್ಲೇ ಪಾರಾಗಿದ್ದಾರೆ.
ಮೃತ ವ್ಯಕ್ತಿಯು ಕೇತೆಗೌಡ ಅವರ ಪುತ್ರ ಜಡೇಸ್ವಾಮಿಗೆ ಸರ್ಕಾರದ ವತಿಯಿಂದ ಮೊದಲ ಹಂತದ ಪರಿಹಾರ 5 ಲಕ್ಷದ ಚೆಕ್ ವಿತರಣೆ: ಬೈಕ್ ಸವಾರರ ಮೇಲೆ ಕಾಡಾನೆ ದಾಳಿ ನಡೆಸಿ ಓರ್ವನನ್ನು ಬಲಿ ಪಡೆದ ಘಟನೆ ಹನೂರು ತಾಲೂಕಿನ ನೆಲ್ಲಿಕತ್ರಿಯಲ್ಲಿ ಮಂಗಳವಾರ ನಡೆದಿದೆ. ತಾಲೂಕಿನ ಪಿ.ಜಿ. ಪಾಳ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೊಂಬೆಗಲ್ಲು ಗ್ರಾಮದ ಕೇತೆಗೌಡ ಆನೆ ದಾಳಿಯಿಂದ ಮೃತಪಟ್ಟಿರುವ ವ್ಯಕ್ತಿ.
ಗೊಂಬೆಗಲ್ಲು ಗ್ರಾಮದಿಂದ ಕಾರ್ಯನಿಮಿತ್ತ ಒಡೆಯರ ಪಾಳ್ಯಕ್ಕೆ ಬೈಕ್ನಲ್ಲಿ ತೆರಳುತ್ತಿದ್ದಾಗ ನೆಲ್ಲಿಕತ್ರಿ ಸಮೀಪ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಪರಿಣಾಮ ಕೇತೆಗೌಡ ಸ್ಥಳದಲ್ಲೇ ಮೃತಪಟ್ಟಿದ್ದು, ಕೊಲ್ಲ @ ವೀರೇಗೌಡ ಎಂಬವರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬಿ ಆರ್ ಟಿ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್ ಶ್ರೀಪತಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮರಣೋತ್ತರ ಪರೀಕ್ಷೆಗೆ ಹನೂರು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿದ್ದ ಸಂದರ್ಭದಲ್ಲಿ ಮೃತ ಕೇತೆಗೌಡ ಅವರ ಪುತ್ರ ಜಡೇಸ್ವಾಮಿಗೆ ಸರ್ಕಾರದ ವತಿಯಿಂದ ಮೊದಲ ಹಂತದ ಪರಿಹಾರ 5 ಲಕ್ಷದ ಚೆಕ್ ಅನ್ನು ಡಿಸಿಎಫ್ ಶ್ರೀಪತಿ ಹಾಗೂ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ರಾಜೇಶ್ ಸಮ್ಮುಖದಲ್ಲಿ ವಿತರಣೆ ಮಾಡಲಾಯಿತು.
ಚೆಕ್ ವಿತರಣೆ ಬಳಿಕ ಡಿಸಿಎಫ್ ಶ್ರೀಪತಿ ಅವರು ಮಾತನಾಡಿ, ಕೇತೆಗೌಡರು ಕಾಡಾನೆ ದಾಳಿಯಿಂದ ಮೃತಪಟ್ಟಿರುವುದು ನೋವನ್ನುಂಟು ಮಾಡಿದೆ. ಸರ್ಕಾರದ ವತಿಯಿಂದ 20 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ. ಮೊದಲ ಹಂತದಲ್ಲಿ 5 ಲಕ್ಷ ಪರಿಹಾರ ನೀಡಲಾಗಿದ್ದು, ದಾಖಲಾತಿ ಹಾಗೂ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಉಳಿದ 15 ಲಕ್ಷ ಹಣ ನೀಡಲಾಗುತ್ತದೆ. ಪರಿಹಾರದ ಹಣವನ್ನು ಪೋಲು ಮಾಡದೆ ತಮ್ಮ ಮಕ್ಕಳ ಹೆಸರಿನಲ್ಲಿ ಬ್ಯಾಂಕ್ ಖಾತೆಯಲ್ಲಿ ಠೇವಣಿ ಇರಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಸಲಹೆ ನೀಡಿದರು, ಇದೇ ಸಮಯದಲ್ಲಿ ಅಧಿಕಾರಿಗಳಾದ ರಾಜೇಶ್ ,ವೃತ್ತ ನಿರೀಕ್ಷಕರಾದ ಆನಂದ ಮೂರ್ತಿ , ಮುಖಂಡರುಗಳಾದ ಚಂದ್ರಪ್ಪ . ಸೇರಿದಂತೆ ಇನ್ನಿತರರು ಹಾಜರಿದ್ದರು.
Kalyanasiri Kannada News Live 24×7 | News Karnataka
