
ಕಟ್ಟಡ ಇತರೆ ನರ‍್ಮಾಣ ಕರ‍್ಮಿಕರ ಆನ್ಲೈನ್ ರ‍್ಜಿ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿ. ರ‍್ಕಾರ ಘೋಷಿಸಿದ ಎಲ್ಲಾ ಸೌಲಭ್ಯಗಳನ್ನು ಕೂಡಲೇ ಜಾರಿ ಮಾಡಿ

Resolve the technical issue of online registration of building and other construction workers. Immediately implement all the facilities announced by the government.

ಕೊಪ್ಪಳ :ಎ ಐ ಯು ಟಿ ಯು ಸಿ ಗೆ ಸಂಯೋಜಿತಗೊಂಡಿರುವ ರ‍್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕರ‍್ಮಿಕರ ಸಂಘದಿಂದ ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಯಿತು. ಈ ಪ್ರತಿಭಟನೆ ಉದ್ದೇಶಿಸಿ ಸಂಘಟನೆ ಜಿಲ್ಲಾ ಸಂಚಾಲಕರಾದ ಶರಣು ಗಡ್ಡಿ ಮಾತನಾಡಿ ಸಂಘವು ನಿರಂತರ ಕರ‍್ಮಿಕರ ಸಮಸ್ಯೆಗಳ ಕುರಿತು ಹೋರಾಟ ಕಟ್ಟುತ್ತಿದೆ. ಕರ‍್ಮಿಕರು ಹಲವಾರು ಇಲಾಖೆ ಸೌಲಭ್ಯಗಳಿಗೆ ರ‍್ಜಿ ಸಲ್ಲಿಸಿದಾಗ ವಿಳಂಬ ಮಾಡವುದು, ರಿನಿವಲ್ ಹೊಸ ರ‍್ಜಿಗಳನ್ನು ಸಾಮಾನ್ಯ ನೆಪ ಹೇಳಿ ರಿಜೆಕ್ಟ್ ಮಾಡವುದನ್ನು ಮಂಡಳಿ ನಿಲ್ಲಿಸಬೇಕು.
ಈ ಕುರಿತು ಹಲವಾರು ಬಾರಿ ಇಲಾಖೆ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಮಂಡಳಿ ಘೋಷಿಸಿದ ಎಲ್ಲಾ ಸಹಾಯಧನ ರ‍್ಹ ಪಲಾನುಭವಿಗಳಿಗೆ ಸೀಬೇಕೆನ್ನುವುದು ಸಂಘದಿಂದ ಒತ್ತಾಯ. ಶೈಕ್ಷಣಿಕ ಸಹಾಯಧನ, ಮದುವೆ ಸಹಾಯದನ, ಆರೋಗ್ಯ ಸಹಾಯಧನ, ಡೆಲೆವರಿ, ಇನ್ನಿತರ ಸೌಲಭ್ಯಗಳು ಸರಿಯಾದ ರೀತಿಯಲ್ಲಿ ಕರ‍್ಮಿಕರಿಗೆ ಕಾಲದ ಮಿತಿಯಲ್ಲಿ ಒದಗಿಸಬೇಕು. ಕರ‍್ಮಿಕರಿಗೆ ರ‍್ಕಾರದಿಂದ ಘೋಷಿಸಿದ ಎಲ್ಲಾ ಸೌಲಭ್ಯಗಳನ್ನು ಕೂಡಲೇ ಒದಗಿಸಬೇಕೆಕು.
ಇತ್ತೀಚೆಗೆ ಮಂಡಳಿವು ಹೊಸ ಸಾಫ್ಟ್ವೇರ್ ಅಳವಡಿಸಿ ಕರ‍್ಮಿಕ ರ‍್ಜಿಸಲ್ಲಿಸಲು ಹೇಳಿದೆ. ಆದರೆ ತಾಂತ್ರಿಕ ಸಮಸ್ಯೆಗಳಿಂದ ರ‍್ಜಿ ಹಾಕಲು ಆಗುತ್ತಿಲ್ಲ . ಎಷ್ಟೋ ಕರ‍್ಮಿಕರು ಈ ಸಮಸ್ಯೆಯಿಂದ ತಮಗೆ ಬೇಕಾದ ಸೌಲಭ್ಯ ಪಡೆಯಲು, ನೋಂದಣಿ ಮಾಡಿಸಲು ಮತ್ತು ರಿನಿವಲ್ ಮಾಡಿಸದೆ ವಂಚಿತರಾಗುವ ಕರ‍್ಮಿಕರಿಗೆ ರ‍್ಯಾಯ ವ್ಯವಸ್ಥೆ ಕೂಡಲೇ ಕಲ್ಪಿಸಬೇಕು.ತಾಂತ್ರಿಕ ಸಮಸ್ಯೆಗಳ ನೆಪ ಹೇಳದೆ ಪ್ರತಿಯೊಬ್ಬ ಕರ‍್ಮಿಕನಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ವ್ಯವಸ್ಥೆ ಜಾರಿ ಮಾಡಬೇಕು. ಇಲಾಖೆ ಮತ್ತು ರ‍್ಕಾರ ಕರ‍್ಮಿಕರಿಗೆ ಒದಗಿಸುವ ಸುರಕ್ಷತೆ ಇನ್ನಿತರ ಕಳಪೆ ಮಟ್ಟದ ಕಿಟ್ಟುಗಳನ್ನು ವಿತರಿಸಲಾಗಿದೆ. ಕಿಟ್ಟಗಳ ವಿತರಣೆಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು ಕೂಡಲೇ ಉನ್ನತ ತನಿಖೆ ಆಗಬೇಕು. ಇಲಾಖೆಯಲ್ಲಿ ಆಗುತ್ತಿರುವ ಅವ್ಯವಹಾರ ಭ್ರಷ್ಟಾಚಾರವನ್ನು ನಿಯಂತ್ರಣ ಮಾಡಬೇಕು ಇಲ್ಲವಾದರೆ ಕರ‍್ಮಿಕರಿಗೆ ಮೀಸಲಿಟ್ಟ ಹಣ ಪೋಲಾಗುತ್ತದೆ.
ಮಂಡಳಿವು ಕರ‍್ಮಿಕರ ಹಣವನ್ನು ಬೇರೆ ಬೇರೆ ರೀತಿಯಲ್ಲಿ ಪೋಲು ಮಾಡುವುದನ್ನು ನಿಲ್ಲಿಸಿ ಕಟ್ಟಡ ಕರ‍್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಕೂಡಲೇ ಜಾರಿ ಮಾಡಬೇಕು. ಎಲ್ಲ ಬೇಡಿಕೆಗಳು ಕೂಡಲೇ ಈಡೇರಿಸಬೇಕೆಂದು ಸಂಘವು ಮನವಿ ಮಾಡುತ್ತದೆ. ಮುಂದಿನ ದಿನಗಳಲ್ಲಿ ಉನ್ನತ ಹಂತದ ಹೋರಾಟ ಮಾಡಲಾಗುವುದು ಎಂಬ ಸಂದೇಶವನ್ನು ಈ ಮೂಲಕ ತಿಳಿಸುತ್ತದೆ ಎಂದು ಹೇಳಿದರು.
ಈ ಸಂರ‍್ಭದಲ್ಲಿ ಜಿಲ್ಲಾ ಕರ‍್ಮಿಕ ಅಧಿಕಾರಿಗಳ ಪರವಾಗಿ ಹೇಮಂತ್ ಸಿಂಗ್ ಅವರು ಮನವಿ ಸ್ವೀಕರಿಸಿದರು. ಕಟ್ಟಡ ಕರ‍್ಮಿಕರ ಮುಖಂಡರಾದ ನಾಗರಾಜ್ ಹುಲಿಗಿ, ರಾಮಲಿಂಗ ಶಾಸ್ತ್ರಿ,ಶರಣಪ್ಪ, ಶಬ್ಬೀರ್ ಕುಲಿಮಿ, ರಾಜೇಶ್, ಸಿದ್ದಪ್ಪ, ಎಲ್ಲಪ್ಪ ಬೋಚನಹಳ್ಳಿ, ಗಂಗಮ್ಮ, ಹುಸೇನ್ ಭಾಷಾ, ರಾಮಣ್ಣ, ಕಟ್ಟೆಪ್ಪ ಭಾಗ್ಯನಗರ, ಮುಂತಾದ ಕರ‍್ಮಿಕರು ಭಾಗವಹಿಸಿದ್ದರು.




