ಕೊಲ್ಲಿನಾಗೇಶ್ವರರಾವ್ ಸರಕಾರಿ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಡಾ.ಗುರಿಕಾರ ಅಧಿಕಾರ ಸ್ವೀಕಾರ
Dr. Gurikar assumes office as the Principal of Kollinageshwara Rao Government College

ಗಂಗಾವತಿ: ನಗರದ ಕೊಲ್ಲಿನಾಗೇಶ್ವರರಾವ ಸರಕಾರಿ ಮಹಾವಿದ್ಯಾಲಯದ ಪ್ರಭಾರಿ ಪ್ರಾಚಾರ್ಯರಾಗಿ ಭೌತಶಾಸ್ತ್ರದ ಹಿರಿಯ ಪ್ರಾಧ್ಯಾಪಕರಾದ ಡಾ.ಶಿವರಾಜ್ ಗುರಿಕಾರ ಅವರು ಜೆ.ಕೃಷ್ಣ ಅವರಿಂದ ಪ್ರಭಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ನಮ್ಮ ಕಾಲೇಜಿಗೆ ಜಿಲ್ಲೆಯಲ್ಲಿ ಹೆಸರಿದ್ದು ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುವ ಕಾಲೇಜಿನಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್ಗಳಿದ್ದು ಶಾಸಕರು ಸೇರಿ ಎಲ್ಲಾ ಚುನಾಯಿತ ಪ್ರತಿನಿಧಿಗಳು ಮತ್ತು ಹಿರಿಯ ಪ್ರಾಧ್ಯಾಪಕರು, ಉಪನ್ಯಾಸಕರ ಸಹಕಾರದಲ್ಲಿ ಕಾಲೇಜಿನಲ್ಲಿ ಮೂಲಸೌಕರ್ಯ ಕಲ್ಪಿಸಲಾಗುತ್ತದೆ. ಗ್ರಂಥಾಲಯವನ್ನು ವಿದ್ಯಾರ್ಥಿಗಳ ಹೆಚ್ಚಿನ ಬಳಕೆಗೆ ಅನುಕೂಲ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಪ್ರಾಧ್ಯಾಪಕರಾದ ಡಾ.ಮಮ್ತಾಜ್ ಬೇಗಂ, ಅಣ್ಣೋಜಿ ರೆಡ್ಡಿ, ಫಣಿರಾಜ್, ಇಬ್ರಾಹಿಂ, ಮಂಜುನಾಥ ಬಳ್ಳಪೂರ, ಶೋಭಾ, ಅಕ್ಕಿ ಮಾರುತಿ,ರವಿ ಕಂಪ್ಯೂಟರ್, ದೊರೆಬಾಬು, ಕೆ.ರವಿ, ವ್ಯವಸ್ಥಾಪಕಿ ರಾಘಮ್ಮ, ಪ್ರತಿಭಾ ಸೇರಿ ಅತಿಥಿ ಉಪನ್ಯಾಸಕರಿದ್ದರು.
Kalyanasiri Kannada News Live 24×7 | News Karnataka
