ಅಧಿಕಾರಿಗಳಿಂದ ದಾಳಿ ಪರಾರಿಯಾದ ನಕಲಿ ವೈದ್ಯ.
Fake doctor escapes arrest by authorities.
ಕನಕಗಿರಿ: ಔಷಧ ಮಾರಾಟ ಪರವಾನಿಗೆ ಇಲ್ಲದೆ ಔಷಧ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಆದರೂ ತಾಲೂಕಿನ ಜೀರಾಳ ಕಲ್ಗುಡಿ ಗ್ರಾಮದಲ್ಲಿ ಅಭಿಕುಮಾರ ಎಂಬ ಬಂಗಾಳಿ ಮೂಲದ ನಕಲಿ ವೈದ್ಯ ಅಲೋಪತಿ ಔಷಧಗಳ ಮಾರಾಟದಲ್ಲಿ ಹಲವು ವರ್ಷಗಳಿಂದ ನಿರತನಾಗಿದ್ದಾನೆ.ಈ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದರ ಹಿನ್ನೆಲೆಯಲ್ಲಿ ಬಳ್ಳಾರಿ ಮತ್ತು ಕೊಪ್ಪಳ ವೃತ್ತದ ಸಹಾಯಕ ಔಷಧ ನಿಯಂತ್ರಕರ ತಂಡ ಶುಕ್ರವಾರ ಜೀರಾಳ ಗ್ರಾಮಕ್ಕೆ ದೌಡಾಯಿಸಿತ್ತು.
ಆಸ್ಪತ್ರೆ ಮತ್ತು ತನ್ನ್ನ ಮನೆಯಲ್ಲಿ ಸಾಕಷ್ಟು ಬೆಲೆ ಉಳ್ಳ ಔಷಧಗಳನ್ನು ದಾಸ್ತಾನು ಮಾಡಿಕೊಂಡಿದ್ದ ಈ ನಕಲಿ ವೈಧ್ಯ ಗ್ರಾಮದ ಜನರು ಜಮಾ ಆಗುವಂತೆ ಮಾಡಿ, ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. ಮನೆಯಲ್ಲಿಯೂ ಔಷಧ ಸಂಗ್ರಹ ಮಾಡಿಕೊಂಡಿದ್ದರಿಂದ ನಕಲಿ ವೈಧ್ಯನ ಹೆಂಡತಿಯೂ ಅಲ್ಲಿಂದ ಪರಾರಿಯಾಗಿದ್ದಾಳೆ.
ಬಹಳಷ್ಟು ಜನ ಸೇರಿ ಸರಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದರಿಂದ ಕೊಪ್ಪಳ ವೃತ್ತದ ಸಹಾಯಕ ಔಷಧ ನಿಯಂತ್ರಕರು ಕನಕಗಿರಿ ಪೋಲೀಸ್ ಠಾಣೆಗೆ ತೆರಳಿ, ಕರ್ತವ್ಯ ನಿರ್ವಹಿಸಲು ರಕ್ಷಣೆ ಒದಗಿಸುವಂತೆ ಕೋರಿದ್ದರಿಂದ ಇಬ್ಬರು ಪೋಲೀಸ್ ಪೇದೆಗಳು ಬಂದೋ ಬಸ್ತಿಗೆ ಆಗಮಿಸಿದ್ದಾರೆ.ಅಷ್ಟೊತ್ತಿಗೆ 112 ಪೋಲೀಸ್ ಸಿಬ್ಬಂದಿಯು ಜೀರಾಳ ಗ್ರಾಮಕ್ಕೆ ಆಗಮಿಸಿದೆ.
ಆದರೂ ಅಲ್ಲಿನ ಜನ ಅಧಿಕಾರಿಗಳ ಕಾರ್ಯನಿರ್ವಣೆಗೆ ಅಡ್ಡಿ ಪಡಿಸಿದ್ದಾರೆ.ಸದ್ರಿ ನಕಲಿ ವೈದ್ಯನ ಆಸ್ಪತ್ರೆಯಲ್ಲಿ ಮತ್ತು ಮನೆಯಲ್ಲಿ ಸಂಗ್ರಹಿಸಲಾಗಿದ್ದ ಔಷಧಗಳನ್ನು ವಶಕ್ಕೆ ಪಡೆಯಲು ಅವಕಾಶ ಕೊಟ್ಟಿಲ್ಲ.
ಈ ಹಿಂದೆಯೂ ಇಂತಹುದೇ ದೂರಿನ ಹಿನ್ನೆಲೆಯಲ್ಲಿ ಕೊಪ್ಪಳ ವೃತ್ತದ ಸಹಾಯಕ ಔಷಧ ನಿಯಂತ್ರಕರು ದೂರನ್ನು ಪರಿಶೀಲಿಸಲು ಜೀರಾಳ ಗ್ರಾಮಕ್ಕೆ ಹೋದಾಗಲೂ ಇದೇ ರೀತಿಯ ಸಂಧಿಗ್ದ ಸ್ಥಿತಿಯನ್ನು ಈ ನಕಲಿ ವೈದ್ಯ ಸೃಷ್ಟಿ ಮಾಡಿ ಪರಾರಿಯಾಗಿದ್ದ.
ಗ್ರಾಮದ ಹತ್ತಾರು ಜನರನ್ನು ಕಟ್ಟಿಕೊಂಡು ಅದರಲ್ಲೂ ಕರ್ನಾಟಕದಲ್ಲಿ ಗುಂಡಾವರ್ತನೆಯಲ್ಲಿ ತೊಡಗಿರುವ ಈ ಬಂಗಾಳಿ ಮೂಲದ ವೈಧ್ಯನ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಜಿಲ್ಲಾ ಆಡಳಿತವನ್ನು ಜನರು ಒತ್ತಾಯಿಸಿದ್ದಾರೆ.
ಅಮಲು ಜಾರಿ ಅಧಿಕಾರ ಹೊಂದಿರುವ ರಾಜ್ಯ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಮುಂದಿನ ದಿನಗಳಲ್ಲಿ ನಕಲಿ ವೈದ್ಯ ಅಭಿ ಕುಮಾರ್ ಮತ್ತು ಆತನ ಬೆಂಬಲಿಗರ ಮೇಲೆ ಯಾವ ಕ್ರಮಕೈಗೊಳ್ಳುತ್ತಾರೆ ಎಂದು ಕಾಯ್ದು ನೋಡಬೇಕಾಗಿದೆ.
Kalyanasiri Kannada News Live 24×7 | News Karnataka
