ಖ್ಯಾತ ಗಾಯಕಿ ಪಿ.ಸುಶೀಲಾ ಅವರ ಜನ್ಮ ದಿನಾಚರಣೆ
Famous singer P. Sushila’s birthday celebration

ಗಂಗಾವತಿ:ನಗರದ ಶ್ರೀ ಮಾತಾ ಕೊರಕೆ ಸ್ಟುಡಿಯೋದಲ್ಲಿದಲ್ಲಿ ಖ್ಯಾತ ಗಾಯಕಿ ಪಿ.ಸುಶೀಲಾ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಗಾಯಕರು, ಗಾಯಕಿಯರು ಕೆಕ್ ಕತ್ತರಿಸಿ ಶುಭಕೋರಿದರು. ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸದಸ್ಯ ಆರ್ ಕಣ್ಣನ್ ಮಾತನಾಡಿ ಪಿ.ಸುಶೀಲ ಅವರು ಹಲವಾರು ಚಿತ್ರಗಳು ಸೇರಿದಂತೆ ದೇವರ ಹಾಡುಗಳನ್ನು ಹಾಡಿ ಖ್ಯಾತಿ ಪಡೆದಿದ್ದಾರೆ. ಇವರು ಸಂಗೀತ, ಸಾಹಿತ್ಯ ಗಾಯಕರಿಗೆ ಮಾರ್ಗದರ್ಶನವಾಗಿದೆ ಎಂದರು. ಪತ್ರಕರ್ತ ರಾಮಮೂರ್ತಿ ನವಲಿ ಮಾತನಾಡಿ ಖ್ಯಾತ ಗಾಯಕಿ ಪಿ.ಸುಶೀಲಾ ಅವರು ಸಾವಿರಾರು ಹಾಡುಗಳನ್ನು ವಿವಿಧ ಚಿತ್ರಗಳಿಗೆ ಹಿನ್ನಲೆ ನೀಡಿ ಸಾಧನೆ ಮಾಡಿದ್ದಾರೆ. ಇವರು ಸಂಗೀತ ಹಿರಿಯ, ಕಿರಿಯ ಗಾಯಕರಿಗೆ ಮಾರ್ಗದರ್ಶನ ಎಂದರು.
ವಾಣಿಜ್ಯೋದ್ಯಮಿ ಶಿವಪ್ಪ ಗಾಳಿ ಮಾತನಾಡಿ ಸ್ಟುಡಿಯೋದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ಸಹಕಾರ ನೀಡುವದಾಗಿ ಹೇಳಿದರು. ಈ ವೇಳೆ ಸ್ಪುಡಿಯೋ ಮಾಲೀಕ ಶಿವಪ್ಪ ಹುಳ್ಳಿ, ಗಾಯಕರಾದ ವೀರೇಶ್ ಪಪ್ತಿ ,ವೀರೇಶ್ ಹಿರೇಮಠ್, ಟಿ ಶಾಮಣ್ಣ ,ವಿಜಯ ಕುಮಾರ, ಮಂಜುನಾಥ ಗೋಡಿನಾಳ, ಮಂಜುನಾಥ ಬಡಿಗೇರ, ಆಜಿ ಅಲಿ ಖಾಜಿ, ಹುಸೇನ್ ಸಾಬ ಮುಳ್ಳೂರು, ಲಕ್ಕಪ್ಪ, ವಿಜಯಲಕ್ಷ್ಮೀ, ಅಂಬಿಕಾ, ಸುಧಾ , ಸಾವಿತ್ರಿ ಸೇರಿದಂತೆ ಕಲಾವಿದರು ಭಾಗವಹಿಸಿದ್ದರು.
Kalyanasiri Kannada News Live 24×7 | News Karnataka
