ಡಾ. ಶರಣಬಸಪ್ಪ ಕೋಲ್ಕಾರ ಗೆ ಸಂಶೋಧನ ಶ್ರೀ ಪ್ರಶಸ್ತಿ ಪ್ರಧಾನ:
Dr. Sharanabasappa Kolkara to be conferred with Samshodhana Shri Award

ಗಂಗಾವತಿ:ಡಾ. ಶರಣಬಸಪ್ಪ ಕೋಲ್ಕಾರ ಗೆ ಸಂಶೋಧನ ಶ್ರೀ ಪ್ರಶಸ್ತಿ ಪ್ರಧಾನ: ಕರ್ನಾಟಕ ಇತಿಹಾಸ ಅಕಾಡೆಮಿಯ 39ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಗದುಗಿನ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಈಚೆಗೆ ಜರಗಿತು. ಈ ಸಮಾರಂಭದಲ್ಲಿ ಗಂಗಾವತಿಯ ಹಿರಿಯ ಇತಿಹಾಸ ಸಂಶೋಧಕರು ಮತ್ತು ಕಲ್ಮಠ ಚನ್ನಬಸವಸ್ವಾಮಿ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ.ಶರಣಬಸಪ್ಪ ಕೋಲ್ಕಾರ್ ಅವರಿಗೆ 2025ರ ಸಾಲಿನ ಸಂಶೋಧನಾ ಶ್ರೀ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಪ್ರಶಸ್ತಿಯು ಸನ್ಮಾನ ಪತ್ರ ಮತ್ತು 25000 ನಗದು ಹಣವನ್ನು ಹೊಂದಿದೆ.
ಈ ಸಂದರ್ಭದಲ್ಲಿ ಸಚಿವರಾದ ಹೆಚ್. ಕೆ .ಪಾಟೀಲ್ ಹಿರಿಯ ಇತಿಹಾಸ ತಜ್ಞರಾದ ಡಾ. ಲಕ್ಷ್ಮಣ್ ತೆಲಗಾವಿ ,ಮಹಾತ್ಮ ಗಾಂಧಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿ ಡಾ. ಸುರೇಶ್ ವಿ ನಾಡಗೌಡರ್, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಶರಣು ಗೋಗೇರಿ, ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ರಾಜಾರಾಮ್ ಹೆಗಡೆ ,ಇತಿಹಾಸ ಅಕಾಡೆಮಿಯ ಅಧ್ಯಕ್ಷರಾದ ಡಾ .ದೇವರ ಕೊಂಡಾರೆಡ್ಡಿ, ಪ್ರಧಾನ ಕಾರ್ಯದರ್ಶಿಗಳಾದ ಕೆ ಎಲ್ ರಾಜಶೇಖರ್ ಉಪಸ್ಥಿತರಿದ್ದರು. ಪ್ರಶಸ್ತಿ ಪುರಸ್ಕೃತ ಕೋಲ್ಕಾರ್ ಅವರಿಗೆ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಕೊಟ್ಟೂರು ಮಹಾಸ್ವಾಮಿಗಳು, ಉಪಾಧ್ಯಕ್ಷರಾದ ಕೆ ಚನ್ನಬಸಯ್ಯ ಸ್ವಾಮಿ, ಕಾರ್ಯದರ್ಶಿ ಶರಣೇಗೌಡ ಜಿ ಮಾಲಿಪಾಟೀಲ್ ,ಹಿರಿಯ ನಿರ್ದೇಶಕರಾದ ಮಾಜಿ ಸಂಸದ ಎಸ್. ಶಿವರಾಮಗೌಡ , ಮಾಜಿ ಶಾಸಕ ಪರಣ್ಣ ಮುನವಳ್ಳಿ, ಎಚ್ ಎಂ ಮಂಜುನಾಥ್, ಸುರೇಶ ಸಿಂಗನಾಳ, ಕಳಕನಗೌಡ ಪಾಟೀಲ್, ರಾಚಯ್ಯ ಸ್ವಾಮಿ ಹುಚ್ಚೇಶ್ವರ ಮಠ ಹಾಗೂ ಕಾಲೇಜಿನ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ
Kalyanasiri Kannada News Live 24×7 | News Karnataka
