ಕಾನೂನಿನ ಅರಿವಿಲ್ಲವೆಂದು ಹೇಳಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅವಕಾಶವಿಲ್ಲ- ಕುಮಾರಿ ಸುಪ್ರಿಯ ಕೆ.
There is no way to escape punishment by saying you are unaware of the law – Kumari Supriya K.

ಗಂಗಾವತಿ:ಇಂದು ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಕ್ಕಳ ದಿನಾಚರಣೆ ಮತ್ತು ಪೋಷಕ-ಉಪನ್ಯಾಸಕರ ಮಹಾಸಭೆ-2025 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಮಕ್ಕಳ ಹಕ್ಕುಗಳು, ಬಾಲಕಾರ್ಮಿಕ ಕಾಯಿದೆ, ಬಾಲ್ಯ ವಿವಾಹ ಕಾಯ್ದೆ ಮತ್ತು ಪೋಕ್ಸೋ ಕಾಯ್ದೆ ಕುರಿತು ಕಾನೂನು ಅರಿವು ಮೂಡಿಸಲಾಯಿತು. ಕುಮಾರಿ ಸುಪ್ರಿಯ ಕೆ. ನ್ಯಾಯವಾದಿಗಳು ಗಂಗಾವತಿ ಇವರು ಪಾಲಕರು ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಬಾಲ್ಯವಿವಾಹ ಕಾಯ್ದೆ ಮತ್ತು ಬಾಲಕಾರ್ಮಿಕ ಕಾಯಿದೆಯ ಕುರಿತು ಮಾತನಾಡುತ್ತಾ ಈ ಎರಡೂ ಕಾಯ್ದೆಯ ವ್ಯಾಪ್ತಿ, ಕಾನೂನು ಉಲ್ಲಂಘನೆಯಿಂದ ಆಗುವಂಥ ಶಿಕ್ಷೆ ಮತ್ತು ದಂಡ ಕುರಿತು ವಿವರವಾಗಿ ತಿಳಿಸಿದರು. ಮುಂದುವರೆದು ಮಾತನಾಡುತ್ತಾ ಬಾಲ್ಯವಿವಾಹಗಳು ಸಾಮಾನ್ಯವಾಗಿ ಗ್ರಾಮೀಣ ಭಾಗದ ಮೂಢನಂಬಿಕೆ ನಂಬುವಂತಹ, ಕಾನೂನು ಅರಿವಿನ ಕೊರೆತೆ ಇರುವ ಕುಟುಂಬಗಳಲ್ಲಿ ಹೆಚ್ಚಾಗಿ ಜರುಗುತ್ತವೆ. ಇಂಥವರು ತಮಗೆ ಕಾನೂನಿನ ಅರಿವು ಇಲ್ಲ ಎಂದು ಹೇಳಿ ಶಿಕ್ಷಯಿದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸಮುದಾಯದಲ್ಲಿ ಕಾನೂನು ಅರಿವು ಮೂಡಿಸುವ ಮೂಲಕ ಬಾಲ್ಯವಿವಾಹಗಳ ಸಂಖ್ಯೆಯನ್ನು ಇಳಿಕೆ ಮಾಡಬಹುದು. ಪಾಲಕರು ತಮ್ಮ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವ ಜೊತೆಗೆ ಅವರ ಶಿಕ್ಷಣಕ್ಕೆ ಆಸರೆಯಾಗಿ ನಿಲ್ಲಬೇಕು ಎಂದು ಕರೆ ನೀಡಿದರು. ಈ ಹಿಂದೆ ಬಾಲ್ಯವಿವಾಹ ಮಾಡಿದ ತಂದೆ ತಾಯಿಗಳನ್ನು ಮಾತ್ರ ಅಪರಾಧಿಗಳು ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಬಾಲ್ಯವಿವಾಹ ತಿದ್ದುಪಡಿ ಕಾನೂನು ಪ್ರಕಾರ ಬಾಲ್ಯವಿವಾಹ ಮಾಡುವ ಆಲೋಚನೆಯಿಂದ ಮದುವೆ ಆಗುವವರಿಗೆ ಬರುವ ಎಲ್ಲರನ್ನೂ ಅಪರಾಧಿಗಳು ಎಂದು ಪರಿಗಣಿಸಲಾಗತ್ತದೆ ಎಂದರು.
ಪೋಕ್ಸೋ ಕಾಯ್ದೆ ಕುರಿತು ಮಾತನಾಡಿದ ನ್ಯಾಯವಾದಿಗಳಾದ ಶ್ರೀಮತಿ ಮಲ್ಲಮ್ಮ ಇವರು ಹದಿಹರೆಯದ ವಯಸ್ಸಿನಲ್ಲಿ ಪ್ರೀತಿ ಪ್ರೇಮ ತುಂಬಾ ಹುಚ್ಚಾಟದಲ್ಲಿ ಬಿದ್ದು ನಿಮ್ಮ ಮುಂದಿನ ಸುಂದರವಾದ ಜೀವನ ಕಳೆದುಕೊಳ್ಳಬಾರದು, ಕಾನೂನು ಪ್ರಕಾರ ವಯಸ್ಕರಾಗುವ ತನಕ ಲೈಂಗಿಕ ಆಕರ್ಷಣೆಗೆ ಒಳಗಾಗದೆ ಅಧ್ಯಯನಶೀಲತೆ ಕಡೆಗೆ ಗಮನಹರಿಸಲು ತಿಳಿಸಿದರು. ಗಂಡಾಗಲಿ ಹೆಣ್ಣಾಗಲಿ ಅಪ್ರಾಪ್ತ ವಯಸ್ಸಿನಲ್ಲಿ ಲೈಂಗಿಕ ಆಕಷ೯ಣೆ ಒಳಗಾದಲ್ಲಿ ಪೋಕ್ಸೋ ಕಾಯ್ದೆ ಅನ್ವಯವಾಗುತ್ತದೆ. ಈ ಕಾಯ್ದೆ ಪ್ರಕಾರ ಅತ್ಯಂತ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ನಿಮಗೇನಾದರೂ ಈ ತರಹದ ಸಮಸ್ಯೆಗಳು ಎದುರಾದರೆ ಯಾವುದೇ ಸಂಕೋಚವಿಲ್ಲದೆ ಮಕ್ಕಳ ರಕ್ಷಣೆ ಸಹಾಯವಾಣಿ ಹೊಂದಿರುವ 1098 ಅಥವಾ 112 ಗೆ ಕರೆ ಮಾಡಿದರೆ ಸರ್ಕಾರ ನಿಮ್ಮ ರಕ್ಷಣೆಗೆ ಬರುತ್ತದೆ ಎಂದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಹಾಗೂ ತರಗತಿಗೆ ಸರಿಯಾಗಿ ಹಾಜರಾದ ಮತ್ತು ಮಧ್ಯಮಾವಧಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ 115 ವಿದ್ಯಾರ್ಥಿ, ವಿದ್ಯಾರ್ಥಿಯರನ್ನು ಗುರುತಿಸಿ ಬಹುಮಾನಗಳನ್ನು ನೀಡಲಾಯಿತು.
ಆರಂಭದಲ್ಲಿ ಹಿರಿಯ ಉಪನ್ಯಾಸಕರಾದ ಡಾ. ಲಿಂಗಣ್ಣ ಜಂಗಮರಳ್ಳಿ ಅವರು ಮಕ್ಕಳ ದಿನಾಚರಣೆ ಕುರಿತು ಮಾತನಾಡಿದರು. ವೇದಿಕೆಯ ಮೇಲೆ ಗ್ರಂಥಪಾಲಕರಾದ ರಮೇಶ ಗಬ್ಬೂರು, ಹಿರಿಯ ಉಪನ್ಯಾಸಕರಾದ ಅಜಗರ ಪಾಷಾ, ಶ್ರೀಮತಿ ರಮಾ, ಚಿದಾನಂದ ಮೇಟಿ, ನಾಗಪ್ಪ ಎಂ., ಈಶ್ವರಪ್ಪ ಸಿ., ರುದ್ರೇಶ, ಶ್ರೀಮತಿ ಶ್ರೀದೇವಿ, ಲಕ್ಷ್ಮೀ ಜೆ., ನಿರುಪಾದಿ, ಮಹೇಶ ಹಿರೇಮಠ, ಶ್ರೀಮತಿ ಶ್ರುತಿ, ಶ್ರೀಮತಿ ರಾಧರಾಣಿ ಇನ್ನಿತರರು ಇದ್ದರು.
ಬಸಪ್ಪ ನಾಗೋಲಿ ಪ್ರಾಚಾರ್ಯರು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಗಂಗಾವತಿ
Kalyanasiri Kannada News Live 24×7 | News Karnataka
