Teaser of the movie “Vakratunda” released
“ವಕ್ರತುಂಡ” ಚಲನಚಿತ್ರದಟೀಸರ್ ಬಿಡುಗಡೆ

ಬೆಂಗಳೂರು: ಲೋಚನ ಕ್ರಿಯೇಶನ್ಸ್ಅವರ “ವಕ್ರತುಂಡ” ಗ್ಯಾಂಗ್ಸ್ಆಫ್ ಸುಲ್ತಾನ್ ಕಾಲೋನಿ ಕನ್ನಡ ಚಲನಚಿತ್ರದಟೀಸರ್ ಬೆಂಗಳೂರಿನ ಜಯನಗರದಶಾಲಿನಿ ಮೈದಾನದಲ್ಲಿ ಬಿಡುಗಡೆ ಮಾಡಲಾಯಿತು.
ಪೀಸ್‌ಆಟೋ ಮತ್ತುಆಟೋಚಾಲಕರ ಸಂಘ ಆಯೋಜಿಸಿದ,ಆಟೋಡೇ, ಶಂಕರ್ ನಾಗ್‌ಅವರಜನ್ಮದಿನ, ಡಾ. ವಿಷ್ಣುವರ್ಧನ್‌ಅವರಿಗೆ ಭಾರತರತ್ನ ಪ್ರಶಸ್ತಿ ಲಭಿಸಿದ ಸಂಭ್ರಮದಜೊತೆಗೆಟೀಸರ್ ಬಿಡುಗಡೆವನ್ನು ಮಹಿಳಾ ಆಟೋಚಾಲಕರು ಹಾಗೂ ಆಟೋಚಾಲಕರ ಪ್ರತಿನಿಧಿಗಳು ನೆರವೇರಿಸಿದರು, ಇದುಜನಸಾಮಾನ್ಯರ ಶಕ್ತಿಯ ಪ್ರತೀಕವಾಗಿದ್ದು ವಕ್ರತುಂಡಚಿತ್ರವುಗಣೇಶಚತುರ್ಥಿ, ಸಾಮಾಜಿಕಏಕತೆ, ಮತ್ತುಯುವಜನತೆಯಜಾಗೃತಿ ವಿಷಯಗಳನ್ನು ಆಧರಿಸಿ, ಸುಲ್ತಾನ್‌ಕಾಲೋನಿಯ ಹಿನ್ನಲೆಯಲ್ಲಿ ಭಾವನಾತ್ಮಕವಾಗಿಚಿತ್ರಿತವಾಗಿದೆ. ಇದು ಭಕ್ತಿಯ ಶಕ್ತಿ ಮತ್ತು ನಗರಜೀವನದ ಸವಾಲುಗಳನ್ನು ಒಟ್ಟಿಗೆತರುವ ವಿಶಿಷ್ಟ ಕಥೆಆಗಿದೆ. ಬೆಂಗಳೂರು ಸುತ್ತಮುತ್ತ ಮತ್ತು ಸ್ಟುಡಿಯೋಗಳಲ್ಲಿಚಿತ್ರೀಕರಣ ನಡೆಸಲಾಗಿದೆಯಲ್ಲದೆ ಸಿಜಿ ತಂತ್ರಗಳನ್ನು ಬಳಸಿ ಐವತ್ತು ದಿನಗಳ ಕಾಲ ತಯಾರಿಸಲಾಗಿದೆಎಂದು ನಿರ್ಮಾಪಕಲಕ್ಕಿ ಶಂಕರ್‌ಹೇಳಿದರು.
ರAಜಿತ್‌ರಾಘವ ಮತ್ತು ನಾಗಮೂರ್ತಿ ಸಾಹಿತ್ಯರಚನೆಯ ಮೂರು ಹಾಡುಗಳಿಗೆ ಶಶಾಂಕ್ ಶೇಶಿಗಿರೆ, ನಾಗರಾಜ್ ಸುರ್ಗಾವಿ, ಭೀರೀಮರಾಯ್‌ಹಾಡಿದ್ದಾರೆ. ಡಿಸೆಂಬರ್‌ಕೊನೆಯ ವಾರಅಥವಾಜನವರಿ ಮೊದಲನೇ ವಾರದಲ್ಲಿಚಿತ್ರ ಬಿಡುಗಡೆ ಮಾಡಲಾಗುತ್ತದೆಎಂದು ನಿರ್ದೇಶಕಹರೀಶ್‌ಕುಂದೂರುತಿಳಿಸಿದರು.
ತಾರಾಗಣದಲ್ಲಿ ಲಕ್ಕಿ ಶಂಕರ್,ರಚಿತಾ ಮಹಾಲಕ್ಷ್ಮಿ, ಉಮೇಶ್‌ದಾವಣಗೆರೆ,ಮೂಗ್ ಸುರೇಶ್, ಉಮೇಶಾನ, ಅಮಿತ್‌ರಾವ್, ಆಟೋ ನಾಗರಾಜ್, ಸಂಗಮೇಶ್‌ಉಪಾಧ್ಯಾಯ, ಅನುಷಾ, ಮಾಸ್ಟರ್‌ಅಥರ್ವ, ಮಾಸ್ಟರ್ ಲೋಚನ್,ಮಾಸ್ಟರ್‌ಯಶ್, ಬೆಬಿಪ್ರೇಕ್ಷಾ,ಭುವನಮೊದಲಾದವರಿದ್ದಾರೆ. ತಾಂತ್ರಿಕ ವರ್ಗದಲ್ಲಿ- ಛಾಯಾಗ್ರಹಣಜೈಆನಂದ್, ಸಂಕಲನಕುಮಾರ್, ಸಂಗೀತಜೆಮ್ಸ್ಆರ್ಕಿಟೆಕ್ಟ್, ಹಿನ್ನೆಲೆ ಸಂಗೀತಅಕ್ಷಯ್‌ರಿಷಬ್, ಪಿಆರ್‌ಓನಾಗೇಂದ್ರ, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ಪ್ರಸಾಧನ ಬಾಷಾ, ಚಿತ್ರಕಥೆಜೊತೆಗೆ ಹರೀಶ್‌ಕುಂದೂರು ನಿರ್ದೇಶನಚಿತ್ರಕ್ಕಿದೆ.ಸಹ-ನಿರ್ಮಾಪಕರುಉಮೇಶ್ ಬಿ. ಯು. ದಾವಣಗೆರೆ. ಈ ಹಿಂದೆ ನೈಂಟಿಕುಡಿ ಪಲ್ಟಿ ಹೊಡಿ, ದೇವರಾಣೆ, ಸಿಗರೇಟ್ ಸೇದ್ಬೇಡಿ. ಜಿಲೇಬಿ ಚಿತ್ರಗಳನ್ನು ನಿರ್ಮಿಸಿದ್ದ ಲಕ್ಕಿ ಶಂಕರ್‌ನಿರ್ಮಾಪಕಆಗಿದ್ದಾರೆ.
Kalyanasiri Kannada News Live 24×7 | News Karnataka