Chutuku Sahitya Vedike and A.I.C.C.T.U. participate in the 11th day of the protest and a living, critical literature is born: Dr. MGR Ursಚುಟುಕು ಸಾಹಿತ್ಯ ವೇದಿಕೆ ಮತ್ತು ಎ.ಐ.ಸಿ.ಸಿ.ಟಿ.ಯು. 11ನೇ ದಿನದ ಧರಣಿಯಲ್ಲಿ ಭಾಗಿಹೋರಾಟದಿಂದಲೇ ಜೀವಂತ, ವಿಮರ್ಶಾತ್ಮಕ ಸಾಹಿತ್ಯ ಹುಟ್ಟುತ್ತದೆ: ಡಾ. ಎಂಜಿಆರ್ ಅರಸ್

ಕೊಪ್ಪಳ: ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಸಾಹಿತಿಗಳು 11ನೇ ದಿನದ ಅನಿರ್ದಿಷ್ಟಾವಧಿ ಧರಣಿಯಲ್ಲಿ ಪಾಲ್ಗೊಂಡರು. ಮೈಸೂರಿನ ಚುಟುಕು ಸಾಹಿತಿ ಡಾ. ಎಂಜಿಆರ್ ಅರಸ್ ಧರಣಿ ಉದ್ದೇಶಿಸಿ ಇಲ್ಲಿ ಮಾಲಿನ್ಯಕಾರಕ ಕಾರ್ಖಾನೆಗಳು ಜನರ ಜೀವಕ್ಕೆ ಕುತ್ತು ದಂದಿರುವಾಗ ಯಾಕೆ ಸಹಿಸಿಕೊಳ್ಳಬೇಕು. ಜನರ ಕಾಪಾಡಲು ಸರ್ಕಾರಗಳು ಬೇಕು. ಆದರೆ ಇಲ್ಲಿ ಜೀವ ಹಾನಿಯಾದರೆ ಯಾರು ಹೊಣೆ. ಜನರ ಕೂಗಿಗೆ ಬೆಲೆಕೊಡದ ಸರಕಾರಗಳನ್ನು ಪಲ್ಲಟಗೊಳಿಸಲಿಕ್ಕಾಗಿ ಸಾಹಿತ್ಯ ಹುಟ್ಟುತ್ತದೆ. ಅಂತ ಸಾಹಿತ್ಯವೇ ವಿಮರ್ಶಾತ್ಮಕ ಮತ್ತು ಜೀವಂತ ಸಾಹಿತ್ಯವಾಗುತ್ತದೆ. ಈ ಹೋರಾಟ ಪುರೋಗಾಮಿ ಸಾಹಿತ್ಯ ಹುಟ್ಟಲು ಪ್ರೇರಣೆ ಆಗುತ್ತದೆ ಎಂದರು. ಇನ್ನೊಬ್ಬ ಮೈಸೂರು ಚುಟುಕು ಸಾಹಿತಿ ರತ್ನಾ ಹಾಲಪ್ಪಗೌಡ ಮಾತನಾಡುತ್ತಾ ಇದಕ್ಕೊಂದು ಸಂಬಂಧಪಟ್ಟ ಇಲಾಖೆ ಇದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಏನು ಮಾಡುತ್ತಿದೆ ಎಂದು ಯಾರಿಗೂ ತಿಳಿದಿಲ್ಲ. ಎಷ್ಟೇ ದೂರುಗಳು ಮಂಡಳಿಗೆ ಬಂದಾಗ ಅದನ್ನು ತಳ್ಳಿಹಾಕಿ ವರದಿ ಕೊಡುವ ಪರಿಪಾಟವಿದೆ. 1.5 ಲಕ್ಷ ಜನರಿಗೆ ಆರೋಗ್ಯ ದುಷ್ಪರಿಣಾಮ ಮಾಡುವ ಕಾರ್ಖಾನೆಗೆ ಇಲ್ಲಿನ ಸ್ಥಳಿಯ ಆಡಳಿತ ಹೇಗೆ ಅನುಮತಿ ಕೊಟ್ಟಿತು? ಅದರ ಪುನರ್ ಪರಿಶೀಲನೆ ಮಾಡಿಕೊಳ್ಳುವ ಅಗತ್ಯವಿದೆ ಎಂದರಲ್ಲದೇ ಮುಖ್ಯಮಂತ್ರಿ ಮಟ್ಟದಲ್ಲಿ ಚು.ಸಾ.ಪ. ಮಾತನಾಡಲು ಸಜ್ಜಾಗಿದೆ ಎಂದು ಹೇಳಿದರು. ಚುಸಾಪ ಸಹಿತಿ ಗಿರಿಜಾಶಂಕರ ಪಾಟೀಲ ಕೂಡ ಮಾತನಾಡಿ ಇದು ಎಲ್ಲಾ ಜೀವಪರ ಕಾಳಜಿಯ ಹೋರಾಟವಾಗಿದೆ. ಇದರ ನೇತೃತ್ವ ವಹಿಸಿರುವ ಅಲ್ಲಮಪ್ರಭು ಬೆಟ್ಟದೂರು ಅವರು ಕೇವಲ ಕೊಪ್ಪಳದಲ್ಲಿ ಖ್ಯಾತನಮರಲ್ಲ. ಇವರ ಪೂರ್ವಜರು ಸ್ವಾತಂತ್ರ್ಯ ಹೋರಾಟದಲ್ಲಿದ್ದರು. ಕೊಪ್ಪಳ ಪರಿಸರದ ಈ ಹೋರಾಟಕ್ಕೆ ಗವಿಶ್ರೀಗಳೇ ಚಾಲನೆ ಕೊಟ್ಟದ್ದು ರಾಜ್ಯದ ಜನರು ಗಮನಿಸಿದ್ದಾರೆ. ಹೋರಾಟಕ್ಕೆ ವ್ಯಾಪಕ ಬೆಂಬಲ ಬರಲಿದೆ ಎಂದರು.
ಧರಣಿಯಲ್ಲಿ ಚುಸಾಪ ಸಾಹಿತಿ ಡಾ. ಮಹಾಂತೇಶನೆಲಗಣಿ, ಚುಸಾಪ ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ, ಸಾಹಿತಿ ವೀರಪ್ಪ ವಾಲಿ ಮಾತನಾಡಿದರು. ಸಾಮಾಜಿಕ ಹೋರಾಟಗಾರ ಎಂ.ಬಿ. ಅಳವಂಡಿ, ಎಐಸಿಸಿಟಿಯು ಸಂಘಟನೆಯ ಕಾಂ. ವಿಜಯ ದೊರೆರಾಜು, ಸಣ್ಣಹನುಮಂತ ಹುಲಿಹೈದರ ಮಾತನಾಡಿರು. ಮಾನವ ಬಂಧುತ್ವ ವೇದಿಕೆ ವಿಭಾಗ ಸಂಚಾಲಕ ಭೀಮಪ್ಪ ಹವಳಿ, ಎಂಬಿವಿ ಮಹಿಳಾ ಜಿಲ್ಲಾ ಸಂಚಾಲಕಿ ಮೋನಾಕ್ಷಿ ಶ. ಸಾಸ್ವಿಹಾಳ, ಸೈನಾಜ್ ಬೇಗಂ, ರಣದಪ್ಪ ಸಂಕಣ್ಣವರ, ಈಶಪ್ಪ ಶಿರೂರು ದೊಡ್ಡಮನಿ, ಗವಿಸಿದ್ದಪ್ಪ ಹಲಿಗಿ, ವಿ.ಎಂ. ಮಂಜುನಾಥ, ಗಾಳೆಪ್ಪ ಪೂಜಾರ, ಹನುಮಂತಿ ಕಮತರ, ರಾಘು ಡಿ.ಚಾಕರಿ, ಭೀಮಪ್ಪ ಯಲಬುರ್ಗಾ, ಸುಂಕಮ್ಮ ಪಡಚಿಂತಿ, ಗಂಗಮ್ಮ ಕವಲೂರು ಪಾಲ್ಗೊಃಡರು.ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಯ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಮಲ್ಲಿಕಾರ್ಜುನ ಬಿ. ಗೋನಾಳ, ಮಖಬೂಲ್ ರಾಯಚೂರು, ಮಹಾದೇವಪ್ಪ ಎಸ್.ಮಾವಿನಮಡು, ಮುದಕಪ್ಪ ಎಂ.ಹೊನಮನಿ, ಪ್ರಕಾಶ ಹೊಳೆಯಪ್ಪನವರ, ಮಹಾಂತೇಶ ಕೊತಬಾಳ, ಮಂಜುನಾಥ ಜಿ. ಗೊಂಡಬಾಳ, ಬಸವರಾಜ ಶೀಲವಂತರ, ಚನ್ನಬಸಪ್ಪ ಅಪ್ಪಣ್ಣವರ, ಎಸ್.ಎ. ಗಫಾರ್ ಧರಣಿ ನೇತೃತ್ವ ವಹಿಸಿದ್ದರು.
Kalyanasiri Kannada News Live 24×7 | News Karnataka
