Studying local history: Inspiration for the survival of our cultureಸ್ಥಳಿಯ ಇತಿಹಾಸ ಅಧ್ಯಯನ: ನಮ್ಮ ಸಂಸ್ಕೃತಿಯ ಉಳಿವಿಕೆಗೆ ಪ್ರೇರಣೆ

ಗಂಗಾವತಿ: ನಗರದ ಸಂಕಲ್ಪ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯವು ನವೆಂಬರ್-೮ ರಂದು ಎನ್.ಎಸ್.ಎಸ್.ಎ ಮತ್ತು ಬಿ ಘಟಕಗಳಿಂದ ಆಯೋಜನೆ ಮಾಡಿದ್ದ ದಿವಂಗತ ಪಂಡರೀನಾಥ ಅಗ್ನಿಹೋತ್ರಿ ರವರ ಸ್ಮರಣಾರ್ಥವಾಗಿ ಆಯೋಜಿಸಿದ್ದ ಚಾರಣ ಕಾರ್ಯಕ್ರಮವನ್ನು ಪ್ರಸಿದ್ಧ ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ಮೂಲವಾಗಿದ್ದ ಆನೆಗುಂದಿ ಸ್ಥಳಕ್ಕೆ ಭೇಟಿ ನೀಡಲಾಯಿತು. ಸುಮಾರು ೨೫೦ ವಿದ್ಯಾರ್ಥಿನಿಯರು ಮತ್ತು ೧೫ ಪ್ರಾಧ್ಯಾಪಕರು ಇದರಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಇತಿಹಾಸ ಉಪನ್ಯಾಸಕರಾದ ಕೃಷ್ಣಕುಮಾರರವರು ಆನೆಗುಂದಿ ಪರಿಸರದ ಸಮಗ್ರ ಪರಿಚಯ ಮಾಡಿಕೊಟ್ಟರಲ್ಲದೆ, ಬಂದಿಖಾನೆ ಚಿಂತಾಮಣಿ, ಶ್ರೀ ಕೃಷ್ಣದೇವರಾಯರ ಸಮಾಧಿ ಸ್ಥಳಗಳ ಪೌರಾಣಿಕ ಧಾರ್ಮಿಕ ವಿಶೇಷತೆಗಳನ್ನು ತಿಳಿಸುವುದರ ಜೊತೆಗೆ ಇಂದಿನ ಯುವಜನತೆ ನಮ್ಮ ಸ್ಥಳಿಯ ಚರಿತ್ರೆ ತಿಳಿದುಕೊಳ್ಳುವ ಕಡೆ ಗಮನಹರಿಸಲು ಕೋರಿದರು.
ಐತಿಹಾಸಿಕ, ಮುಖ್ಯವೀಕ್ಷಕರಾಗಿ ಆಗಮಿಸಿದ್ದ ಎಂ.ಆರ್ ಮಂಜುಸ್ವಾಮಿಯವರು ನಮ್ಮ ಸಂಸ್ಕೃತಿ ಮುಂದುವರೆಯಬೇಕಾದರೆ ಸ್ಥಳೀಯ ಇತಿಹಾಸ ಅವಶ್ಯಕವಾಗಿ ತಿಳಿದಿರಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಡಾ. ಅಮಿತಕುಮಾರ್ ರೆಡ್ಡಿರವರು ಸ್ಥಳೀಯ ಇತಿಹಾಸವು ನಮ್ಮ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದರು.
ಇತಿಹಾಸ ಪ್ರಾಧ್ಯಪಕರಾದ ನಾಗರಾಜ ಎಚ್ ಹಾಗೂ ಗುರುಮೂರ್ತಿ ಕೆ ಇವರು ಕಂಪ್ಲಿ, ಕುಮ್ಮಟದುರ್ಗ-ಬೆಂಗಳೂರು ಕೆಂಪೇಗೌಡರಿಗೆ ಸಂಬAಧಿಸಿದ ಕುತೂಹಲಕರ ವಿಷಯಗಳನ್ನು ಹೇಳಿದರು. ಈ ಸಂದರ್ಭದಲ್ಲಿ ಬಸನಗೌಡ ಜಿ. ಕುತೂಹಲಕರ ವಿಷಯಗಳನ್ನು ಹೇಳಿದರು.
ಈ ಸಂದರ್ಭದಲ್ಲಿ ಬಸನಗೌಡ ಜಿ. ರಮೇಶ ಪೂಜಾರ್, ಬಸವರಾಜ ವೈ, ಚನ್ನಬಸವ, ಅಶೋಕ ಎಚ್.ಎಮ್. ಶ್ರೀಮತಿ ಸಂಪತ್‌ಕುಮಾರಿ, ರಮೇಶ, ಸುರೇಶ ಬಿ. ಶ್ರೀಮತಿ ವಿದ್ಯಾ ಬಿ. ಶಿವಶರಣ, ರಾಹುಲ್ ಎನ್, ಹಾಗೂ ವೆಂಕಟಲಕ್ಷ್ಮೀ ಹಾಜರಿದ್ದರು.
ಪ್ರಾಚಾರ್ಯರಾದ ಬಸಪ್ಪ ಶಿರಿಗೇರಿ ದಕ್ಷಿಣ ಭಾರತದ ಸುಪ್ರಸಿದ್ಧ ವಿಜಯನಗರ ಸಾಮ್ರಾಜ್ಯದ ಮೂಲವೇ ಆನೆಗುಂದಿಯೇ ಮೂಲವಾಗಿದ್ದು ಈ ಕಾರಣದಿಂದ ಪ್ರವಾಸೋಧ್ಯಮಕ್ಕೆ ಹೆಚ್ಚಿನ ಒತ್ತು ನೀಡಿದರೆ ಈ ಭಾಗದ ಮಾಹಿತಿ ಜಾಗತಿಕ ಮಟ್ಟಕ್ಕೆ ತಲುಪಲು ಸಹಾಯಕವಾಗುತ್ತದೆ ಎಂದರು.
Kalyanasiri Kannada News Live 24×7 | News Karnataka
