The short URL of the present article is: https://kalyanasiri.in/59nz
Children's Rights Parliament - District Level Children's Consultation Meeting Successfulಮಕ್ಕಳ ಹಕ್ಕುಗಳ ಸಂಸತ್ತು – ಜಿಲ್ಲಾ ಮಟ್ಟದ ಮಕ್ಕಳ ಸಮಾಲೋಚನಾ ಸಭೆ ಯಶಸ್ವಿ
ಜಾಹೀರಾತು

ಕೊಪ್ಪಳ ನವೆಂಬರ್ 10 (ಕರ್ನಾಟಕ ವಾರ್ತೆ): ಯುನಿಸೆಫ್-ಮಕ್ಕಳ ರಕ್ಷಣಾಯೋಜನೆ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ, ಬೆಂಗಳೂರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೊಪ್ಪಳ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ (ಶನಿವಾರ) ಕೊಪ್ಪಳದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ “ಮಕ್ಕಳ ಹಕ್ಕುಗಳ ಸಂಸತ್ತು-2025ರ” ಅಂಗವಾಗಿ ಜಿಲ್ಲಾ ಮಟ್ಟದ ಮಕ್ಕಳ ಸಮಾಲೋಚನಾ ಸಭೆಯು ಯಶಸ್ವಿಯಾಗಿ ನಡೆಯಿತು.
ಈ ಕಾರ್ಯಕ್ರಮವು ವಿಧಾನ ಸೌಧದಲ್ಲಿ ಮಕ್ಕಳು ಇದ್ದಾರೆಯೇ ಎಂಬ ಮೂಲ ಪ್ರಶ್ನೆಯೊಂದಿಗೆ ಆರಂಭಿಸಲಾಯಿತು. ವಿಧಾನ ಸೌಧದಲ್ಲಿ ಮಕ್ಕಳಿಗೆ ಸಂಬAಧಿಸಿದ ವಿವಿಧ ಕಾಯ್ದೆ, ಯೋಜನೆ, ಕಾರ್ಯಕ್ರಮಗಳ ಬಗ್ಗೆ ಹಾಗೂ ಅಗತ್ಯವಿರುವ ಹೂಸ ಕಾಯ್ದೆಗಳ ಬಗ್ಗೆ ಚರ್ಚೆಯಾಗಲಿ ಎಂಬ ಉದ್ದೇಶದಿಂದ ಆರಂಭಿಸಲಾಯಿತು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ಜಿ ರಾಮತ್ನಾಳ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿ, ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಆಳುವ ಸರಕಾರಕ್ಕೆ ಮಕ್ಕಳಿಂದ ಮಕ್ಕಳ ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಸಿ, ಅಗತ್ಯವಿರುವ ಕಾರ್ಯಕ್ರಮ, ಯೋಜನೆಗಳನ್ನು ಅನುಷ್ಟಾನಗೊಳಿಸಲು ಪ್ರೇರೇಪಿತಗೊಳಿಸುವುದಾಗಿದೆ ಎಂದು ವಿವರಿಸಿದರು. ಮಕ್ಕಳ ಮೇಲಿನ ಯಾವುದೇ ರೀತಿಯ ಹಲ್ಲೆ, ಕಿರುಕುಳ, ದೌರ್ಜನ್ಯ ಇನ್ನೀತರೆ ಯಾವುದೇ ರೀತಿಯ ಸಂಕಷ್ಟಕ್ಕೊಳಗಾದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು ರವರಿಗೆ ಅಥವಾ ಮಕ್ಕಳ ಸಹಾಯವಾಣಿ-1098 / 112ಗೆ ದೂರನ್ನು ನೀಡಬಹುದಾಗಿದೆ ಎಂದು ವಿವರಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಮತನಾಡಿ, ಪ್ರಜಾ ಪ್ರಭುತ್ವ ಎಂದರೆ ಪ್ರಜೆಗಳಿಂದ, ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರವಾಗಿ ನಡೆಯತ್ತದೆ. ಅದೇ ರೀತಿಯ ಮಕ್ಕಳ ಸಂಸತ್ತು ಮಕ್ಕಳಿಂದ ಮಕ್ಕಳಿಗಾಗಿ ಮಕ್ಕಳಿಗೋಸ್ಕರವಾಗಿ ನಡೆಯುವ ಕಾರ್ಯಕ್ರಮವಾಗಿದೆ. ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಮಕ್ಕಳ ಸಂಸತ್ತು ಕಾರ್ಯಕ್ರಮದಲ್ಲಿ ಮಕ್ಕಳ ಸಮಸ್ಯೆಗಳನ್ನು ಆಲಿಸಿ, ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದ ಉದಾಹರಣೆಗಳು ನಮ್ಮ ಮುಂದಿವೆ. ಆದ್ದರಿಂದ ಈ ಕಾರ್ಯಕ್ರಮದಲ್ಲಿ ಮಕ್ಕಳ ಪರವಾಗಿ ಭಾಗವಹಿಸಿದ ನೀವುಗಳೆಲ್ಲರೂ ಸಕ್ರೀಯವಾಗಿ ಭಾಗವಹಿಸಿ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಪ್ರಕಾಶ ಕಡಗದ, ಸದಸ್ಯರುಗಳಾದ ಯಮನೂರಪ್ಪ ನಾಯಕ್, ಮಾರುತಿಚಾಮಲಾಪುರ, ದಿವ್ಯಾಜೋಗಿ, ಯುನಿಸೆಫ್-ಮಕ್ಕಳ ರಕ್ಷಣಾಯೋಜನೆಯ ಹರೀಶಜೋಗಿ, ಜಿಲ್ಲಾ ಮಕ್ಕಳ ರಕ್ಷಣಾಘಟಕದ ರವಿಕುಮಾರ ಪವಾರ, ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಮಕ್ಕಳು ಭಾಗವಹಿಸಿದ್ದರು. ರವಿ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು, ಸುಭಾನ ಸಾಭ್ ಪ್ರಸ್ತಾವಿಕವಾಗಿ ಮಾತನಾಡಿದರು. ನೇತ್ರಾ ಸ್ವಾಗತಿಸಿದರು, ರಮೇಶ ವಂದಿಸಿದರು