
Siddaramaiah should continue as Chief Minister: Somnath Pattanashetty, lawyerಸಿದ್ಧರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿ : ಸೋಮನಾಥ ಪಟ್ಟಣಶೆಟ್ಟಿ ವಕೀಲರು


ಗಂಗಾವತಿ: ಮುಖ್ಯಮಂತ್ರಿ ಸಿದ್ಧರಾಮಯ್ಯನವರ ರಾಜ್ಯ ಕಾಂಗ್ರೆಸ್ ಸರ್ಕಾರ ಅನೇಕ ಜನಪರ ಕಾಳಜಿ ಹೊಂದಿರುವ ಸರ್ಕಾರವಾಗಿದ್ದು, ಪಂಚ ಗ್ಯಾರಂಟಿಗಳ ಮೂಲಕ ನಾಡಿನ ಸಾರ್ವಜನಿಕರ ಜನಮನ್ನಣೆ ಪಡೆದಿರುತ್ತದೆ. ಅತ್ಯಧಿಕವಾಗಿ ೧೬ ಬಜೆಟ್ ಮಂಡನೆ ಮಾಡಿ ದಾಖಲೆ ಮಾಡಿರುವ ಸಿದ್ಧರಾಮಯ್ಯನವರೇ ಸರ್ಕಾರದ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿ ಮುಂದುವರೆಯಲಿ ಎಂದು ಗಂಗಾವತಿ ತಾಲೂಕಿನ ಕಾಂಗ್ರೆಸ್ ಮುಖಂಡರು ಹಾಗೂ ವೀರಶೈವ ಸಮಾಜದ ಮುಖಂಡರಾದ ಸೋಮನಾಥ ಪಟ್ಟಣಶೆಟ್ಟಿ ವಕೀಲರು ಕಾಂಗ್ರೆಸ್ ಹೈಕಮಾಂಡ್ಗೆ ಆಗ್ರಹಿಸಿದ್ದಾರೆ.
ಮುಂದುವರೆದು ಅವರು ಮಾತನಾಡುತ್ತಾ, ಪ್ರಸ್ತುತ ಸರ್ಕಾರದ ಸಚಿವ ಸಂಪುಟ ಪುನರ್ ರಚನೆ ಮಾಡಿ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಘವೇಂದ್ರ ಹಿಟ್ನಾಳ್ರವರು ಈ ಭಾಗದ ಮುತ್ಸದ್ದಿ ಹಾಗೂ ಜನಮನ್ನಣೆ ಹೊಂದಿದ ನಾಯಕರಾಗಿದ್ದು, ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಒತ್ತಾಯಿಸಿದ್ದಾರೆ.




