
Discussion with BJP high command on ST reservation for shepherds: Gali Janardhana Reddy
*ST reservation is necessary for shepherds with tribal characteristics of the countryಕುರುಬ ಜನಾಂಗಕ್ಕೆ ಎಸ್ಟಿ ಮೀಸಲಾತಿ ಬಿಜೆಪಿ ಹೈಕಮಾಂಡ್ ಜತೆ ಚರ್ಚೆ:ಗಾಲಿ ಜನಾರ್ದನರೆಡ್ಡಿ
*ದೇಶದ ಬುಡಕಟ್ಟು ಲಕ್ಷಣವುಳ್ಳ ಕುರುಬರಿಗೆ ಎಸ್ಟಿ ಮೀಸಲು ಅಗತ್ಯ


ಗಂಗಾವತಿ: ಕುರುಬ ಜನಾಂಗಕ್ಕೆ ಎಸ್ಟಿ ಮೀಸಲು ಅಗತ್ಯವಾಗಿದ್ದು ಬಿಜೆಪಿ ಹೈಕಮಾಂಡ್ ಹಾಗೂ ಕೇಂದ್ರ ಸರಕಾರದ ಸಚಿವರುಗಳ ಜತೆ ಮಾತನಾಡುವುದಾಗಿ ಶಾಸಕ ಗಾಲಿ ಜನಾರ್ದನರೆಡ್ಡಿ ಭರವಸೆ ನೀಡಿದರು.

ಅವರು ನಗರದ ಶ್ರೀಕನಕದಾಸರ ವೃತ್ತದಲ್ಲಿ ವಿಶ್ವಚೇತನ ಶ್ರೀಕನಕದಾಸರ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಡೊಳ್ಳು ಭಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶ್ರೀಕನಕದಾಸರು ಆಧ್ಯಾತ್ಮದ ಮೂಲಕ ಶ್ರೀಕೃಷ್ಣನನ್ನು ಒಲಿಸಿಕೊಂಡಿದ್ದು ದಾಸ ಸಾಹಿತ್ಯದ ಮೂಲಕ ಸಮಾಜದ ಅಂಕುಡೊAಕು ತಿದ್ದುವ ಕಾರ್ಯ ಮಾಡಿದ್ದಾರೆ. ಕುರುಬ ಸಮಾಜದಲ್ಲಿ ಶ್ರೀಕನಕದಾಸರು ಜನಿಸಿದರೂ ಮಾನವ ಕುಲಕ್ಕೆ ನೈತಿಕ ಪಾಠವನ್ನು ದಾಸ ಸಾಹಿತ್ಯದ ಮೂಲಕ ಮನವರಿಕೆ ಮಾಡಿದ್ದಾರೆ. ಕುರುಬ ಸಮಾಜವು ಅತ್ಯಂತ ಹಿಂದುಳಿದ ಜನಾಂಗವಾಗಿದ್ದು ಹಲವು ದಶಕಗಳಿಂದ ಎಸ್ಟಿ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದು ಈಗಾಗಲೇ ಬಿಜೆಪಿ ಸರಕಾರವಿದ್ದಾಗ ರಾಜ್ಯದಿಂದ ಎಸ್ಟಿ ಮೀಸಲಿಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಇದೀಗ ಕೇಂದ್ರ ಸರಕಾರ ಕೆಲ ಮಾಹಿತಿಗಾಗಿ ಪುನಹ ಕಡತವನ್ನು ರಾಜ್ಯ ಕಳಿಸಿರುವ ಮಾಹಿತಿ ಇದ್ದು ಅಗತ್ಯ ಮಾಹಿತಿಗಳೊಂದಿಗೆ ರಾಜ್ಯ ಸರಕಾರ ಕೇಂದ್ರಕ್ಕೆ ಕಳಿಸುವ ಪ್ರಕ್ರಿಯೆ ನಡೆಸಬೇಕು. ನಂತರ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಕೇಂದ್ರದ ನಾಯಕರ ಜತೆ ಕುರುಬರಿಗೆ ಎಸ್ಟಿ ಮೀಸಲು ನೀಡುವ ಕುರಿತು ಮನವಿ ಮಾಡುವುದಾಗಿ ಗಾಲಿ ಜನಾರ್ದನರೆಡ್ಡಿ ಭರವಸೆ ನೀಡಿದರು. ತಾವು ಪ್ರವಾಸೋದ್ಯಮ, ಮೂಲಸೌಕರ್ಯ ಸಚಿವರಾಗಿದ್ದ ವೇಳೆ ಕಾಗಿನೆಲೆ ಪ್ರಾಧಿಕಾರ, ಬಾಡಾ ಅಭಿವೃದ್ಧಿ ನೀಲನಕ್ಷೆ ಸಿದ್ದಪಡಿಸಿ ೧೫೦ ಕೋಟಿ ರೂ,ಗಳ ಯೋಜನೆ ಪೈಕಿ ೫೦ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿತ್ತು. ಕನಕದಾಸರ ಜಯಂತ್ಯುತ್ಸವದ ಸಂದರ್ಭದಲ್ಲಿ ರಜೆ ನೀಡುವುದು ಮತ್ತು ಸರಕಾರಿ ರಜೆ ಘೋಷಣೆ ಮಾಡಲಾಗಿದೆ. ಅಂದು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವ ಕುರಿತು ಯೋಜನೆ ರೂಪಿಸಲಾಗಿತ್ತು ಎಂದರು. ಗಂಗಾವತಿ ಅಭಿವೃದ್ದಿ ಕುರಿತು ಅನುದಾನದ ಕೊರತೆ ಕಾರಣವಾಗಿದ್ದು ಇದೀಗ ರಾಜ್ಯ ಸರಕಾರ ವಿವಿಧ ಅನುದಾನದ ಮೂಲಕ ನೂರು ಕೋಟಿ ಹಣ ಮಂಜೂರಿ ಮಾಡಿದ್ದು ಶೀಘ್ರ ಕಾಮಗಾರಿ ಮಾಡಲಾಗುತ್ತದೆ. ಕಿಷ್ಕಿಂಧಾ ಅಂಜನಾದ್ರಿ ಅಭಿವೃದ್ದಿ , ರಸ್ತೆಗಳ ನಿರ್ಮಾಣಕ್ಕೆ ಮತ್ತು ಗಂಗಾವತಿ ನಗರದ ಅಭಿವೃದ್ಧಿ ಗೆ ೫೦೦ ಕೋಟಿ ರೂಗಳ ವಿಶೇಷ ಯೋಜನೆ ರೂಪಿಸಿ ರಾಜ್ಯ ಸರಕಾರದ ಮೂಲಕ ಕೇಂದ್ರ ಕ್ಕೆ ಕಳಿಸಲಾಗಿದ್ದು ದೆಹಲಿ ತೆರಳಿ ಹಣ ಬಿಡುಗಡೆಗೆ ಕ್ರಮ ವಹಿಸಲಾಗುತ್ತದೆ. ಗಂಗಾವತಿ ನಗರದಲ್ಲಿ ರಸ್ತೆ, ಚರಂಡಿ ಮತ್ತು ವಾರ್ಡುಗಳ ರಸ್ತೆ ಪುನರ್ ನಿರ್ಮಿಸಲಾಗುತ್ತದೆ. ಜನರು ನನ್ನ ಮೇಲೆ ಭರವಸೆ ಇಟ್ಟಿ ಗೆಲ್ಲಿಸಿದ್ದು ಅವರ ಭರವಸೆ ಹುಸಿ ಮಾಡದೇ ಕೆಲಸ ಮಾಡಲಾಗುತ್ತದೆ.
ಮಾಜಿ ಸಂಸದ ಶಿವರಾಮಗೌಡ ಮಾತನಾಡಿ, ಕುರುಬ ಜನಾಂಗ ಎಸ್ಟಿ ಮೀಸಲಾತಿಗೆ ಎಲ್ಲಾ ಅರ್ಹತೆ ಹೊಂದಿದೆ. ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸಹ ಹೊಸಪೇಟೆಯ ಕಾರ್ಯಕ್ರಮದಲ್ಲಿ ಒಪ್ಪಿದ್ದು ೨ಎ ದಲ್ಲಿರುವ ಮೀಸಲಾತಿಯನ್ನು ಎಸ್ಟಿ ಮೀಸಲಿಗೆ ಸೇರಿಸಿ ಕುರುಬರನ್ನು ಎಸ್ಟಿ ಮಾಡಬೇಕು. ಇದರಿಂದ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ಲಭಿಸುತ್ತದೆ. ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಕಾರ್ಯ ಮಾಡುವಂತೆ ಪಕ್ಷದ ಹೈಕಮಾಂಡನ್ನು ಒತ್ತಾಯಿಸಲಾಗುತ್ತದೆ ಎಂದರು. ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಆಶಾಕಿರಣವಾಗಿದ್ದು ಅವರು ಸಿಎಂ ಆದಾಗ ಮಳೆ ಬರಲ್ಲ ಎಂದು ಟೀಕೆ ಮಾಡಿದ್ದರು. ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗಿನಿಂದ ರಾಜ್ಯದಲ್ಲಿ ಮಳೆ ನಿರಂತರವಾಗಿ ಬರುತ್ತಿದೆ. ಎಲ್ಲಾ ಕೆರೆ, ಕಟ್ಟೆ, ಡ್ಯಾಂಗಳು ಭರ್ತಿಯಾಗಿ ರಾಜ್ಯದ ರೈತರು ಚನ್ನಾಗಿದ್ದಾರೆ ಎಂದರು. ಕುಮಾರಿ ಮಹಾಲಕ್ಷ್ಮಿ ಕುರಿ ಕನಕದಾಸರ ಜೀವನ ಕುರಿತು ಉಪನ್ಯಾಸ ಮಾಡಿದರು. ಎಸ್ಸೆಸೆಲ್ಸಿ, ಪಿಯುಸಿ ಮತ್ತು ಎಂಬಿಬಿಎಸ್ ಸರಕಾರಿ ಸೀಟು ಪಡೆದ ಕುರುಬ ಸಮಾಜದ ಪ್ರತಿಭಾನ್ವಿತರು ಹಾಗೂ ದೆಹಲಿ ವಿವಿಯಿಂದ ಡಾಕ್ಟರೇಟ್ ಪದವಿ ಪಡೆದ ಪ್ರೋ, ಶಿವರಾಜ್ ಗುರುಕಾರ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪೂಜ್ಯ ಸಿದ್ದಯ್ಯ, ಸಿದ್ದರಾಮಯ್ಯ ಗುರುವೀನ್, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಇಲಿಯಾಸ್ ಖಾದ್ರಿ, ಮಾಜಿ ಸಚಿವರಾದ ಎಂ.ಮಲ್ಲಿಕಾರ್ಜುನನಾಗಪ್ಪ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ,ಆನೆಗೊಂದಿ ರಾಜವಂಸ್ಥೆ ಲಲಿತರಾಣಿ ಶ್ರೀರಂಗದೇವರಾಯಲು, ನಗರಸಭೆ ಮಾಜಿ ಸದಸ್ಯರಾದ ಎಫ್.ರಾಘವೇಂದ್ರ, ರಮೇಶ ಚೌಡ್ಕಿ, ಮೌಲಸಾಬ, ರೈತ ಗ್ರೇಡ್-೦೨ ತಹಸೀಲ್ದಾರ್ ಮಹಾಂತಗೌಡ ಪಾಟೀಲ್, ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ, ಪಿಐ ಪ್ರಕಾಶ ಮಾಳೆ, ದೈಹಿಕ ಶಿಕ್ಷಣಾಧಿಕಾರಿ ಸರಸ್ವತಿ ಜೂಡಿ ಹಾಗೂ ಶ್ರೀಕನಕದಾಸ ಕುರುಬಸ ಸಂಘದ ತಾಲೂಕು ಅಧ್ಯಕ್ಷ ವಿಠಲಾಪೂರ ಯಮನಪ್ಪ, ನಗರಾಧ್ಯಕ್ಷ ಕೆ.ನಾಗೇಶಪ್ಪ, ಕಸಾಪ ತಾಲೂಕು ಅಧ್ಯಕ್ಷ ರುದ್ರೇಶ ಮಡಿವಾಳ, ಕುರುಬ ಸಮಾಜದ ಮುಖಂಡರಾದ ಮೋರಿ ದುರುಗಪ್ಪ, ಸಿದ್ದಲಿಂಗನಗೌಡ, ನವಲಿ ಯಮನಪ್ಪ, ಶರಣೇಗೌಡ, ಗಡ್ಡಿ ಮುದುಕಪ್ಪ, ಡ್ಯಾಗಿ ರುದ್ರೇಶ, ಬೆಟ್ಟಪ್ಪ ಹುರಕಡ್ಲಿ, ಗೀತಾ ವಿಕ್ರಂ, ಕಸ್ತೂರಮ್ಮ, ಕೆ.ವರಲಕ್ಷ್ಮಿ, ವಿರೂಪಾಕ್ಷಪ್ಪ, ಕಲ್ಗುಡಿ ಮರಿಯಪ್ಪ, ಕೆ.ವೆಂಕಟೇಶ, ಅಶೋಕಗೌಡ,ಬಿ.ಶರಣಪ್ಪ, ಬಸವರಾಜ, ಗಂಗಾಧರ, ಪುಂಡಗೌಡ, ಜಂತಗಲ್ ಮಲ್ಲಿಕಾರ್ಜುನ.ಪರಶುರಾಮ ಇಟಗಿ ಸೇರಿ ಅನೇಕರಿದ್ದರು.




