Minister Shivaraj Thangadgi should look at us: Kariappa Gudimani
ಸಚಿವ ಶಿವರಾಜ ತಂಗಡಗಿ ಅವರೇ ನಮ್ಮನ್ನು ನೋಡಿ ಸ್ವಲ್ಪ : ಕರಿಯಪ್ಪ ಗುಡಿಮನಿ

ಕೊಪ್ಪಳ : ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ಆರಂಭಿಸಿರುವ ಕಾರ್ಖಾನೆ ವಿರೋಧಿ ಅನಿರ್ದಿಷ್ಟಾವಧಿ ಧರಣಿಯ 7ನೇ ದಿನ ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ (ಕೆ.ಎಂ.ಆರ್.ವಿ), ಕರ್ನಾಟಕ ಜನಶಕ್ತಿ ಹಾಗೂ ಧರಣಿ ಕಲಾ ಬಳಗದ ಬೆಂಬಲದಿಂದ ನೆರವೇರಿತು. ಕೆ.ಎಂ.ಆರ್.ವಿ ರಾಜ್ಯಾಧ್ಯಕ್ಷ ಕರಿಯಪ್ಪ ಗುಡಿಮನಿ ಸತ್ಯಾಗ್ರಹಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಕೊಪ್ಪಳ ಜಿಲ್ಲೆಯ ಉಜ್ವಲ ಭವಿಷ್ಯ ನಿರ್ಮಾಣ ಮಾಡಬೇಕೆಂದು ಜಿಲ್ಲೆಯ ಜನರು ನಿಮ್ಮನ್ನು ಗೆಲ್ಲಿಸಿದ್ದಾರೆ ಎಂದು ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರು ಬಸವರಾಜ ರಾಯರಡ್ಡಿ ಮತ್ತು ಸಚಿವ ಶಿವರಾಜ ತಂಗಡಗಿ ಅವರನ್ನು ಉಲ್ಲೇಖ ಮಾಡಿ, ಇಲ್ಲಿನ ಲಕ್ಷಗಟ್ಟಲೆ ಜನರ ಆರೋಗ್ಯ ಬಲಿಕೊಟ್ಟು ಯಾವ ಸಾಧನೆ ಮಾಡುತ್ತಿದ್ದೀರಿ. ಗವಿಶ್ರೀಗಳು ಬಲ್ಡೋಟಾ ವಿಸ್ತರಣೆ ತಡೆ ಆದೇಶ ತರಬೇಕೆಂದು ಮಾಡಿದ ಧರ್ಮಾದೇಶಕ್ಕೆ ಈವರೆಗೆ ಯಾಕೆ ಸರ್ಕಾರದಿಂದ ಆದೇಶ ತಂದಿಲ್ಲ. ಎಂಟು ತಿಂಗಳಿಂದ ಕಾಯ್ದ ಜನರ ತಾಳ್ಮೆ ಕಟ್ಟೆಯೊಡೆಯುವ ಮುಂಚೆ ಎಚ್ಚೆತ್ತುಕೊಳ್ಳಿ. ಜಿಲ್ಲಾ ಮಂತ್ರಿ ಶಿವರಾಜ ತಂಗಡಗಿ ನಾನು ಆಟದಲ್ಲಿಲ್ಲ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ. ಜಿಲ್ಲಾ ಕೇಂದ್ರ, 20 ಬಾಧಿತ ಹಳ್ಳಿಗಳ ಜನರ ಗೋಳು ಕೇಳದೆ ನೀವು ಎಲ್ಲಿದ್ದೀರಿ. ಈ ಜನರ ಹೋರಾಟ ನಿಮಗೆ ಸಂಬಂಧವಿಲ್ಲವೇ, ನೀವು ಒಂದು ವೇಳೆ ಈ ಹೋರಾಟದ ಬೇಡಿಕೆಗೆ ಶೀಘ್ರ ಸ್ಪಂದನೆ ಮಾಡಿ ಬಲ್ಡೋಟಾ ವಿಸ್ತರಣೆ ನಿಲ್ಲಿಸದೇ ಹೋದರೆ ಮುಂದೆ ಕೆ.ಎಂ.ಆರ್.ವಿ ಬಲಿಷ್ಷ ಹೋರಾಟ ಕಟ್ಟಿ ಚಳುವಳಿಗೆ ಧುಮುಕುತ್ತದೆ ಎಂದರು. ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ನಜೀರಸಾಬ ಮೂಲಿಮನಿ, ಮಾತನಾಡಿ ಬಸಾಪುರ ಕೆರೆಗೆ ಸುತ್ತಲಿನ ಸಾವಿರಾರು ಜಾನುವಾರು, ಕುರಿಗಳು ನೀರು ಕುಡಿಯಲು ನುಗ್ಗಿದಾಗ ಬಲ್ಡೋಟ ಮೂಲದ ಎಂಎಸ್ಪಿಎಲ್ ಕಾರ್ಖಾನೆ ಗೂಂಡಾಗಳು ಹಸುಗಳ ಮೇಲೆ, ದನಗಾಹಿಗಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದರು. ಕುರಿಗಾಹಿಗಳ ಮೇಲೆ, ಹೋರಾಟಗಾರರ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಪೊಲೀಸ್ ಕೇಸ್ ಹಾಕಿದರು. ಇಲ್ಲಿನ ಜಿಲ್ಲಾ ಆಡಳಿತ ಕಾರ್ಖಾನೆ ಏಜಂಟಾಗಿ ಹೋಗಿದೆ. ರೋಸಿಹೋದ ಜನ ಬಂಡೇಳುವ ಕಾಲ ದೂರವಿಲ್ಲ ಎಂದರು. ಕರ್ನಾಟಕ ಜನಶಕ್ತಿ ಸಂಘಟನೆಯ ಕುಮಾರ ಸಮತಳ ಬೆಂಗಳೂರು ಇವರು ಹೋರಾಟವನ್ನು ಬೆಂಬಲಿಸಿ ಮಾತನಾಡಿದರು. ಅಲ್ಲಮಪ್ರಭು ಬೆಟ್ಟದೂರು, ಕೆ.ಬಿ. ಗೋನಾಳ, ಡಿ.ಎಂ.ಬಡಿಗೇರ, ಡಿ.ಎಚ್.ಪೂಜಾರ, ಮಖಬೂಲ್ ರಾಯಚೂರು, ರವಿ ಕಾಂತನವರ, ಈಶ್ವರ ಹತ್ತಿ, ಬಸವರಾಜ ನರೇಗಲ್ ನೇತೃತ್ವ ವಹಿಸಿದ್ದರು. ಶ್ರಮಿಕ ಶಕ್ತಿ ಸಂಘಟನೆಯ ರವಿ ಮೋಹನ ಬೆಂಗಳೂರು, ಮುದಕಪ್ಪ ಹೊಸಮನಿ, ಎಂ.ಡಿ. ಸಿರಾಜ್ ಸಿದ್ದಾಪುರ ಮಾತನಾಡಿದರು. ಅನ್ಸಾರ ಪವನ್, ಯಮನೂರಪ್ಪ ವಕೀಲ, ಕ್ರಾಂತಿ ಗೀತೆ ಹಾಡಿದ ಗೌರಿ ಗೋನಾಳ, ಪ್ರೇಮಾ ಎಚ್, ಕವಿತಾ ಬಿ. ಮಮತಾಜ ಬೇಗಂ, ಭೀಮವ್ವ ಎಸ್.ಕೆ. ನೀಲವ್ವ, ಬಸಮ್ಮ ಕಿಶೋರಿ ಸಂಘಟನೆಯ ಸುಜಾತ, ಕೆ.ವಿ.ಎಸ್. ಸಂಘಟನೆಯ ಕೆ. ದುರುಗೇಶ, ವೀರೇಶ ಕರ್ನಾಟಕ ಜನ ಶಕ್ತಿಯ ಚನ್ನಮ್ಮ, ರಿಝ್ವಾನಾ, ಅಲಿಸಾಬ, ಬ ಉಮೇಶ, ಧರ್ಮರಾಜ ಗೋನಾಳ, ಪಕೀರಸ್ವಾಮಿ, ಸಂಜೀವಮೂರ್ತಿ, ಸುಂಕಪ್ಪ ಮೀಸಿ, ಗವಿಸಿದ್ದಪ್ಪ ಹಲಿಗಿ, ನಾಗರಾಜ ಹೊಸಳ್ಳಿ, ಯಮನವ್ವ ಚಹ್ಹಳ್ಳೂರ, ಶೋಭಾ, ಎಸ್ ಮಹಾದೇವಪ್ಪ ಮಾವಿನಮಡು, ಚನ್ನಬಸಪ್ಪ ಅಪ್ಪಣ್ಣವರ, ನವಾಜ್ ಮಣಿಯಾರ, ಯಲ್ಲಪ್ಪ ಸಿದ್ದರು, ಯಮನೂರಪ್ಪ ಹಾಲಳ್ಳಿ ಬಸಾಪುರ, ರಾಮಪ್ಪ ಎಂ.ಜಿ. ಗೋಣಿಬಸಪ್ಪ, ಭರಮಾಜಿ, ಪ್ರಕಾಶ, ರಾಮಲಿಂಗಯ್ಯ ಶಾಸ್ತ್ರಿಮಠ, ಸಂಜೀವದಾಸ ಚನ್ನದಾಸರ, ಭೀಮಪ್ಪ ಯಲಬುರ್ಗಿ, ಎಂಡಿ ಸಿರಾಜ್ ಮೂಲಿಮನಿ, ವಿರುಪಾಕ್ಷಿ. ಗಾಳೆಪ್ಪ ಎನ್. ಕೆ. ಇತರರು ಇದ್ದರು.
Kalyanasiri Kannada News Live 24×7 | News Karnataka
