Aadhaar amendment will facilitate vote theft: Jyoti fears
ಆಧಾರ್ ತಿದ್ದುಪಡಿ ವೋಟ್ ಚೋರಿಗೆ ಪೂರಕ : ಜ್ಯೋತಿ ಆತಂಕ

ಕೊಪ್ಪಳ : ಪ್ರಸ್ತುತ ಕೆಲವು ತಿಂಗಳಿನಿಂದ ಆಧಾರ್ ತಿದ್ದುಪಡಿ ಮಾಡುವ ವೇಳೆ ತಂದೆ ಹೆಸರು, ಗಂಡನ ಹೆಸರು ಇರದಂತೆ ಮಾಡುವ ಆಧಾರನಿಂದ ವೋಟ್ ಚೋರಿಯ ಹುನ್ನಾರ ಇರಬಹುದಾ ಎಂಬ ಆತಂಕ ಮನೆ ಮಾಡಿದೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಅನುಮಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಾಯಕ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಹಲವು ರಾಜ್ಯಗಳಲ್ಲಿ ನಡೆದಿರುವ ವೋಟ್ ಚೋರಿ ಬಗ್ಗೆ ದಾಖಲೆ ಸಮೇತ ದೇಶದ ಜನರ ಮುಂದೆ ಮಾಹಿತಿ ಇಡುತ್ತಿರುವದು ಸತ್ಯವಾಗಿದೆ, ಮೊದಲು ದೇಶದ ಜನರನ್ನು ಮಬ್ಭಕ್ತರನ್ನಾಗಿ ಮಾಡಿದ್ದರು, ಅವರ ಮೂಲಕ ವಿದ್ಯಾವಂತ, ಬುದ್ಧಿವಂತ ಹೃದಯವಂತ ನಾಯಕನನ್ನು ಪಪ್ಪು ಮಾಡಿದ್ದರು, ಈ ದುರುದ್ದೇಶ ದೇಶಕ್ಕೆ ಗೊತ್ತಾದ ಮೇಲೆ ವೋಟ್ ಚೋರಿ, ಬೂತ್ ಚೋರಿ, ಆಯೋಗ ಚೋರಿ ಅಂತಹ ನಿರ್ಲಜ್ಜ ಕೆಲಸಕ್ಕೆ ಕೈಹಾಕಿದ್ದು ಅತ್ಯಂತ ಹೇಸಿಗೆ ತರಿಸುವ ಕೃತ್ಯವಾಗಿದೆ.
ಹರಿಯಾಣದ ಎರಡು ಬೂತಗಳಲ್ಲಿ ಒಬ್ಬ ಬ್ರೆಜಿಲಿಯನ್ ಮಾಡೆಲ್ ೨೨೩ ಸಲ ಫೊಟೊ ಬೇರೆ ಬೇರೆ ಹೆಸರಲ್ಲಿ ಅದು ಹೇಗೆ ದಾಖಲಾಗುತ್ತದೆ, ಚುನಾವಣೆ ಆಯೋಗದ ಅಧಿಕರಿಗಳು ಏನು ಮಾಡುತ್ತಿದ್ದಾರೆ, ಒಂದೇ ರೂಮಿನ ಮನೆಯಲ್ಲಿ ೪೦ ಜನರು ವಾಸವಾಗಿದ್ದಾರೆ ಎಂಬ ದಾಖಲೆ ಇದ್ದಾಗಲೂ ಯಾಕೆ ಯಾರ ಮೇಲೂ ಇನ್ನೂ ಕ್ರಮ ತೆಗೆದುಕೊಂಡಿಲ್ಲ, ಮೇಲ್ನೋಟಕ್ಕೆ ಇದು ಚುನಾವಣೆ ಆಯೋಗವೇ ಬಿಜೆಪಿ ಜೊತೆಗೆ ಶಾಮೀಲಾಗಿ ಮಾಡಿದ ಕೃತ್ಯ ಎಂದು ಇದರಿಂದ ಸಾಬೀತಾಗುತ್ತದೆ.
ದೇಶದಾದ್ಯಂತ ನಡೆಯುತ್ತಿರುವ ವೋಟ್ ಚೋರಿ ಸಹಿ ಸಂಗ್ರಹ ಅಭಿಯಾನದ ಭಾಗವಾಗಿ ಕೊಪ್ಪಳದಲ್ಲೂ ಅಭಿಯಾನ ನಡೆದಿದ್ದು, ಮಹಿಳಾ ಘಟಕವೂ ಸಹ ಸಹಿ ಸಂಗ್ರಹ ಕೆಲಸದಲ್ಲಿ ತೊಡಗಿದೆ. ಎಲ್ಲಾ ಬ್ಲಾಕ್ ಅಧ್ಯಕ್ಷರ ನೇತೃತ್ವದಲ್ಲಿ ಅಲ್ಲಲ್ಲಿ ಮನೆ ಮನೆಗೆ ತೆರಳಿ ವೋಟ್ ಚೋರಿ ಕುರಿತು ಮಾಹಿತಿ ನೀಡಿ ಸಹಿ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇನ್ನು ದೇಶದ ಅಧಿಕೃತ ವಿರೋಧ ಪಕ್ಷ ಮತ್ತು ಇತರೆ ಪ್ಷಗಳ ಆಕ್ಷೇಪಣೆ ಹೊರತಾಗಿಯೂ ಎಸ್.ಐ.ಆರ್. ನಡೆಸುವದರ ಹಿಂದಿನ ಉದ್ದೇಶ ಏನಿದೆ, ೨೦೧೧ ನಂತರ ಸಾರ್ವತ್ರಿಕ ಗಣತಿಯೂ ೨೦೨೦ರಲ್ಲಿಯೇ ನಡೆಯಬೇಕಿತ್ತು, ಆದರೆ ಆಗ ಅದನ್ನು ಮಾಡದೇ ೫ ವರ್ಷ ತಡವಾಗಿ ಬೇಕಾಬಿಟ್ಟಿಯಾಗಿ ಇಲ್ಲದ ದಾಖಲೆ ಕೇಳಿ ಪ್ರಜೆಗಳನ್ನೇ ಚೋರಿ ಮಾಡುವ ತಂತ್ರ, ಮೂಲನಿವಾಸಿ, ಆದಿವಾಸಿಗಳನ್ನು ದೇಶದಿಂದ ಓಡಿಸುವ ಪ್ಲಾನ್ ಆಗಿದ್ದು, ಅವೆಲ್ಲಾ ನಡೆಯುವದಿಲ್ಲ, ನ್ಯಾಯಾಲಯ ಮದ್ಯಪ್ರವೇಶಿಸಿ ಇಂತಹ ಕೆಲಸ ನಿಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.
ದೇಶದ ರಕ್ಷಣೆಗೆ ರಾಹುಲ್ ಗಾಂಧಿಯಂತಹ ನೇತಾರನ ಅಗತ್ಯವನ್ನು ದೇಶ ಕಂಡುಕೊಂಡಿದೆ, ಈಗ ಬಿಹಾರ ಚುನಾವಣೆಯನ್ನು ಇಂಡಿಯಾ ಘಟಬಂದನ್ ಗೆಲ್ಲುವ ಎಲ್ಲಾ ಭರವಸೆ ಮೂಡಿದ್ದು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ದೊಡ್ಡ ಬಹುಮತದೊಂದಿಗೆ ಕಾಂಗ್ರೆಸ್ ನೇತೃತ್ವದಲ್ಲಿ ಅಧಿಕಾರಕ್ಕೆ ಬರಲಿದ್ದೇವೆ ಎಂದು ಜ್ಯೋತಿ ಎಂ. ಗೊಂಡಬಾಳ ಪ್ರಕಟಣೆ ನೀಡಿದ್ದಾರೆ.
Kalyanasiri Kannada News Live 24×7 | News Karnataka
