Zilla Panchayat Deputy Secretary Shruti listens to officials by acting in a timely manner

ಸಕಾಲದಲ್ಲಿ ಕಾರ್ಯನಿರ್ವಹಿಸಿ ಜಿಲ್ಲಾ ಪಂಚಾಯತಿ ಉಪಾಕಾರ್ಯದರ್ಶಿ ಶೃತಿ ಅಧಿಕಾರಿಗಳಿಗೆ ಕಿವಿಮಾತು
ವರದಿ: ಬಂಗಾರಪ್ಪ ಸಿ .
ಹನೂರು : ಅಧಿಕಾರಿಗಳು ಆಯಾ ಗ್ರಾಮಪಂಚಾಯಿತ್ ಗಳಲ್ಲಿ ಸ್ಥಳಿಯರ ಸಮಸ್ಯೆಗಳನ್ನು ಸಕಾಲದಲ್ಲಿ ಬಗೆಹರಿಸಬೇಕು ಎಲ್ಲಾ ಯೋಜನೆಯನ್ನು ಜಾರಿಗೆ ತರಬೇಕು ಎಂದು ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಚಾಮರಾಜನಗರ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿಗಳಾದ ಶ್ರೀ ಯುತ ಶೃತಿಯವರು ತಿಳಿಸಿದರು.
ಹನೂರು ಪಟ್ಟಣದ ತಾಲ್ಲೂಕಿನ ಕಾರ್ಯನಿರ್ವಾಹಕ ಕಛೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು
ಎಲ್ಲಾ ಪಂಚಾಯಿತಿಗಳಲ್ಲು ನಿಗದಿತ ಸಮಯದಲ್ಲಿ ಕೆಲಸಕಾರ್ಯ ಮುಗಿಸಬೇಕು , ಪಂಚಾಯತಿಯ ವಾಹನಗಳನ್ನು ಹೆಣ್ಣು ಮಕ್ಕಳು ಚಾಲನೆ ಮಾಡವಾಗ ಶಿಸ್ತು ಸಂಯಮ ಮತ್ತು ಕಸಗಳ ನಿರ್ವಹಣೆ ಮಾಡಬೇಕು . ಚಾಲಕರಿಗೆ ನೀಡುವ ಸಂಬಳವನ್ನು ಸಕಾಲದಲ್ಲಿ ನೀಡಿದರೆ ಅವರುಗಳು ಕರ್ತವ್ಯ ಸರಿಯಾಗಿ ನಿರ್ವಹಿಸುತ್ತಿದ್ದಾರೆ , ಎಲ್ಲಾ ಜವಾಬ್ದಾರಿ ಗಳನ್ನು ಸರಿಯಾಗಿ ಪಿಡಿಒಗಳು ಸಮಯಕ್ಕೆ ಸರಿಯಾಗಿ ಮಾಡಬೇಕು , ಗುತ್ತಿಗೆ ಆದಾರದ ಮೇಲೆ ನೌಕರರನ್ನು ಆಯ್ಕೆಮಾಡಿ ಕೆಲಸ ನಿರ್ವಹಿಸಿದವರಿಗೆ ಸರಿಯಾದ ವೇತನ ನೀಡಬೇಕು . ನಮ್ಮಲ್ಲಿ ನಾನೂರು ಹಳ್ಳಿಗಳನ್ನು ನಾನು ಬೇಟಿಯಾಗಬೇಕು ಅಷ್ಠರಲ್ಲಿ ನಿಮ್ಮದೆ ಸಮಸ್ಯೆಗಳನ್ನು ಬಗೆಹರಿಸಬೇಕು . ಪ್ರತಿ ಗ್ರಾಮ ಪಂಚಾಯತಿ ನೀರಿನ ಸಮಸ್ಯೆ ಯಾಗಾದಂತೆ ನೋಡಿಕೊಳ್ಳಬೇಕು. ಧನಗಳು ಕುಡಿಯುವ ನೀರಿನ ತೊಟ್ಡಿಗಳನ್ನು ಮತ್ತು ನೀರಿನ ತೊಟ್ಟಿಗಳ ಸ್ವಚ್ಚತಾ ಕಾರ್ಯಮಾಡಿ ಇಒ ಗಳಿಗೆ ಪೊಟೊಗಳನ್ನು ಕಳುಹಿಸಬೇಕು. ಸೂಳೆರಿಪಾಳ್ಯದಲ್ಲಿ ತೆರಿಗೆಹಣ ಸಕಾಲದಲ್ಲಿ ಮಾಡಬೇಕು , ಸ್ವಚ್ಚತಾ ಕಾರ್ಯಕ್ಕೆ ರಾಜ್ಯಮಟ್ಟದಿಂದಲೆ ಚಾಲನೆ ನೀಡಲಾಗುವುದು. ನೀರಿನ ಸಮಸ್ಯೆಯನ್ನು ಬಗೆಹರಿಸಲು ಪ್ರತ್ಯೇಕವಾಗಿ ಬಜೇಟ್ ಮಂಡನೆಯ ಅವಶ್ಯಕತೆಯಿದೆ ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆಗಳನ್ನು ಆಗದಂತೆ ನೋಡಿಕೊಳ್ಳಬೇಕು
ಮಂಗಲ ಪಂಚಾಯತಿಯಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು , ತೆರಿಗೆ ಸಂದಾಯ ಅಭಿಯಾನ ಸಮಯಕ್ಕೆ ಸರಿಯಾಗಿ ಮುಗಿಸಬೇಕು ,,ಖಾಸಗಿ ಬೊರ್ವೆಲ್ ಗಳಲ್ಲಿ ನೀರು ಪಡೆಯುತ್ತಿದ್ದು ತಿಂಗಳಿಗೆ ಹದಿಮೂರು ಸಾವಿರ ನೀಡುತ್ತಿದ್ದೆವೆ ಎಂದು ರಾಮಪುರ ಪಿಡಿಒ ಪುಷ್ಪಲತರವರು ತಿಳಿಸಿದರು. ದೊಡ್ಡಲ್ಲೂತ್ತು ರು ಗ್ರಾಮದಲ್ಲಿ ಮಳೆಯಾಗಿದ್ರಿಂದ ಖಾಸಗಿ ಬೋರ್ವೆಲ್ ಎರಡುರಲ್ಲಿ ಒಂದಕ್ಕೆ ಖಾಸಗಿಯವರಿಗೆ ಹತ್ತು ಸಾವಿರ ಹಣ ನೀಡುತ್ತಿದ್ದೆವೆ ಎಂದು ಚಲುವರಾಜು ತಿಳಿಸಿದರು. ಇಒ ಮಾತನಾಡಿ ಮೊಣಗಳ್ಳಿ . ಮತ್ತು ರಾಮಪುರ ಗ್ರಾಮ ,ಬೆಟ್ಟ ಪಂಚಾಯತಿ ಗಳಲ್ಲಿ ಮಕ್ಕಳ ಮತ್ತು ಮಹಿಳೆಯರ ಗ್ರಾಮ ಸಭೆ ಮಾಡಲು ತಿರ್ಮಾನಿಸಲಾಗಿದೆ ಎಂದರು.
ಇದೇ ಸಮಯದಲ್ಲಿ ಇಒ ಉಮೇಶ್ ,ಬಿಇಒ ಮಹೇಶ್ . , ಚೆಸ್ಕಂ ಎಇಇ ರಂಗಸ್ವಾಮಿ . ತಾಲೂಕಿನ ವೈದ್ಯಾಧಿಕಾರಿ ಪ್ರಕಾಶ್ , ಪಸು ವೈಧ್ಯಾಧಿಕಾರಿ ಸಿದ್ದರಾಜು .ತಾಲ್ಲೂಕಿನ ಪಂಚಾಯತಿ ಎಡಿ ರಾದ . ಪಿಡಿಒ ಗಳಾದ ಸುರೇಶ್ ,ರಾಮು .ಮಾದೇಶ್ .ಸಿದ್ದಪ್ಪ .ಪುಷ್ಪಲತ . ವಿಶ್ವನಾಥ್ . ಡಾಕ್ಟರ್ ಶಿವಣ್ಣ ,ಮಾದೇಶ್ ,ಗಂಗಾದರ್ .ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಗಸ್ವಾಮಿ ಸೇರಿದಂತೆ ಇನ್ನಿತರರು ಹಾಜರಿದ್ದರು.
Kalyanasiri Kannada News Live 24×7 | News Karnataka
