Breaking News

ಕಾರ್ಖಾನೆಗೆ ದೌರ್ಜನ್ಯದಿಂದ ರೈತರ ಭೂಮಿ ಕಿತ್ತುಕೊಂಡರು: ಭೀಮಸೇನ ಕಲಕೇರಿ

Farmers' land was snatched away by the factory due to violence: Bhima Sena Kalakeri
Screenshot 2025 11 05 18 07 50 50 6012fa4d4ddec268fc5c7112cbb265e76042594550051531587 1024x564


ಕೊಪ್ಪಳ : ಬಲ್ಡೋಟ ಇತರೆ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ, ಬಸಾಪುರ ಕೆರೆ ಎಂಎಸ್ಪಿಎಲ್ ಅತಿಕ್ರಮಣದಿಂದ ಮುಕ್ತಗೊಳಿಸಲು, 20 ಕಾರ್ಖಾನೆ ದೂಳು ಬಾಧಿತ ಹಳ್ಳಿಗಳ ಪರಿಸರ ಪುನರ್ ನಿರ್ಮಾಣ ಮಾಡುವಂತೆ ಆಗ್ರಹಿಸಿ 6ನೇ ದಿನದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯನ್ನು ಕರ್ನಾಟಕ ರಾಜ್ಯ ರೈತ ಸಂಘ (ಬಡಗಲಪುರ ನಾಗೇಂದ್ರ ಬಣ) ಜಿಲ್ಲಾ ಘಟಕದಿಂದ ಯಶಸ್ವಿಗೊಳಿಸಿದರು. ಜಿಲ್ಲಾಧ್ಯಕ್ಷ ಭೀಮಸೇನ ಕಲಕೇರಿ ಇವರು ಜನರ ಅಭಿವೃದ್ಧಿ ಮಾಡುತ್ತೇವೆ ಎಂದು ತುಂಗಭದ್ರಾ ತಟದ ಭೂಮಿಯನ್ನು ಕೆ. ಐ. ಎ. ಡಿ. ಬಿ. ಎನ್ನುವ ಸರ್ಕಾರದ ಗೂಂಡಾ ಏಜೆನ್ಸಿಯಿಂದ ಭೂಮಿ ಕಿತ್ತುಕೊಂಡರು. ನಮ್ಮ 25ಕ್ಕೂ ಹೆಚ್ಚು ಹಳ್ಳಿಗಳ ಜನರ ಸಂಪೂರ್ಣ ಆರೋಗ್ಯ, ಪರಿಸರ ಹಾಳು ಮಾಡಿದ್ದಾರೆ. ಈಗ ಇವರನ್ನು ಓಡಿಸುವ ಅವಕಾಶ ಒದಗಿ ಬಂದಿದೆ. ಆ ನೇತೃತ್ವದ ಜವಾಬ್ದಾರಿ ರಾಜ್ಯ ರೈತ ಸಂಘ ವಹಿಸುತ್ತದೆ. ಸಚಿವ ಎಂಬಿ. ಪಾಟೀಲ್ ಕಿರ್ಲೋಸ್ಕರ ವಿಸ್ತರಣೆಯಾಗುತ್ತದೆ ಎಂದು ಪುಣೆ ಬೀದಿಯಲ್ಲಿ ನಿಂತು ಕೂಗಿರುವುದನ್ನು ನಾವು ಖಂಡಿಸುತ್ತೇವೆ ಎಂದರು. ಕಾರ್ಯಾಧ್ಯಕ್ಷ ಕನಕಪ್ಪ ಪೂಜಾರ ಇಲ್ಲಿ ಸ್ಥಾಪಿಸಿದ ಯಾವುದೇ ಕಾರ್ಖಾನೆಗಳಲ್ಲಿ ಸ್ಥಳಿಯರಿಗೆ ಉದ್ಯೋಗ ಕೊಟ್ಟಿಲ್ಲ. ಇವರು ಉದ್ಯೋಗ ಕೊಡುತ್ತೇವೆ ಎನ್ನುವುದು ಕೇವಲ ಭ್ರಮೆ ಎಂದರು. ಯಂಕಪ್ಪ ಕಬ್ಬೇರ ಕಾಸನಕಂಡಿ, ಸುಡುಗಾಡಪ್ಪ ಕಾಸನಕಂಡಿ, ಶರಣಪ್ಪ ಕುಂಬಾರ, ನಾಗಪ್ಪ ಗೋಡೆಕಾರ. ಯಲ್ಲಪ್ಪ ಸಿದ್ದರು, ಶೇಖಪ್ಪ ಮೈನಳ್ಳಿ, ಅಮರೇಶ ಕರಡಿ ಕುಕನಪಳ್ಳಿ, ಸತ್ಯಾಗ್ರಹಕ್ಕೆ ಬೆಂಬಲಿಸಿ ಮಾತನಾಡಿದರು. ಅಲ್ಲಮಪ್ರಭು ಬೆಟ್ಟದೂರು, ಡಿ.ಎಚ್..ಪೂಜಾರ, ಕೆ.ಬಿ. ಗೋನಾಳ, ಶರಣು ಗಡ್ಡಿ, ಕಾಂಗ್ರೆಸ್ ಮುಖಂಡ ಮಂಜುನಾಥ ಗೊಂಡಬಾಳ, ಮಹಾದೇವಪ್ಪ ಎಸ್. ಮಾವಿನಮಡು, ಚನ್ನವೀರಯ್ಯ ಹಿರೇಮಠ ಕುಣಿಕೆರಿ, ಮಖಬೂಲ್ ರಾಯಚೂರು, ಕೆ. ಶಶಿಕಲಾ, ಸುಂಕಮ್ಮ, ಡಿ.ಎಂ.ಬಡಿಗೇರ,, ಮಖಬೂಲ್ ರಾಯಚೂರು, ಬಸವರಾಜ ನರೇಗಲ್, ಹುಸೇನಪ್ಪ ಮೆಣೆದಾಳ, ನಿಂಗಪ್ಪ ಇಂದರಗಿ, ಶರಣಬಸಪ್ಪ ದಾನಕೈ, ಯಲ್ಲಪ್ಪ ಸಿದ್ದರು, ಯಮನೂರಪ್ಪ ಹಾಲಳ್ಳಿ ಬಸಾಪುರ, ಯಮನೂರಪ್ಪ ಮಾಲಿಪಾಟೀಲ್, ಸುರೇಶ ಹುರಳಿ, ಮಾಂತೇಶ ಮಡಿವಾಳ, ಹನುಮಪ್ಪ ಕದ್ರಳ್ಳಿ, ಶಿವಪ್ಪ ಹಡಪದ, ನಾಗರಾಜ ಯಲಿಗಾರ,, ಬಸವರಾಜ ಹೂಗಾರ, ಮಲ್ಲಪ್ಪ ಕುಣಿಕೆರಿ, ನಿಂಗನಗೌಡ ಗ್ಯಾರಂಟಿ, ಬಸನಗೌಡ ಯಲಮಗೇರಿ ಇದ್ದರು.

ಜಾಹೀರಾತು

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.