Breaking News

ಎಫ್.ಡಿ ಸ್ಕೀಮ್‌ನಲ್ಲಿ ಸೇವಾ ನ್ಯೂನ್ಯತೆ ಎಸಗಿದ ಸುರಕ್ಷಾಬಂಧು ಚಿಟ್ಸ್ ಸಂಸ್ಥೆಗೆ ಬಡ್ಡಿ ಸಹಿತ ಮೊತ್ತ ಪಾವತಿಸುವಂತೆ ಆದೇಶ

Order to pay the amount with interest to Surakshabandhu Chits for service deficiency in FD scheme

ಕೊಪ್ಪಳ ಅಕ್ಟೋಬರ್ 28 (ಕರ್ನಾಟಕ ವಾರ್ತೆ): ಎಫ್.ಡಿ ಸ್ಕೀಮ್ ನಲ್ಲಿ ಮೆಚ್ಯೂರಿಟಿ ಅವಧಿ ನಂತರ ಹಣ ಪಾವತಿಸಲು ಸತಾಯಿಸಿದ ಗಂಗಾವತಿ ತಾಲ್ಲೂಕಿನ ಹಿರೇಜಂತಕಲ್ ನಲ್ಲಿರುವ ಸುರಕ್ಷಾಬಂಧು ಚಿಟ್ಸ್(ಕರ್ನಾಟಕ) ಪ್ರೆöÊ.ಲಿ. ಸಂಸ್ಥೆಗೆ ದಂಡ ಸಹಿತ ಮೆಚ್ಯೂರಿಟಿ ಹಣವನ್ನು ದೂರುದಾರರಿಗೆ ಪಾವತಿಸುವಂತೆ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:
ವಿಜಯನಗರ ಜಿಲ್ಲೆಯ ಹೊಸಪೇಟೆಯ ದೂರುದಾರರಾದ ನಂ.1 ಶಶಿಧರ ಎ.ಬಸವನಗೌಡ ಹಾಗೂ ಇನ್ನಿಬ್ಬರು ಗಂಗಾವತಿ ತಾಲ್ಲೂಕಿನ ಹಿರೇಜಂತಕಲ್‌ನಲ್ಲಿರುವ ಸುರಕ್ಷಾಬಂಧು ಚಿಟ್ಸ್(ಕರ್ನಾಟಕ) ಪ್ರೆöÊ.ಲಿ. ಸಂಸ್ಥೆಯಲ್ಲಿ ಒಂದು ವರ್ಷದ ಅವಧಿಗೆ ಎಫ್.ಡಿ ಸ್ಕೀಮ್ ಮಾಡಿಸಿದ್ದರು. ಒಂದು ವರ್ಷದ ಅವಧಿ ಪೂರ್ಣಗೊಂಡ ನಂತರ ಎಫ್.ಡಿ ಗಳು ಮೆಚ್ಯೂರಿಟಿಯಾಗಿದ್ದು, ಮೆಚ್ಯೂರಿಟಿ ಹಣವನ್ನು ಪಾವತಿಸುವಂತೆ ದೂರುದಾರರು ಸಂಸ್ಥೆಯ ನಿರ್ದೇಶಕರಾದ ಎದುರುದಾರರಾದ ನಂ.1  ಗೌರಮ್ಮ ಮಹಾಲಿಂಗಪ್ಪ ಹಾಗೂ ಎದುರುದಾರ ನಂ.2 ವಿನಯಕುಮಾರ ಮಹಾಲಿಂಗಪ್ಪ ಅವರ ಬಳಿ ಕೇಳಿದ್ದರು. ಆದರೆ ಎದುರುರದಾರರು ಇಂದು, ನಾಳೆ ಎಂದು ಹಣ ನೀಡದೇ ಸತಾಯಿಸಿದ್ದರು.  ಎದುರುದಾರರ ಅನುಚಿತ ವ್ಯಾಪಾರ ಪದ್ಧತಿಯಿಂದ ಸೇವಾ ನ್ಯೂನ್ಯತೆ ಎಸಗಿದ್ದು, ತಮಗೆ ಉಂಟಾದ ತೊಂದರೆ ನಷ್ಟಕ್ಕೆ ಪರಿಹಾರ ಕೋರಿ ದೂರುದಾರರು ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ದೂರು ದಾಖಲಿಸಿಕೊಂಡ ಆಯೋಗವು ಎದುರುದಾರರಿಗೆ ಖುದ್ದು ನೋಟಿಸ್ ಜಾರಿ ಮಾಡಿದ್ದರೂ ಎದುರುದಾರರು ಜಿಲ್ಲಾ ಆಯೋಗಕ್ಕೆ ವಾಯಿದೆ ದಿನದಂದು ಗೈರು ಹಾಜರಾಗಿದ್ದು, ತಮ್ಮ ತಕರಾರು ಸಲ್ಲಿಸಲು ವಿಫಲರಾಗಿದ್ದಾರೆ. ಸಾಕ್ಷಿ ಹೇಳಿಕೆ ಅಥವಾ ಲಿಖಿತ, ಮೌಖಿಕ ವಾದ ಮಂಡನೆಯನ್ನು ಸಹ ಮಾಡಿಲ್ಲ.
ಆಯೋಗದ ಅಧ್ಯಕ್ಷರಾದ ಜಿ.ಇ.ಸೌಭಾಗ್ಯಲಕ್ಷಿö್ಮÃ ಹಾಗೂ ಸದಸ್ಯರಾದ ರಾಜು ಎನ್.ಮೇತ್ರಿ ರವರು ದೂರುದಾರರ ವಾದವನ್ನು ಆಲಿಸಿ, ಎದುರುದಾರರು ದೂರುದಾರರಿಗೆ ಒಂದು ವರ್ಷದ ಫಿಕ್ಸ್ ಡಿಪಾಸಿಟ್ ಸ್ಕೀಮ್‌ನಲ್ಲಿ ಮಾಆಡಿಸಿದ ಎಫ್.ಡಿಗಳ ಮೊತ್ತವನ್ನು ನೀಡದೇ ಇರುವುದು ಹಾಗೂ ಪ್ರಕರಣದಲ್ಲಿ ಹಾಜರಾಘದೇ ಇರುವುದನ್ನು ಪರಿಗಣಿಸಿ ಮತ್ತು ಎದುರುದಾರರಿಂದ ಉಂಟಾದ ಸೇವಾ ನ್ಯೂನ್ಯತೆ, ಅನುಚಿತ ವ್ಯಾಪಾರ ಪದ್ಧತಿಗಾಗಿ ಎದುರುದಾರರು ದೂರುದಾರರಿಂದ ಪಡೆದುಕೊಂಡ ಒಂದು ವರ್ಷದ ಎಫ್.ಡಿ ಸ್ಕೀಮ್‌ನಲ್ಲಿ ಮಾಡಿಸಿದ ಎಫ್.ಡಿ ಮೊತ್ತಗಳಾದ 1ನೇ ದೂರುದಾರರಿಗೆ ರೂ.3,50,000/-, 2ನೇ ದೂರುದಾರರಿಗೆ ರೂ.10,00,000/- ಮತ್ತು 3ನೇ ದೂರುದಾರರಿಗೆ ರೂ.10,00,000/- ಗಳಿಗೆ ತಲಾ ಶೇ.6 ರ ಬಡ್ಡಿ ಸಮೇತ ದೂರಿನ ದಿನಾಂಕದಿAದ ಪಾವತಿಯಾಗುವವರೆಗೆ ದೂರುದಾರರಿಗೆ ನೀಡುವಂತೆ ಆದೇಶಿಸಿದೆ. ದೂರುದಾರರಿಗೆ ಉಂಟಾದ ಮಾನಸಿಕ ಯಾತನೆಗೆ ರೂ.10,000/- ಹಾಗೂ ದೂರಿನ ಖರ್ಚು ರೂ.5,000/- ಗಳನ್ನು ಆದೇಶದ ದಿನಾಂಕದಿAದ 45 ದಿನಗಳ ಒಳಗಾಗಿ ಎದುರುದಾರರು ದೂರುದಾರರಿಗೆ ಪಾವತಿಸುವಂತೆ ಆದೇಶಿಸಿದ್ದಾರೆ ಎಂದು ಆಯೋಗದ ರಿಜಿಸ್ಟಾçರ್ ಹಾಗೂ ಸಹಾಯಕ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು

About Mallikarjun

Check Also

screenshot 2025 10 29 16 40 46 37 6012fa4d4ddec268fc5c7112cbb265e7.jpg

ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಗೊಂಡಬಾಳಗೆ ಯುವ ಕಾಂಗ್ರೆಸ್ ಸನ್ಮಾನ

Youth Congress felicitates Congress President Jyoti Gondaba ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಗೊಂಡಬಾಳಗೆ ಯುವ ಕಾಂಗ್ರೆಸ್ ಸನ್ಮಾನ ಕೊಪ್ಪಳ; …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.