Krishna Ukkunda assumes charge as Joint Director of Horticulture Department

ಕೊಪ್ಪಳ ಅಕ್ಟೋಬರ್ 28 (ಕರ್ನಾಟಕ ವಾರ್ತೆ): ಕೊಪ್ಪಳ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾಗಿ ಕೃಷ್ಣ ಸಿ. ಉಕ್ಕುಂದ ಅವರು ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದಾರೆ.
ಸರ್ಕಾರದ ಅಧಿಸೂಚನೆಯನ್ವಯ ಕೊಪ್ಪಳ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕಚೇರಿಯನ್ನು ಜಂಟಿ ನಿರ್ದೇಶಕರ ಕಚೇರಿಯಾಗಿ ಉನ್ನತೀಕರಿಸಿ, ಈ ಹುದ್ದೆಗೆ ಕೃಷ್ಣ ಸಿ. ಉಕ್ಕುಂದ ಅವರಿಗೆ ಬಡ್ತಿ ನೀಡಲಾಗಿರುತ್ತದೆ. ಸಂಬಂದಿಸಿದ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ, ರಹಸ್ಯ ಪತ್ರಗಳು ಹಾಗೂ ಇನ್ನಿತರ ವಿಷಯಗಳನ್ನು ತೋಟಗಾರಿಕೆ ಜಂಟಿ ನಿರ್ದೇಶಕರು, ಜಿಲ್ಲಾ ಪಂಚಾಯತ್, ಕೊಪ್ಪಳ, ತೋಟಗಾರಿಕೆ ಜಂಟಿ ನಿರ್ದೇಶಕರ ಕಚೇರಿ, ಎಲ್.ಐ.ಸಿ.ಆಫೀಸ್ ಎದುರುಗಡೆ, ಕೊಪ್ಪಳ-583231, ಮೊಬೈಲ್ ಸಂಖ್ಯೆ:-9448999237, ಇಮೇಲ್: jdhkoppal@gmail.com ವಿಳಾಸಕ್ಕೆ ವ್ಯವಹರಿಸುವಂತೆ ತೋಟಗಾರಿಕೆ ಜಂಟಿ ನಿರ್ದೇಶಕರ ಕಛೇರಿ ಪ್ರಕಟಣೆ ತಿಳಿಸಿದೆ.
Kalyanasiri Kannada News Live 24×7 | News Karnataka
