
Farmer organizations staged a day-night sit-in for the irrigation project, said MLA Manjunath Beti.

ವರದಿ: ಬಂಗಾರಪ್ಪ .ಸಿ .
ಹನೂರು: ಕ್ಷೇತ್ರದ ನೀರಾವರಿ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ವಡೆಕಹಳ್ಳ ಗ್ರಾಮದಲ್ಲಿ ಕರ್ನಾಟಕ ರಾಜ ರೈತ ಸಂಘದ ವತಿಯಿಂದ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎಂ ಆರ್ ಮಂಜುನಾಥ್ ಧರಣಿ ಬಿಡುವಂತೆ ಮನವೊಳಿಸಿದರು.

ಹನೂರು ತಾಲೂಕಿನ ವಡಕೆ ಹಳ್ಳ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಂಟಳ್ಳಿ ಏತ ನೀರಾವರಿ ಯೋಜನೆ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮಾತನಾಡಿ ದಂಟಳ್ಳಿ ಗ್ರಾಮದಿಂದ ಕೇವಲ 1.5 ಕಿಲೋಮೀಟರ್ ದೂರದಲ್ಲಿ ಕಾವೇರಿ ನದಿ ಹರಿದರೂ, ಕೂಡ ಹನೂರು ತಾಲೂಕಿನ ಮಾರ್ಟಳ್ಳಿ, ಕುರಟ್ಟಿಹೊಸರು, ರಾಮಾಪುರ, ಕೌದಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ನದಿಯಿಂದ ನೀರು ತಲುಪಿಲ ಕಾವೇರಿ ಜಲ ವಿವಾದ ಮಂಡಳಿ ನಿಯಮದಂತೆ, ಪ್ರತಿ ವರ್ಷ 63.83 ಟಿಎಂಸಿ ನೀರನ್ನು ಕುಡಿಯುವ ನೀರು ಮತ್ತು ಸಣ್ಣ ನೀರಾವರಿ ಯೋಜನೆಗಳಿಗೆ ಬಳಸಬೇಕು ಎಂಬ ನಿರ್ಧಾರವಿದೆ.
ಕಾವೇರಿ ನದಿ ಹತ್ತಿರದಲ್ಲಿ ಹರಿಯುತ್ತಿದ್ದರು ದೀಪದ ಬುಡದಲ್ಲಿ ಕತ್ತಲು ಎಂಬಂತೆ ನಮಗೆ ಕುಡಿಯಲು ಸಹ ನೀಡಿದ ವ್ಯವಸ್ಥೆ ಇಲ್ಲ. ವ್ಯವಸಾಯಕಂತೂ ನೀರು ಇಲ್ಲವೇ ಇಲ್ಲ. ಇಂತಹ ಸಂದರ್ಭದಲ್ಲಿ ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ಸಹ ಮೂಲಭೂತ ಸೌಲಭ್ಯಗಳ ಕಲ್ಪಿಸದೆ ಇರುವ ಇಂತಹ ವ್ಯವಸ್ಥೆಯಲ್ಲಿ ನಾವು ಬದುಕುತ್ತಿದ್ದೇವೆ. ಇದೀಗ ಕಾವೇರಿ ನದಿಯಿಂದ ದಂಟಳ್ಳಿ ಏತ ನೀರಾವರಿ ಯೋಜನೆಯನ್ನು ಡಿಪಿಆರ್ ಸಿದ್ದಪಡಿಸುವಂತೆ ಒತ್ತಾಯಿಸಿದರು..
ಶಾಸಕರು ಭೇಟಿ : ಪ್ರತಿಭಟನಾ ನಿರತ ಸ್ಥಳಕ್ಕೆ ಶಾಸಕ ಎಂ.ಆರ್ ಮಂಜುನಾಥ್ ಭೇಟಿ ನೀಡಿ ಪ್ರತಿಭಟನ ನಿರತ ರೈತರ ಸಮಸ್ಯೆಗಳನ್ನು ಆಲಿಸಿ ದಂಟಳ್ಳಿ ಏತ ನೀರಾವರಿ ಯೋಜನೆಯ ಡಿಪಿಆರ್ ಕೈಗೊಳ್ಳಲು ಸಾಕಷ್ಟು ಸಮಯಾವಕಾಶ ಬೇಕು. ಮುಂದಿನ ವರ್ಷದ ಜನವರಿಯೊಳಗೆ ಡಿಪಿಆರ್ ತಯಾರಿ ಮಾಡಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು ಸಹ ಇದಕೊಪ್ಪದ ರೈತರು ಡಿಪಿಆರ್ ಮಾಡುವ ತನಕ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಅಹೋ ರಾತ್ರಿ ಧರಣಿಯನ್ನು ಹಮ್ಮಿಕೊಂಡಿದ್ದಾರೆ.
ಇದೆ ಸಂದರ್ಭದಲ್ಲಿ ರೈತರಾದ ಶೈಲೇಂದ್ರ, ಬಸವರಾಜು,ಬೆಟ್ಟೆಗೌಡ, ತಮಿಳುನಾಡು ರೈತಸಂಘದ ರವಿಕುಮಾರ್,ಅರ್ಪುತ ರಾಜ್, ಮೋಳೆ ರಾಜು, ಪೆರಿಯ ನಾಯಗಮ್,ವಸಂತ, ಲಾರೆನ್ಸ್,ಪುಟ್ಟಸ್ವಾಮಿ,
ಕರಿಯಪ್ಪ,ಲೂರ್ದುಸ್ವಾಮಿ, ಶಾಂತರಾಜು, ಶಿವಪ್ಪ, ಮಹದೇವಪ್ಪ, ಜೋಸೆಫ್, ಅಂಥೋನಿಸ್ವಾಮಿ, ಎಸ್ ಮಾದಪ್ಪ,ಪೀಟರ್ ವಿಜಯಕುಮಾರ್,ಲಿಂಗೇಶ್, ಬಸವರಾಜು, ಡೇವಿಡ್, ಬಿದರಹಳ್ಳಿ ಪುಟ್ಟಸ್ವಾಮಿ,ಲೂಕಾಶ್,ರವಿ, ದಿವ್ಯಾ ನಂದ,ಜೋಸ್ವಾ,ಸೆಲ್ವಿ,ಮೇರಿ, ಉಷಾ,ಕಾನಿಕ್ಯ ಮೇರಿ,ಕುಮಾರಿ, ನೂರಾರು ರೈತರು ರೈತ ಮಹಿಳೆಯರು ಭಾಗವಹಿಸಿದ್ದರು.



