Breaking News

ಯುಜಿಡಿ ಕೊಳಚೆ ನೀರಿನ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಕೆ.ಟಿ ಶಾಂತಕುಮಾರ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ.

A massive protest led by K.T. Shanthakumar demanding a solution to the UGD sewage problem.

 

Screenshot 2025 10 27 19 08 52 33 6012fa4d4ddec268fc5c7112cbb265e71849439341391032762 1024x458

ತಿಪಟೂರು: ತಾಲ್ಲೋಕಿನ ಜನರಿಗೆ ಕಂಟಕವಾಗಿ ಕಾಡುತ್ತಿರುವ ಯೂಜಿಡಿ ಕೊಳಚೆ ನೀರಿನ ಸಮಸ್ಯೆಗೆ ಪರಿಹಾರ ನೀಡಿ,ಕೊಳಚೆ ನೀರಿನಿಂದ ಈಚನೂರು ಕೆರೆ ಕಲೂಷಿತವಾಗಿದ್ದು ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿದೆ,ನಗರದ ಅಂತರ್ ಜಲದ ಮೂಲವಾಗಿದ್ದ ತಿಪಟೂರು ಅಮಾನೀಕೆರೆಗೆ ನೀರು ತುಂಬದ ಕಾರಣ ಕುಡಿಯುವ ನೀರಿಗೆ ಹೆಚ್ಚಿನ ಸಮಸ್ಯೆ ಉಂಟಾಗಲಿದೆ,ತಾಲ್ಲೋಕಿನಲ್ಲಿ ಅಭಿವೃದ್ದಿ ಶೂನ್ಯವಾಗಿದೆ ಎಂದು ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಜಾಹೀರಾತು

ನಗರದ ನಗರಸಭಾ ವೃತ್ತದಲ್ಲಿ ಜೆಡಿಎಸ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪಾದಯಾತ್ರೆ ಹಾಗೂ ಪ್ರತಿಭಟನೆಯಲ್ಲಿ ಮಾತನಾಡಿದ ಕೆ.ಟಿ ಶಾಂತಕುಮಾರ್ ತಿಪಟೂರು ತಾಲ್ಲೋಕಿನಲ್ಲಿ ಅಭಿವೃದ್ದಿ ಶೂನ್ಯವಾಗಿದೆ,ಕಲ್ಪತರು ನಾಡು ಕೊಬ್ಬರಿ ಬೀಡು ಎಂದು ಪ್ರಖ್ಯಾತವಾಗಿದ ತಿಪಟೂರು ಯೂಜಿಡಿ ಕೊಳಚೆ ನೀರಿನಿಂದ ಕೊಳಚೆ ನಗರ ಎಂದು ರಾಜ್ಯದಾದ್ಯಂತ ಅಪಖ್ಯಾತಿ ಪಡೆಯುತ್ತಿದೆ.ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಈಡೇನಹಳ್ಳಿ ವೆಟ್ ವೆಲ್ ಹಾಗೂ ಗೊಡಗೊಂಡನಹಳ್ಳಿ ವೆಟ್ ವೆಲ್ ಗಳು ಸರಿಯಾಗಿ ಕಾರ್ಯನಿರ್ವಹಣೆ ಮಾಡದ ಕಾರಣ ಕೋಡಿಸರ್ಕಲ್ ಬಳಿ ಯುಜಿಡಿ ನೀರು ಉಕ್ಕಿಹರಿಯುತ್ತಿದ್ದು,ಜನಸಾಮಾನ್ಯ ಓಡಾಡುವುದು ಕಷ್ಟವಾಗಿದೆ,ಕೊಳಚೆ ನೀರು ಹಳ್ಳಗಳ ಮೂಲಕ ಹಿಂಡಿಸ್ಕೆರೆ ನಂತರ ಈಚನೂರು ಕೆರೆ ಸೇರುತ್ತದೆ.ನಗರದ ಜನ ಮತ್ತೆ ಅದೇ ಕೊಳಚೆ ನೀರನ್ನೇ ಕುಡಿಯುವ ದುಸ್ತಿತಿಗೆ ತಂದಿದ್ದಾರೆ.ನಗರದ ಹಾಸನ ರಸ್ತೆ,ಹಾಲ್ಕುರಿಕೆ ರಸ್ತೆ,ಶೆಟ್ಟಿಕೆರೆ ರಸ್ತೆ ಸೇರಿ ಬಹುತೇಕ ರಸ್ತೆಗಳು ಗುಂಡಿಬಿದ್ದು ಯಮ ಸ್ವರೂಪಿಯಾಗಿವೆ.ಶಾಸಕರೇ ನಿಮ್ಮ ಯೂಜಿಡಿ ಸಮಸ್ಯೆಗೆ ಪರಿಹಾರ ನೀಡಿ .ನಗರಸಭೆ ಪೌರಾಯುಕ್ತರು ಸಾರ್ವಜನಿಕರ ಸಮಸ್ಯೆಗಳಿಗೆ, ಸರಿಯಾಗಿ ಸ್ಪಂದಿಸುತ್ತಿಲ್ಲ, ಪೌರಾಯುಕ್ತರು ವರ್ಗಾವಣೆ ಮಾಡಿಸಿ.ಇಲ್ಲದೇ ಹೋದರೆ ನಗರಸಭೆ ಮುಂಭಾಗ ಉಪವಾಸ ಸತ್ಯಾಗ್ರಹ ನಡೆಸುವ ಎಚ್ಚರಿಕೆ ನೀಡಿದರು.

ಜೆಡಿಎಸ್ ಜಿಲ್ಲಾಪ್ರಧಾನ ಕಾರ್ಯದರ್ಶಿ ಮತ್ತಿಘಟ್ಟ ಶಿವಸ್ವಾಮಿ ಮಾತನಾಡಿ ತಾಲ್ಲೋಕಿನಲ್ಲಿ ಯಾವುದೇ ಅಭಿವೃದ್ದಿ ಕೆಲಸಗಳು ನಡೆಯುತ್ತಿಲ್ಲ.ಗ್ಯಾರಂಟಿ ಯೋಜನೆಗಳಿಗೆ ಹಣಖರ್ಚುಮಾಡಿ,ಅಭಿವೃದ್ದಿ ಕೆಲಸಗಳಿಗೆ ಹಣವಿಲ್ಲದೆ ಖಜಾನೆ ಖಾಲಿಯಾಗಿದೆ,ಯೂಜಿಡಿ ಕೇವಲ ಹಣ ನುಂಗಲು ದಾರಿ ಮಾಡಿಕೊಂಡಿದ್ದಾರೆ.ಕೊಳಚೆ ನೀರಿನಿಂದ ತಿಪಟೂರು ಮರ್ಯಾದೆ ರಾಜ್ಯದಲ್ಲಿ ಹರಾಜ ಮಾಡಿದ್ದಾರೆ.ಕುಡಿಯುವ ನೀರಿಗೆ ಪರದಾಡುತ್ತಿದ್ದಾರೆ.ಈಚನೂರು ಕೆರೆ ಕಲೂಷಿತವಾಗಿದ್ದು ಈ ನೀರಿಕುಡಿದರೆ,ಅಪಾಯಕಾರಿ ರೋಗಗಳಿಗೆ ತುತ್ತಾಗುವ ಆತಂಕವಿದೆ.ರಸ್ತೆಗುಂಡಿ ಮುಚ್ಚಲು ಸರ್ಕಾರದಲ್ಲಿ ಹಣವಿಲ್ಲ.ಜಿಲ್ಲಾಧಿಕಾರಿಗಳೇ ನಗರದ ಯೂಜಿಡಿ ಸನಸ್ಯೆಗೆ ಪರಿಹಾರ ನೀಡಿ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಗೊರಗೊಂಡನಹಳ್ಲಿ ಸುದರ್ಶನ್.ಷಡಕ್ಷರಿ.ನಗರಾಧ್ಯಕ್ಷ ರಾಜು.ಎಸ್.ಸಿ ಘಟಕದ ಅಧ್ಯಕ್ಷ ಧನಂಜಯ್ ಪೆದ್ದಿಹಳ್ಳಿ ಮುಖಂಡರಾದ ನಟರಾಜ್.ಷಡಕ್ಷರಿ,ರಾಜಶೇಖರ್ ಕರವೇ ಅಧ್ಯಕ್ಷ ಸತೀಶ್ ಮಾರನಗೆರೆ.ಜಕ್ಕನಹಳ್ಳಿ ಮೋಹನ್.ಕವಿತಾ ಮಹೇಶ್‌.ಮುಂತಾದವರು ಉಪಸ್ಥಿತರಿದರು

About Mallikarjun

Check Also

screenshot 2025 10 25 19 10 15 39 6012fa4d4ddec268fc5c7112cbb265e7.jpg

ಮಾಧ್ಯಮ ಅಕಾಡೆಮಿಯಲ್ಲಿ ಟಿಜೆಎಸ್ ಜಾರ್ಜ್‌ ದತ್ತಿ ರಾಷ್ಟ್ರೀಯ ಪ್ರಶಸ್ತಿ ಸ್ಥಾಪನೆ: ವಿಧಾನಪರಿಷತ್‌ ಸದಸ್ಯ ಕೆ. ಶಿವಕುಮಾರ್‌ ಘೋಷಣೆ

Establishment of TJS George Endowment National Award at Media Academy: Legislative Council Member K. Shivakumar …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.