Who is the one to say how many children one should have? Jyoti's question

ಕೊಪ್ಪಳ: ದೀಪಾವಳಿ ನಿಮಿತ್ಯ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕಲ್ಲಡ್ಕ ಭಟ್ಟ ಅವರು ಅತ್ಯಂತ ಕೆಟ್ಟ ಮನಸ್ಥಿತಿಯ ಅನಾವರಣಗೊಳಿಸಿದ್ದಾರೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಟೀಕಿಸಿದ್ದಾರೆ.
ದೀಪಾವಳಿ ಹಬ್ಬದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಳಿಗೆ ಎಂಬಲ್ಲಿ ಆಯೋಜಿಸಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಈ ಹೇಳಿಕೆ ನೀಡಿದ್ದಾರೆ.
ವಿಧಾನ ಸಭಾಧ್ಯಕ್ಷ ಯು. ಟಿ. ಖಾದರ್ ಪ್ರತಿನಿಧಿಸುವ ಮಂಗಳೂರು (ಉಳ್ಳಾಲ) ಕ್ಷೇತ್ರದ ಬಗ್ಗೆ ಮಾತನಾಡಿದ ಪ್ರಭಾಕರ್ ಭಟ್, “ಉಳ್ಳಾಲದಲ್ಲಿ ಹಿಂದೂ ಅಭ್ಯರ್ಥಿ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಸಾಧ್ಯವೇ ಇಲ್ಲ. ಯಾಕೆಂದರೆ ಅಲ್ಲಿನ ಬ್ಯಾರಿ (ಕರಾವಳಿಯ ಮುಸ್ಲಿಮರು)ಗಳ ಮನೆಯಲ್ಲಿ ಆರರಿಂದ ಏಳು ಮಕ್ಕಳಿದ್ದಾರೆ. ಅಲ್ಲಾನ ಹೆಸರಿನಲ್ಲಿ ಅವರು ಮಕ್ಕಳು ಮಾಡುತ್ತಲೇ ಇದ್ದಾರೆ. ಹಿಂದೂಗಳಲ್ಲಿ ವೋಟಿಲ್ಲದ ಕಾರಣ ನಮ್ಮವರು ಸೋಲುತ್ತಿದ್ದಾರೆ ಎಂದು ಹೇಳಿರುವದು ನಿಜಕ್ಕೂ ಮಾನಗೇಡಿ ಕೃತ್ಯ. ಬಿಜೆಪಿ, ಸಂಘ-ಪರಿವಾರದ ಕೆಲಸ ಕೇವಲ ಇಂತಹ ದ್ವೇಷ ಹುಟ್ಟಿಸುವದಾಗಿದೆ. ಯಾರು ಎಷ್ಟು ಮಕ್ಕಳನ್ನು ಹೆರಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರವಾಗಲಿ, ಯೋಚನೆಯಾಗಲಿ ಗಂಡ ಹೆಂಡತಿಗೆ ಸಂಬಂದಿಸಿದ್ದು ಹೊರತು ಮೂರನೇ ವ್ಯಕ್ತಿಗೆ ಅಲ್ಲಿ ಕೆಲಸವಿಲ್ಲ. ಇನ್ನು ಅವರವರ ಕುಟುಂಬದ ರಕ್ಷಣೆಯನ್ನು ಅವರೇ ನೋಡಿಕೊಳ್ಳಬೇಕಿದೆ, ಬೇಕಾಬಿಟ್ಟಿ ಜಿ ಎಸ್ ಟಿ ಮೂಲಕ, ಸುಖಾಸುಮ್ಮನೇ ಬೆಲೆ ಏರಿಕೆ ಮಾಡಿ ಜನರ ಬದುಕನ್ನು ಹೈರಾಣಾಗಿಸಿದ ಬಿಜೆಪಿ ಮೋದಿ ಸರಕಾರದಿಂದ ಮಕ್ಕಳ ರಕ್ಷಣೆ ಅಸಾಧ್ಯ. ಹಿಂದೂ ರಕ್ಷಕರೆಂದು ಬೊಬ್ಬೆ ಇಡುವ ಜನರಿಂದ ದೇಶದ ಯಾವ ಜನರೂ ಸುಖವಾಗಿ ಇಲ್ಲ. ಅವರು ಕೇವಲ ಅಧಿಕಾರಶಾಹಿ ಮೇಲ್ವರ್ಗದ ಶ್ರೀಮಂತ ಜನರಿಗೆ ಮಾತ್ರ ಎಂದು ಜ್ಯೋತಿ ಗೊಂಡಬಾಳ ಕುಟುಕಿದ್ದಾರೆ.
Kalyanasiri Kannada News Live 24×7 | News Karnataka
