Valmiki community torchlight procession against sword

ಕೊಪ್ಪಳ : ಜಿಲ್ಲಾ ವಾಲ್ಮೀಕಿ ನಾಯಕ ಮಹಾಸಭಾದ ವತಿಯಿಂದ ಇಂದು ನಗರದ ವಾಲ್ಮೀಕಿ ಭವನದಿಂದ ಅಶೋಕ ವೃತ್ತದ ವರೆಗೆ ಪಂಜಿನ ಮೆರವಣಿಗೆ ನಡೆಸುವ ಮೂಲಕ ವಾಲ್ಮೀಕಿ ಸಮುದಾಯವನ್ನು ಅವಹೇಳನಕಾರಿಯಾಗಿ ನಿಂದಿಸಿದ ಬೆಳಗಾವಿ ಮಾಜಿ ಸಂಸದ ರಮೇಶ್ ಕತ್ತಿಯನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಮುದಾಯದ ಮುಖಂಡ ಟಿ. ರತ್ನಾಕರ ರಾಜ್ಯದ ಬಹುದೊಡ್ಡ ಸಂಖ್ಯೆಯ ವಾಲ್ಮೀಕಿ ಸಮುದಾಯವನ್ನು ನಿಂದಿಸುವ ಮೂಲಕ ರಮೇಶ್ ಕತ್ತಿ ದೊಡ್ಡ ತಪ್ಪು ಮಾಡಿದ್ದಾರೆ, ಸದಾ ಹೋರಾಟದ ಬದುಕನ್ನು ಸಾಗಿಸುವ, ಶಾಂತಿ ಸೌಹಾರ್ದಕ್ಕೆ ಹೆಸರಾಗಿರುವ ವಾಲ್ಮೀಕಿ ಸಮುದಾಯವನ್ನು ಕೆದಕುವ ಮೂಲಕ ರಾಜ್ಯದಲ್ಲಿ ದಂಗೆ ಏಳುವಂತೆ ಮಾಡುತ್ತಿದ್ದಾರೆ ಇದು ಅಕ್ಷಮ್ಯ ಅಪರಾಧ. ಕೂಡಲೇ ಸರ್ಕಾರ ಅವರನ್ನು ಬಂಧಿಸಬೇಕು ಇಲ್ಲವಾದಲ್ಲಿ ತೀವ್ರ ಸ್ವರೂಪದ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಮಹಾಸಭಾ ಅಧ್ಯಕ್ಷ
ಡಾ. ಕೆ. ಎನ್. ಪಾಟೀಲ್, ಜಿಲ್ಲಾ ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ರಾಮಣ್ಣ ಕಲ್ಲನವರ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಮುಖಂಡರುಗಳಾದ ಬಸವರಾಜ ಶಹಪೂರ, ಮಾಜಿ ಜಿ. ಪಂ. ಸದಸ್ಯರುಗಳಾದ ಹನುಮೇಶ ನಾಯಕ ಮತ್ತು ರಾಮಣ್ಣ ಚೌಡಕಿ, ಶಿವಮೂರ್ತಿ ಗುತ್ತೂರ, ಕೊಟೇಶ ದದೇಗಲ್, ಕೆ.ಬಿ. ಗೋನಾಳ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ, ರಾಮಣ್ಣ ಬೆಳವಿನಾಳ, ಶಾಂತಪ್ಪ ಬೆಳವಿನಾಳ, ಸೋನು ವದಗನಾಳ, ಶರಣಪ್ಪ ಕನಕಗಿರಿ, ಭೀಮಣ್ಣ ಹವಳೆ, ನಾಗರಾಜ ಇದ್ಲಾಪೂರ, ವಿಶಾಲಾಕ್ಷಮ್ಮ ವಾಲ್ಮೀಕಿ, ಗಂಗಮ್ಮ, ದೀಪಮ್ಮ, ಸಂತೋಷ ಗುದಗಿ, ಲಕ್ಷ್ಮಣ ಚೌಡಕಿ, ರಮೇಶ ಚೌಡಕಿ ಇತರರಿದ್ದರು.
Kalyanasiri Kannada News Live 24×7 | News Karnataka
