The lack of a ban on campaign plexes in Hanur town is a huge loss to the government's coffers.

ವರದಿ: ಬಂಗಾರಪ್ಪ .ಸಿ .
ಹನೂರು : ಯಾವುದೇ ಜಾಹಿರಾತು ಅಥವಾ ಅದಕ್ಕೆ ಸಂಬಂಧದ ಬಿತ್ತಿ ಪತ್ರಗಳನ್ನು ಸರ್ಕಾರಿ ಖಛೇರಿಗಳ ಮೇಲೆ ಅಂಟಿಸಿ ಮತ್ತು ನೇತು ಹಾಕಬೇಕಾದರೆ ಸರ್ಕಾರಕ್ಕೆ ನಿಗದಿ ಪಡಿಸಿದ ಹಣವನ್ನು ಆಯಾ ಸಂಬಂಧಿಸಿದ ಪಟ್ಟಣದ ಅಥವಾ ಗ್ರಾಮ ಪಂಚಾಯತಿ ಕಾರ್ಯಾಲಯವಿದೆ ಅಲ್ಲಿ ಇಂತಿಷ್ಟು ಹಣವನ್ನು ಶುಲ್ಕ ಪಾವತಿ ಮಾಡುವ ಮೂಲಕ ಪ್ರಚಾರ ಮಾಡಬೇಕು ಎಂಬ ನಿಯಮವಿದೆ ಎಂದು ಮಹೇಶ್ ತಿಳಿಸಿದರು
ಹನೂರು ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಕಟ್ಟಡದ ಮೇಲೆ ಈಗಾಗಲೆ ಹಲವಾರು ಪೊಸ್ಟರ್ ಮತ್ತು ಬ್ಯಾನರ್ ಗಳನ್ನು ಕೆಲವು ಖಾಸಗಿ ವ್ಯಕ್ತಿಗಳು ನೇತುಹಾಕಿದ್ದು ಅದರಲ್ಲಿ ಬಹುತೇಕ ಎಲ್ಲಾ ಜಾಹಿರಾತುಗಳಿಗೂ ಯಾವುದೇ ರೀತಿಯ ಶುಲ್ಕ ನೀಡದೆ ಪ್ರಚಾರ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು ಅದೇ ರೀತಿಯಲ್ಲಿ ಹೇಳುವುದಾದರೆ ಪಟ್ಟಣದಲ್ಲಿ ಸಮಸ್ಯೆಗಳ ಸುರಿಮಳೆಯೆ ತುಂಬಿದೆ ವಿವಿಧ ವಾರ್ಡ್ ಗಳಲ್ಲಿ ಸರಿಯಾದ ಕಸ ಸಂಗ್ರಹಣೆ ಮಾಡುತ್ತಿಲ್ಲ , ಸಮಯಕ್ಕೆ ಸರಿಯಾಗಿ ನೀರು ಬಿಡುತ್ತಿಲ್ಲ ,ಬೀದಿ ದ್ವೀಪಗಳ ನಿರ್ವಹಣೆಯನ್ನು ಮಾಡುತ್ತಿಲ್ಲ ಸರ್ಕಾರದಿಂದ ಖಾಯಂ ಅಧಿಕಾರಿಗಳನ್ನು ನೇಮಿಸುತ್ತಿಲ್ಲ ಜನ ಸಾಮನ್ಯರ ಕೆಲಸಕಾರ್ಯಗಳು ನಡೆಯುವುದಿಲ್ಲ ,ಪಟ್ಟಣ ಪಂಚಾಯಿತಿಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಸಂಬಳ ನೀಡುತ್ತಿಲ್ಲ ಒಟ್ಟಾರೆಯಾಗಿ ಹೇಳಬೇಕಾದರೆ ಸಮಸ್ಯೆಗಳ ಅಗರವೆ ತುಂಬಿದೆ ಮುಂದಿನ ದಿನಗಳಲ್ಲಿ ಜನಪ್ರತಿನಿದಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಇತ್ತ ಕಡೆ ಗಮನ ಹರಿಸಿ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಮಾಡಲಾಗುವುದು ಎಂದು ತಿಳಿಸಿದರು .
Kalyanasiri Kannada News Live 24×7 | News Karnataka
