The day after Diwali is 'Gorehabba', a festival of fighting in dung.

ದೀಪಾವಳಿಯ ಮರುದಿನ ಸಗಣಿಯಲ್ಲಿ ಹೊಡೆದಾಡಿಕೊಳ್ಳುವ ‘ಗೊರೆಹಬ್ಬ’.
ಚಾಮರಾಜನಗರದ :ಗಡಿಭಾಗ ತಾಳವಾಡಿ ತಾಲೂಕಿನ ಗುಮಟಾಪುರದಲ್ಲಿ ಪ್ರತಿವರ್ಷವೂ ಬಲಿಪಾಡ್ಯಮಿ ಮಾರನೇ ದಿನ ಗೊರೆಹಬ್ಬ ನಡೆಯುತ್ತದೆ ಒಬ್ಬರಿಗೊಬ್ಬರು
ಹೊಡೆದಾಡಿಕೊಂಡ ಗ್ರಾಮಸ್ಥರು , ದೀಪಾವಳಿ ಹಬ್ಬ ಬರುವುದನ್ನೇ ಕಾಯುವ ಇಲ್ಲಿನ ಗ್ರಾಮಸ್ಥರು ವಿಶಿಷ್ಟ ಆಚರಣೆಗೆ ಹಾತೊರೆಯುತ್ತಾರೆ. ಸಗಣಿ ಮಧ್ಯೆಯೇ ಹೊರಳಾಡಿ, ಎರಚಾಡಿ, ಹೊಡೆದಾಡಿ ವಿಶೇಷ ಸಂಪ್ರದಾಯ ಪಾಲಿಸುತ್ತಾರೆ.
ಚಾಮರಾಜನಗರ ಜಿಲ್ಲೆಯ ಗಡಿಭಾಗವಾದ ತಾಳವಾಡಿ ತಾಲೂಕಿನ ಗುಮಟಾಪುರದಲ್ಲಿ ಪ್ರತಿವರ್ಷವೂ ಬಲಿಪಾಡ್ಯಮಿ ಮಾರನೆ ದಿನ ಗೊರೆಹಬ್ಬ ಎಂಬ ಆಚರಣೆ ನಡೆಯುತ್ತದೆ. ಅದರಂತೆ, ಈ ವರ್ಷವೂ ಕೂಡ ಶತಮಾನಗಳಿಂದ ನಡೆಯುತ್ತಾ ಬಂದಿರುವ ಕನ್ನಡಿಗರ ಹಬ್ಬಕ್ಕೆ ಗುರುವಾರ ಸಹಸ್ರಾರು ಮಂದಿ ಸಾಕ್ಷಿಯಾದರು.
ದೀಪಾವಳಿ ಹಬ್ಬದ ಮರುದಿನ ಗುಮಟಾಪುರದಲ್ಲಿ ಗೊರೆಹಬ್ಬ ಆಚರಣೆ ನಡೆಯುತ್ತದೆ. ಸಗಣಿಯನ್ನು ಒಬ್ಬರಿಗೊಬ್ಬರು ಎರಚಾಡಿ, ಹೊಡೆದಾಡಿಕೊಳ್ಳುವುದೇ ಹಬ್ಬದ ವಿಶೇಷ.
ಗ್ರಾಮದ ಬೀರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಗ್ರಾಮಸ್ಥರು ಪೂಜೆ ಸಲ್ಲಿಸಿ ರಾಶಿ ರಾಶಿ ಸಗಣಿಯನ್ನು ದೇವಾಲಯ ಮುಂದೆ ಪೇರಿಸುತ್ತಾರೆ. ನಂತರ ಮಕ್ಕಳು ಪ್ರತಿ ಮನೆ ಮನೆಗೂ ಹೋಗಿ ಸಂಗ್ರಹಿಸಿದ್ದ ಹಾಲು ತುಪ್ಪದಲ್ಲಿ ಊರ ಮುಂಭಾಗದಲ್ಲಿರುವ ಕಾರೇಶ್ವರನಿಗೆ ಅಭಿಷೇಕ ನಡೆಸಿ, ಚಾಡಿಕೋರ ಎಂಬಾತನನ್ನು ಕತ್ತೆ ಮೇಲೆ ಕುಳ್ಳಿರಿಸಿ ಆತನಿಗೆ ಹಂಬಿನ ಸೊಪ್ಪು, ಹುಲ್ಲಿನ ಮೀಸೆ, ನಾಮ ಹಾಕಿ ಮೆರವಣಿಗೆಯಲ್ಲಿ ಕರೆತಂದು ಬೀರಪ್ಪನ ದೇವಾಲಯದ ಸುತ್ತಾ ಪ್ರದಕ್ಷಿಣೆ ಹಾಕಿದ ಬಳಿಕ ಸಗಣಿ ಎರಚಾಟ ಆರಂಭಗೊಳ್ಳಲಿದೆ.
Kalyanasiri Kannada News Live 24×7 | News Karnataka
