H Nagappa Circle not being restored due to the negligence of the authorities
ವರದಿ: ಬಂಗಾರಪ್ಪ .ಸಿ .
ಹನೂರು : ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ನಾಮಕರಣಗೊಂಡಿದ್ದ “ದಿವಂಗತ ಹೆಚ್. ನಾಗಪ್ಪ ವೃತ್ತವನ್ನು ” ಅಧಿಕಾರಿಗಳು ಮತ್ತೆ ಅಭಿವೃದ್ಧಿ ಪಡಿಸಬೇಕಾಗಿದೆ ಎಂದು ಮಾಜಿ ಶಾಸಕಿ ಪರಿಮಳ ನಾಗಪ್ಪ ತಿಳಿಸಿದರು.
ಪಟ್ಟಣದ ಕೇಂದ್ರ ಸ್ಥಾನ ಖಾಸಗಿ ಬಸ್ ನಿಲ್ದಾಣ ಮಲೆ ಮಹದೇಶ್ವರ ಬೆಟ್ಟ ಮುಖ್ಯ ರಸ್ತೆ ಹಾಗೂ ಬಂಡಳ್ಳಿ ಗ್ರಾಮದ ಕಡೆಗೆ ತೆರಳಲು ಕೂಡಿರುವ ಸರ್ಕಲ್ ಅಭಿವೃದ್ಧಿ ಪಡಿಸಿ ದಿವಂಗತ ಹೆಚ್ ನಾಗಪ್ಪ ಸರ್ಕಲ್ ಎಂದು ನಾಮಫಲಕ ಅಳವಡಿಸುವ ಕೆಲಸವಾಗಬೇಕಿದೆ , ದಿವಂಗತ ಹೆಚ್ ನಾಗಪ್ಪ ವೃತ್ತ ಅಭಿವೃದ್ಧಿ ಬಗ್ಗೆ ಮಾತನಾಡಿದ ಅವರು ಮಾಜಿ ಸಚಿವರು ದಿವಂಗತ ಹೆಚ್ ನಾಗಪ್ಪನವರು ಹನೂರು ಕ್ಷೇತ್ರದ ಅಭಿವೃದ್ಧಿಯ ಕೊಡುಗೆಗಳು ಜನಮಾನಸದಲ್ಲಿ ಎಂದಿಗೂ ಮರೆಯುವಂತಿಲ್ಲ. ಈ ಕ್ಷೇತ್ರದ ಜನತೆಗಾಗಿ ತಮ್ಮ ಪ್ರಾಣವನ್ನೇ ಬಿಟ್ಟಿದ್ದಾರೆ. ಅವರ ನೆನಪಿನಲ್ಲಿ ಸರ್ಕಲ್ ಗೆ ಹೆಸರು ಇಡಲಾಗಿತ್ತು,
ಅಂದಿನ ಜೆಡಿಎಸ್ ಪಕ್ಷದ ವರಿಷ್ಠರಾದ ಹೆಚ್ ಡಿ ಕುಮಾರಸ್ವಾಮಿ ಅವರ ಆಡಳಿತದಲ್ಲಿ ಈ ನಮ್ಮ ಹನೂರು ಕ್ಷೇತ್ರದ ಜನತೆಯ ಒಕ್ಕೂರಿನ ಕೂಗಿಗೆ ಹನೂರು ಪಟ್ಟಣದ ಕೇಂದ್ರ ಸ್ಥಾನದಲ್ಲಿ ಮಲೆ ಮಹದೇಶ್ವರ ಬೆಟ್ಟ ಮುಖ್ಯ ರಸ್ತೆ ಮೂರು ಕಡೆಗಳಿಂದ ಕೂಡುವ ವೃತ್ತಕ್ಕೆ ದಿವಂಗತ ಹೆಚ್ ನಾಗಪ್ಪ ಸರ್ಕಲ್ ಎಂದು ನಾಮಕರಣ ಮಾಡಿ ನಾಮಫಲಕ ಅಳವಡಿಸಿ ಉದ್ಘಾಟನೆ ಮಾಡಲಾಗಿತ್ತು.

ನಂತರದ ಕಳೆದ ಐದು ವರ್ಷಗಳಿಂದ ರಸ್ತೆ ಅಗಲೀಕರಣ ಅಭಿವೃದ್ಧಿ ಕಾಮಗಾರಿ ನಡೆಯುವಾಗ ರಸ್ತೆ ಅಭಿವೃದ್ಧಿ ಪಡಿಸಲು ಸರ್ಕಲ್ ಬಳಿ ಅಳವಡಿಸಲಾಗಿದ್ದ ,ದಿವಂಗತರಾದ ಹೆಚ್.ನಾಗಪ್ಪ ವೃತ್ತ”ದ ನಾಮಫಲಕವನ್ನು ತೆರವು ಮಾಡಲಾಗಿತ್ತು. ತದ ನಂತರ ದಿನ ಕಳೆದಂತೆ ಈಗಾಗಲೇ ಕೆಶೀಫ್ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಬಹುತೇಕ ಮುಗಿದಿದ್ದು ಆದಷ್ಟು ಬೇಗ ಮತ್ತೆ “ದಿವಂಗತ ಹೆಚ್.ನಾಗಪ್ಪ ವೃತ್ತ” ನಾಮಫಲಕ ಅಳವಡಿಸುವ ಕೆಲಸವಾಗಬೇಕಿದೆ ಎಂದು ತಿಳಿಸಿದರು.
ಇದೇ ಸಮಯದಲ್ಲಿ ಮಾಜಿ ಶಾಸಕಿ ಪರಿಮಳ ನಾಗಪ್ಪ, ಹಾಗೂ ಹೆಚ್ ನಾಗಪ್ಪ ಅಭಿಮಾನಿಗಳು ಕಾರ್ಯಕರ್ತ ಮುಖಂಡರುಗಳು ಆಗಮಿಸಿ ಖಾಸಗಿ ಬಸ್ ನಿಲ್ದಾಣ ಬಳಿ ಮೂರು ಭಾಗಗಳಾಗಿ ಕೂಡಿರುವ ರಸ್ತೆಗೆ ಈಗಾಗಲೇ ನಾಮಕರಣ ಮಾಡಿರುವ ದಿವಂಗತ ಹೆಚ್ ನಾಗಪ್ಪ ಸರ್ಕಲ್ ಅಭಿವೃದ್ಧಿ ಬಗ್ಗೆ ಕೇಶಿಫ್ ಅಧಿಕಾರಿಗಳ ಜೊತೆ ಚರ್ಚಿಸಿ ಮಾಹಿತಿ ಪಡೆದರು.
ಮುಂದಿನ ಎರಡು ತಿಂಗಳಲ್ಲಿ ಕೆಶೀಫ್ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳಲಿದೆ. ಸರ್ಕಲ್ ಬಳಿ ಇರುವ ಒತ್ತುವರಿ ತೆರವು ಸಮಸ್ಯೆಯನ್ನು ಬಗೆಹರಿಸಿ ಆದಷ್ಟು ಬೇಗ ದಿವಂಗತ ಹೆಚ್ ನಾಗಪ್ಪ ಸರ್ಕಲ್ ನಾಮಫಲಕ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೆಶೀಫ್ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಮ್ತಾಜ್ ಬಾನು ಅವರು ಮಾತನಾಡಿ ದಿವಂಗತ ನಾಗಪ್ಪ ಅವರ ಸರ್ಕಲ್ ನಿರ್ಮಾಣಕ್ಕೆ ಇರುವ ಸಮಸ್ಯೆಗಳನ್ನು ಬಗೆಹರಿಸಲು ಸ್ಪಂದಿಸಿ ಆದಷ್ಟು ಬೇಗ ಅಭಿವೃದ್ಧಿಗೆ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೇಶಿಫ್ ಇಲಾಖೆ ಅಧಿಕಾರಿಗಳು, ವೀರಶೈವ ಮಹಾಸಭಾ ಅಧ್ಯಕ್ಷರು ಗೌಡ್ರು ಸೋಮಣ್ಣ, ಕಾರ್ಯದರ್ಶಿ ಕುಮಾರ್ ಮಂಗಲ, ಶಾಗ್ಯ ಮಾದೇವಪ್ಪ, ಚಿಂಚಳ್ಳಿ ಮಹಾದೇವಪ್ಪ, ಕಣ್ಣೂರು ಬಸವರಾಜಪ್ಪ, ಲೋಕ್ಕನಹಳ್ಳಿ ರಾಜು, ಹನೂರು ದಲಿತ ಮುಖಂಡ ಪುಟ್ಟರಾಜು , ಜಗನ್ನಾಥನಾಯ್ಡು, ಸುಬ್ಬಣ್ಣ, ಶಿವಪುರ ಪ್ರಭು, ನಾಗನತ್ತ ಮಲ್ಲೇಶ್, ಕುಮಾರ್, ಮಂಗಲ ಮೂರ್ತಿ, ಕನಕರಾಜ, ರಾಮಪುರ ಬಿಜೆಪಿ ಮಂಡಲ ಅಧ್ಯಕ್ಷ ರಾಜು ಚಂಗವಾಡಿ, ಕಾಮಗೆರೆ ಸುಂದ್ರಪ್ಪ, ಕೆ.ಬಿ ಮಧು ಸೇರಿದಂತೆ ಇನ್ನಿತರರು ಹಾಜರಿದ್ದರು.
Kalyanasiri Kannada News Live 24×7 | News Karnataka
