Mahan Kids Diwali Fair celebrates its significance, aims to impart practical knowledge: Netraj Guruvin Math

ಗಂಗಾವತಿ: ನಗರದ ಪ್ರತಿಷ್ಠಿತ ಶಾಲೆಯಾದ ಮಹಾನ್ ಕಿಡ್ಸ್ ಶಾಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಮಹಾನ್ ಕಿಡ್ಸ್ ದೀಪಾವಳಿ ಜಾತ್ರೆಯ ಸಂಭ್ರಮ ಮತ್ತು ಹಬ್ಬದ ವ್ಯವಹಾರಿಕ ಜ್ಞಾನವನ್ನು ವಿದ್ಯಾರ್ಥಿ ದಿಶೆಯಲ್ಲಿ ವಿದ್ಯಾರ್ಥಿಗಳ ವ್ಯವಹಾರದ ಜ್ಞಾನಕ್ಕಾಗಿ ಹಾಗೂ ದೀಪಾವಳಿ ಸೇರಿದಂತೆ ಮತ್ತಿತರ ಹಬ್ಬಗಳ ಆಚರಣೆ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಮಹಾನ್ ಕಿಡ್ಸ್ ದೀಪಾವಳಿ ಜಾತ್ರೆ ಆಯೋಜಿಸಲಾಗಿದೆ. ಜೊತೆಗೆ ಭಯವನ್ನು ದೂರ ಹೋಗಲಾಡಿಸಲು ಶಾಲಾ ಮಕ್ಕಳು ವಿಭಿನ್ನ ರೀತಿಯ ಪ್ರೇತಾತ್ಮಗಳ ದೃಶ್ಯಗಳನ್ನು ನೋಡಲು ಬಂದ ಪಾಲಕರಿಗೆ ತೋರಿಸಿದ್ದಾರೆ. ನಮ್ಮ ಶಾಲೆಯ ಮಕ್ಕಳ ಪಾಲಕರು ಮತ್ತು ಈ ಕಾರ್ಯಕ್ರಮಕ್ಕೆ ಆಗಮಿಸಿ ಪ್ರೋತ್ಸಾಹ ನೀಡಿದಂತ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಎಂದು ಮಹಾನ್ ಕಿಡ್ಸ್ ಶಾಲೆಯ ಅಧ್ಯಕ್ಷ ನೇತ್ರಾಜ್ ಗುರುವಿನ್ ಮಠ ಹೇಳಿದರು.
ಅವರು ಶನಿವಾರದಂದು ದೀಪಾವಳಿ ಪ್ರಯುಕ್ತ ಶಾಲೆಯಲ್ಲಿ ಆಯೋಜಿಸಿದ ಮಹಾನ್ ಕಿಡ್ಸ್ ದೀಪಾವಳಿ ಜಾತ್ರೆಯ ಸಮಾರಂಭ ಉದ್ದೇಶಿಸಿ ಮಾತನಾಡಿದರು. ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಮಾರಾಟ ವ್ಯಾಪಾರ ವಹಿವಾಟು ಸೇರಿದಂತೆ ಹಬ್ಬದ ಮಹತ್ವವನ್ನು ಶಾಲಾ ಮಕ್ಕಳಿಂದ ತಿಳಿ ಹೇಳಲಾಯಿತು ಎಂದು ಹೇಳಿದರು.
ನಂತರ ಶಾಲೆಯ ಮುಖ್ಯೋಪಾಧ್ಯಾಯನಿ ಸವಿತಾ ಗುರುವಿನ್ ಮಠ ಮಾತನಾಡಿ ನಮ್ಮ ಶಾಲೆಯಲ್ಲಿ ಮಹಾನ್ ಕಿಡ್ಸ್ ದೀಪಾವಳಿ ಸಂಭ್ರಮವನ್ನು ಶಾಲಾ ಮಕ್ಕಳಿಂದ ಆಯೋಜಿಸಲಾಗಿದೆ. ಈ ಶಾಲಾ ಮಕ್ಕಳ ಕಾರ್ಯಕ್ರಮಕ್ಕೆ ಆಗಮಿಸಿದ ಪಾಲಕರು ಮತ್ತು ವ್ಯಾಪಾರಸ್ಥರಿಗೆ ಈ ಕಾರ್ಯಕ್ರಮಕ್ಕೆ ಬಂದAತ ಮತ್ತು ಸಹಕಾರ ನೀಡಿದ ಪಾಲಕರಿಗೆ ಎಲ್ಲರಿಗೂ ಧನ್ಯವಾದಗಳು ತಿಳಿಸಿದರು. ಇದರ ಮಧ್ಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಮಹಾನ್ ಕಿಡ್ಸ್ ಶಾಲಾ ಶಿಕ್ಷಕರಾದ ಚಂಪಾರಾಣಿ, ಕುಮುದಿನಿ, ಸಹನಾ, ಪೂರ್ಣಿಮಾ, ಗೌಸಿಯಾ, ಸಲಿನಾ, ಪ್ರಶಾಂತ, ಅಖಿಲ, ಸಿದ್ದೇಶ, ರೇಷ್ಮಾ, ರೇಣುಕಾ ಪ್ರಸಾದ, ಜೆಬಾ, ಮಂಜುನಾಥ, ಸಂತೋಷ, ಶಾಂತಿ, ದೀಪಾ, ಅಂಜಲಿ, ಅಮೃತ, ಶ್ರೀದೇವಿ, ವೀರಯ್ಯ, ಗೌರಮ್ಮ, ಕ್ರೇಜಿ, ಸುಮಂಗಲ, ಲತಾಶ್ರೀ, ನಾಗರತ್ನ ಸೇರಿದಂತೆ ಶಾಲಾ ಮಕ್ಕಳ ಪಾಲಕರು ಪಾಲ್ಗೊಂಡಿದ್ದರು.
Kalyanasiri Kannada News Live 24×7 | News Karnataka
