Three-day state-level Indian Medical Association conference on 24,25,26
ಅ, 24,25,26 ಮೂರು ದಿನ ರಾಜ್ಯಮಟ್ಟದ ಭಾರತೀಯ ವೈದ್ಯಕೀಯ ಸಂಘದ ಸಮ್ಮೇಳನ

ಗಂಗಾವತಿ:ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ತಾಲೂಕ ಮಟ್ಟದ ಭಾರತೀಯ ವೈದ್ಯಕೀಯ ಸಂಘದ ನೇತ್ರತ್ವದಲ್ಲಿ ಕರ್ನಾಟಕ ರಾಜ್ಯ ಭಾರತೀಯ ವೈದ್ಯಕೀಯ ಸಂಘದ ವಾರ್ಷಿಕ ಸಮ್ಮೇಳನ ಇದೆ ಅಕ್ಟೋಬರ್ 24 25 ಹಾಗೂ 26 ಮೂರು ದಿನಗಳ ಕಾಲ ಅಮರ್ ಗಾರ್ಡನ್ ನಲ್ಲಿ ನಡೆಯಲಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾಕ್ಟರ್ ವಿ ವಿ ಚಿನಿವಾಲರ್ ಹೇಳಿದರು.
ಅವರು ಭಾನುವಾರ ನಗರದ ಐ ಎಂಎ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ 1928 ರಲ್ಲಿ ಕೇವಲ 22 ಸದಸ್ಯರೊಂದಿಗೆ ಕಲ್ಕತ್ತಾದಲ್ಲಿ ಆರಂಭಗೊಂಡ ಭಾರತೀಯ ವೈದ್ಯಕೀಯ ಸಂಘ ಸ್ವಾತಂತ್ರದ ಬಳಿಕ 1949ರಲ್ಲಿ ದೆಹಲಿಗೆ ವರ್ಗಾಯಿಸಲ್ಪಟ್ಟಿತು ಪ್ರಸ್ತುತ ಈಗ 38 0000 ಸದಸ್ಯರನ್ನು ಒಳಗೊಂಡ ದೇಶದ 32 ರಾಜ್ಯಗಳಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 1750 ಶಾಖೆಗಳನ್ನು ಒಳಗೊಂಡಿದೆ. ಕರ್ನಾಟಕ ರಾಜ್ಯದಲ್ಲಿ 180 ಶಾಖೆಗಳನ್ನು ಹೊಂದಿದ್ದು 31,000 ಸದಸ್ಯರನ್ನು ಒಳಗೊಂಡಿದೆ.
ಸರ್ಕಾರೇ ತರ ಸಂಸ್ಥೆಯಾದ ಭಾರತೀಯ ವೈದ್ಯಕೀಯ ಸಂಘ ಅಧುನಿಕ ವೈದ್ಯಕೀಯ ಪದ್ಧತಿಯನ್ನು ವೃತ್ತಿಯನ್ನಾಗಿಸುವುದರ ಜೊತೆಗೆ ವೈದ್ಯರ ಸ್ವಯಂ ಸೇವಾ ಸಂಸ್ಥೆಯಾಗಿದೆ.

ವೈದ್ಯ ವೃತ್ತಿ ಕೇವಲ ಸೇವೆ ಅಲ್ಲ ಅದು ಸಮಾಜದ ಆರೋಗ್ಯ ಮತ್ತು ನಂಬಿಕೆಯನ್ನು ಕಾಪಾಡುವ ಪವಿತ್ರ ಹೊಣೆಗಾರಿಕೆಯಾಗಿದೆ ಈ ತಿಂಗಳಿನಲ್ಲಿ ತಮ್ಮ ರಾಜ್ಯಾಧ್ಯಕ್ಷರ ಅಧಿಕಾರದ ಪೂರ್ಣ ಹಂತದಲ್ಲಿರುವಾಗ ವೈದ್ಯ ಸಮುದಾಯದ ಚಿಂತನ ಸಂವಾದ ಮತ್ತು ಸೃಜನಾತ್ಮಕ ವಿನಿಮಯದ ವೇದಿಕೆಯಾಗಲಿದೆ ಜೊತೆಗೆ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಿದ ಸ್ಥಳೀಯರಾದ ಶರಣಬಸಪ್ಪ ಕೋಲ್ಕಾರ್ ಹಾಗೂ ಗದಗ್ ಸಾಯಿ ಕುಮಾರ್ ಇವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಗುತ್ತದೆ ಎಂದು ತಿಳಿಸಿದರು.
ಐಎಂಎ ಕಾರ್ಯದರ್ಶಿ ಡಾಕ್ಟರ್ ಅಮರೇಶ್ ಪಾಟೀಲ್ ಮಾತನಾಡಿ ಸಮಾರಂಭದ ದಿವ್ಯ ಸಾನಿಧ್ಯವನ್ನು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್ ತಂಗಡಗಿ ಶಾಸಕ ಜನಾರ್ದನ್ ರೆಡ್ಡಿ. ಜಿಲ್ಲಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಡಿ ಹಚ್ಚುವ ಹಾಗೂ ಕೆಐಎಂಎಸ್ ನಿರ್ದೇಶಕರು ಆಗಮಿಸಲಿದ್ದು ಸಾವಿರಕ್ಕೂ ಅಧಿಕ ಐಎಮ್ಎಸದಸ್ಯರು ಭಾಗವಹಿಸುವರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಘದ ತಾಲೂಕ ಅಧ್ಯಕ್ಷ ಎ ಎಸ್ ಎನ್ ರಾಜು,ಡಾಕ್ಟರ್ ಮಲ್ಲನಗೌಡ ಪೊಲೀಸ್ ಪಾಟೀಲ್, ಡಾಕ್ಟರ್ ಮಧುಸೂದನ್, ಡಾಕ್ಟರ್ ಸೂರಿ ರಾಜು,ಡಾಕ್ಟರ್ ಅಮರೇಶ ಪಾಟೀಲ್ ಕೆ ಇದ್ದರು.
Kalyanasiri Kannada News Live 24×7 | News Karnataka
