Extension of application period for projects of the Department of Empowerment of the Disabled and Senior Citizens

ರಾಯಚೂರು ಅಕ್ಟೋಬರ್ 15 (ಕರ್ನಾಟಕ ವಾರ್ತೆ): 2025-26 ನೇ ಸಾಲಿಗೆ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಲ್ಲಿ ಜಾರಿಯಲ್ಲಿರುವ ವಿವಿಧ ಯೋಜನೆಯಗಳಡಿ ಸೇವಾ-ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಕೆ ಅವಧಿಯನ್ನು ಅಕ್ಟೋಬರ್ 31ರವರೆಗೆ ವಿಸûರಣೆ ಮಾಡಲಾಗಿದೆ.
ಆಧಾರ್ ಯೋಜನೆ, ವೈದ್ಯಕೀಯ ಪರಿಹಾರ ನಿಧಿ ಯೋಜನೆ, ಪ್ರತಿಭಾವಂತ ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಯೋಜನೆ, ನಿರುದ್ಯೋಗ ಭತ್ಯೆ ಯೋಜನೆ, ಶಿಶುಪಾಲನೆ ಭತ್ಯೆ ಯೋಜನೆ, ಮರಣ ಪರಿಹಾರ ನಿಧಿ ಯೋಜನೆ, ಪ್ರತಿಭೆ ಯೋಜನೆ, ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‌ಟಾಪ್ ಯೋಜನೆ, ದೃಷ್ಟಿದೋಷ ಹೊಂದಿದ ವಿಕಲಚೇತನರಿಗೆ ಬ್ರೈಲ್ ಕಿಟ್ ಯೋಜನೆ, ದೈಹಿಕ ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರವಾಹನ ಯೋಜನೆ, ಶ್ರವಣದೋಷವುಳ್ಳ ವ್ಯಕ್ತಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರ ಯೋಜನೆ, ಸಾಧನೆ-ಸಲಕರಣೆ ಯೋಜನೆ ಮತ್ತು ವಿಕಲಚೇತನರಿಗೆ ಬ್ಯಾಟರಿ ಚಾಲಿತ ವ್ಹೀಲ್‌ಚೇರ್ ಯೋಜನೆಗಳಿಗಾಗಿ ರಾಯಚೂರು ಜಿಲ್ಲಾ ವ್ಯಾಪ್ತಿಯ ಅರ್ಹ ವಿಕಲಚೇತನ ಫಲಾನುಭವಿಗಳು ಆನ್‌ಲೈನ್ ಸೇವಾ-ಸಿಂಧು ತಂತ್ರಾಂಶದಡಿ (ಪೋರ್ಟಲ್) ಮೂಲಕ ಗ್ರಾಮ-ಓನ್, ಕರ್ನಾಟಕ-ಓನ್, ಬೆಂಗಳೂರು-ಓನ್ ಹಾಗೂ hಣಣಠಿs//sevಚಿsiಟಿಜhಚಿಟಿuಡಿ.ಞಚಿಡಿಟಿಚಿಣಚಿಞಚಿ.gov.iಟಿsevಚಿsiಟಿಜhu/ಏಚಿಟಿಟಿಚಿಜಚಿ) ಮುಖಾಂತರ 31-10-2025 ರೊಳಗೆ ಅರ್ಜಿಗಳನ್ನು ದಾಖಲಾತಿಗಳೊಂದಿಗೆ ಆನ್‌ಲೈನ್ ಮುಖಾಂತರ ಸಲ್ಲಿಸಲು ತಿಳಿಸಲಾಗಿದೆ.
ಫಲಾನುಭವಿಗಳು ಆನ್‌ಲೈನ್ ತಂತ್ರಾಂಶದಲ್ಲಿ ಸಲ್ಲಿಸಿದ ಅರ್ಜಿಯನ್ನು ಸಂಬಂಧಪಟ್ಟ ದಾಖಲೆಗಳೊಂದಿಗೆ ಹಾರ್ಡ್ ಪ್ರತಿಯೊಂದಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಮಾವಿನ ಕೆರೆ ರಸ್ತೆ, ಆಜಾದ ನಗರ, ರಾಯಚೂರು ಜಿಲ್ಲಾ ಕಚೇರಿಗೆ ಕಚೇರಿ ಕೆಲಸದ ಸಮಯದಲ್ಲಿ ಸಲ್ಲಿಸಲು ತಿಳಿಸಲಾಗಿದೆ. ಇಲಾಖೆಯ ಯೋಜನೆಗಳಿಗೆ ಸಂಬಂಧಿಸಿದಂತೆ ಸಂಪೂರ್ಣವಾದ ಮಾರ್ಗದರ್ಶನವನ್ನು ಈ ಇಲಾಖೆಯ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು, ನಗರ ಪ್ರದೇಶದಲ್ಲಿ ನಗರ ಪುನರ್ವಸತಿ ಕಾರ್ಯಕರ್ತರನ್ನು ಹಾಗೂ ತಾಲ್ಲೂಕು ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರಿಂದ ಮಾಹಿತಿ ಪಡೆದು ಅರ್ಜಿಗಳನ್ನು ಸಲ್ಲಿಸಬಹುದು. ಮುಂದುವರೆದು ಸದರಿ ಪ್ರಕಟಣೆಯನ್ನು ಎಲ್ಲಾ ಕನ್ನಡ ಪತ್ರಿಕೆಗಳಲ್ಲಿ ಉಚಿತವಾಗಿ ಪ್ರಕಟಿಸಲು ಮಾನ್ಯರಲ್ಲಿ ಈ ಮೂಲಕ ಕೋರಿದೆ.
ಕಾರ್ಯಕರ್ತರ ವಿವರ: ರಾಯಚೂರು ತಾಲೂಕಿಗೆ ಅಮರೇಶ ಯಾದವ್ ಮೊ:9972237508, ಮಾನವಿ-ಸಿರವಾರ ತಾಲೂಕಿಗೆ ರಾಘವೇಂದ್ರ ಮೊ:9740203769, ದೇವದುರ್ಗ ತಾಲೂಕಿಗೆ ಲೋಕಪ್ಪ ನೂರುನಾಯ್ಕೆ ಮೊ:9945207693, ಸಿಂಧನೂರು ತಾಲೂಕಿಗೆ ಬಸವರಾಜ ಸಾಸಲಮರಿ ಮೊ:9900298217, ಲಿಂಗಸ್ಗೂರು-ಮಸ್ಕಿ ತಾಲೂಕಿಗೆ ನಾಗರಾಜ ಮೊ:9901668380ಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.