Yelaburga: H Mallikarjuna Hosakera participated in the tribute to senior journalist Khajavali Jarakunti

ಯಲಬುರ್ಗಾ: ಪತ್ರಕರ್ತರ ವತಿಯಿಂದ ಮಂಗಳವಾರ ಪ್ರವಾಸಿ ಮಂದಿರದಲ್ಲಿ ಅಗಲಿದ ಕರ್ನಾಟಕ ಪತ್ರಕರ್ತರ ಸಂಘದ ತಾಲೂಕ ಅಧ್ಯಕ್ಷ ಹಿರಿಯ ಪತ್ರಕರ್ತರಾದ ಖಾಜಾವಲಿ ಜರಕುಂಟಿ ಅವರಿಗೆ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿತ್ತು.
ಗಂಗಾವತಿಯ ಹಿರಿಯ ಪತ್ರಕರ್ತರಾದ ಹೆಚ್ ಮಲ್ಲೀಕಾರ್ಜುನ ಹೊಸಕೇರಾ ನುಡಿನಮನ ಸಲ್ಲಿಸಿ, ಮಾತನಾಡಿ ಖಾಜಾವಲಿ ಕಷ್ಟದಿಂದ ಬೆಳೆದು ಬಂದವರು ಅತ್ಯುತ್ತಮ ಸುದ್ದಿಯನ್ನು ತಯಾರಿಸುವುದು ಅವರು ನಿಷ್ಠಾವಂತ, ಸರಳಜೀವಿ, ಪತ್ರಕರ್ತರಾಗಿದ್ದರು. ಈ ಮೂಲಕ ಅವರು ಪತ್ರಿಕೋದ್ಯಮದಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ ಅವರ ನಮ್ಮ ಸಂಭದ 20 ವರ್ಷದ್ದು ನಮ್ಮ ಮೊಮ್ಮಗನ ನಾಮಕರಣ ಕಾರ್ಯಕ್ರಮ ಬಂದಿದ್ದರು. ವಾರದ ಹಿಂದೆ ಪೋನಮಾಡಿ ಯೋಗಕ್ಷೇಮ ವಿಚಾರಿಸಿದ್ದೆ.ದೇವರು ಇಷ್ಟು ಬೇಗ ಕರಿಸಿಕೊಳ್ಳಬಾರದಿತ್ತು ಎಂದು ನೆನಪಸಿ ಕೊಂಡರು.ಅವರು ಕನಾಟಕ ಪತ್ರಕರ್ತರ ಸಂಘದ ಜಿಲ್ಲಾ ಉಪಾದ್ಯಕ್ಷರಾಗಿ.ಪ್ರಸ್ತುತ ತಾಲೂಕ ಅದ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು.ಎಂದರು.

ಹಿರಿಯ ಪತ್ರಕರ್ತ ಶಿವಮೂರ್ತಿ ಇಟಗಿ ಮಾತನಾಡಿ
ಖಾಜಾವಲಿ ಜರಕುಂಟಿ ರವರು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಒಂದು ಮೂಲೆಯಲ್ಲಿ ಕುಳಿತು ಎಲೆಯ ಮರೆಯ ಕಾಯಿಯಂತೆ ವರದಿ ಮಾಡುತ್ತಿದ್ದರು. ಅವರ ವರದಿಯು ತುಂಬಾ ದೀರ್ಘ ಹಾಗೂ ಸ್ಪಷ್ಟವಾದ ಬರವಣಿಗೆಯಿಂದ ಕೂಡಿತ್ತು ಖಾಜಾವಲಿಗೆ ಎಷ್ಟೇ ಜೋಕ್ ಮಾಡಿದರು ಸಿಟ್ಟಿಗೆ ಬರುವವರಲ್ಲ ಸರಳ ಸ್ವಭಾವದವರು ಎಂದು ಹೇಳಿದರು
ಶ್ರೀಕಾಂತಗೌಡ ಮಾಲಿ ಪಾಟೀಲ್ ಮಾತನಾಡಿ ನಾನು ಕರ್ನಾಟಕ ಪ್ರಾಂತ ರೈತ ಸಂಘಟನೆಯಲ್ಲಿ ತೊಡಗಿ ಕೊಂಡಾಗ ಖಾಜಾವಲಿ ಜರಕುಂಟಿ ರವರು
ಡಿ ವಾಯ್ ಎಫ್ ಐ ಸಂಘಟನೆಯಿಂದ ಹೋರಾಟದ ಮನೋಭಾವ ಬೆಳಸಿಕೊಂಡವರು ನಂತರ ಸಂಘಟನೆ ಬಿಟ್ಟಾಕಿ ಮಾಧ್ಯಮ ಲೋಕದಲ್ಲಿ ಹತ್ತು ವರ್ಷಗಳ ಕಾಲ ಹೊಸದಿಂಗತ , ನವೋದಯ, ಪತ್ರಿಕೆಗಳಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ ಮೃತರ ಅಗಲಿಕೆಯಿಂದ ತುಂಬಲಾರದ ನಷ್ಟ ಉಂಟಾಗಿದೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ಭಗವಂತ ಕರುಣಿಸಲಿ ಎಂದು ಹೇಳಿದರು.
ಪತ್ರಕರ್ತರು ತಮ್ಮತಮ್ಮ ಸಂಘಟನೆಗಳನ್ನು ಬದಿಗಿಟ್ಟು ಜಕುಂಟಿಯವರ ಪಾರ್ಥಿಮ ಶರೀರಕ್ಕೆ ಮಾಲಾರ್ಪಣೆ ಮಾಡಿ,ಪ್ರವಾಸಿ ಮಂದಿರದಲ್ಲಿ ಸೇರಿ ನುಡಿನಮನ ಸಲ್ಲಿಸಿ ಜರಕುಂಟಿಯವರ ಕುಟುಂಬಕ್ಕೆ ಸಹಾಯ ಮಾಡಲು ತೀರ್ಮಾನಿಸಲಾಯಿತು. ಎಲ್ಲಾಸಂಘದ ಸಸ್ಯರು ಸೇರಿ ಒಮ್ಮತದ ತೀರ್ಮಾನ ತೆಗೆದುಕೊಂಡಿರುವದು ವಿಶೇಷ ವಾಗಿತ್ತು.
ನುಡಿ ನಮನ ಕಾರ್ಯಕ್ರಮದಲ್ಲಿ ಅಪ್ಪಳಿಸು ಪಾಕ್ಷೀಕ ಪತ್ರಿಕೆಯ ಸಂಪಾದಕ ರುದ್ರಪ್ಪ ಬಂಡಾರಿ, ಕಸಪಾ ನಿಕಟ ಪೂರ್ವ ಜಿಲ್ಲಾಧ್ಯಕ್ಷ ವೀರಣ್ಣ ನಿಂಗೋಜಿ,ಪತ್ರಕರ್ತರಾದ ಪಾಲಾಕ್ಷಿ ತಿಪ್ಪಳ್ಳಿ ,ಈರಣ ತೋಟದ,
ವಿ,ಎಸ್ ಶಿವಪ್ಪಯ್ಯನಮಠ,ಇಮಾಮಸಾಬ ಸಂಕನೂರ, ಹುಸೇನ್ ಸಾಬ್ ಮೋತೆಖಾನ್ ಶ್ಯಾಮಿದ್ ಸಾಭ ತಾಳಕೆರಿ, ಸಿ,ಎ,ಆದಿ,ರವಿ ಕುಮಾರ ಛಲವಾದಿ ,ಕನಕಾಚಲ ಭಜಂತ್ರಿ,ಮಾಹಂತೇಶ ಛಲವಾದಿ,ಗುರುಬಸಯ್ಯ ಜಡಿಮಠ, ನೀಲಪ್ಪ ಖಾನಾವಳಿ, ದೇವರಾಜ ದೊಡ್ಮನಿ, ಸೇರಿದಂತೆ ಮತ್ತಿತರರು ಶ್ರದ್ಧಾಂಜಲಿ ಸಲ್ಲಿಸಿದರು.