“ರಾಜ್ಯದಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡುವುದಾಗಿ ಶಾಸಕ ನೇಮಿರಾಜ್ ನಾಯ್ಕ ಭರವಸೆ ನೀಡಿದರು.”
Promise of special funding for borewell water recharge: MLA Nemiraj Naik

ಕೊಟ್ಟೂರು : ತಾಲೂಕಿನ ತಿಮ್ಮಲಾಪುರ ಗ್ರಾಮದಲ್ಲಿ ಬಣಕಾರ ಚಂದ್ರಪ್ಪ ಹೊಲದಲ್ಲಿ ಸೋಮವಾರ ಸಾವಯವ ರೈತರ ವಿಶೇಷ ಪ್ರಯೋಗ ಪರಿವಾರದ ಸಭೆ ಮತ್ತು ಇಕ್ರಾ ಸಂಸ್ಥೆ ಹಾಗೂ ಭೂಮಿ ಮಿತ್ರ ಸಾವಯವ ರೈತರ ಒಕ್ಕೂಟ ಸಂಯೋಗದಲ್ಲಿ ಹಮ್ಮಿಕೊಂಡಿದ್ದರು
ರೈತರು ಕೊಳವೆ ಬಾವಿಯಲ್ಲಿನ
ಅಂತರ್ಜಲ ಖಾಲಿಯಾದ ಮೇಲೆ ಮತ್ತೊಂದು ಕೊಳವೆಬಾವಿ ಕೊರೆಸಲು ಸಿದ್ಧವಾಗುತ್ತಾರೆ. ಆದರೆ ಬತ್ತಿದ ಕೊಳವೆಬಾವಿಗೆ ಜಲ
ಮರುಪೂರ್ಣಗೊಳಿಸಿದರೆ ಅಂತರ್ಜಲ ಹೆಚ್ಚಾಗಿ ಮೊದಲಿನಂತೆ ಕೃಷಿ ಮಾಡಬಹುದು.
ಈ ಜಲಮರುಪೂರ್ಣಕ್ಕೆ ವಿಶೇಷ ಅನುದಾನ ನೀಡುವಂತೆ ಅಧಿವೇಶನದಲ್ಲಿ ರೈತರ ಪರವಾಗಿ ಮಾತನಾಡುತ್ತೇನೆ.ಎಂದು ಹೇಳಿದರು.
ಶಾಸಕರ ರೈತರ ಧ್ವನಿ :
ರೈತರ ಪರ. ರೈತನಿಲ್ಲದಿದ್ದರೆ ಯಾರು ಬದುಕಲು ಸಾಧ್ಯವಿಲ್ಲ, ಅವರ ಸುಖ, ಅಭಿವೃದ್ಧಿಗೆ ನನ್ನ ಮೊದಲ ಆಧ್ಯತೆ, ಈ ಕೊಳವೆ ಬಾವಿಗಳ ಜಲಮರುಪೂರ್ಣಕ್ಕೆ ಶಾಸಕತ್ವದ ಎರಡೂವರೆ ವರ್ಷವನ್ನು
ಮೀಸಲಿಡವುದಾಗಿ ಘೋಷಿಸಿದರು.
ಡಾ. ದೇವರಾಜ್ ರೆಡ್ಡಿ ಮಾತಾನಾಡಿ,ಪದೇ ಪದೇ ಕೊಳವೆಬಾವಿಗಳನ್ನು ಕೊರಸುವುದರಿಂದ ಭೂಮಿಯ ಒಡಲು ಬತ್ತಿ ಹೋಗಿ ಮುಂದಿನ ದಿನಗಳಲ್ಲಿ ಜಲ ಕ್ಷಾಮ ಬರುವುದನ್ನು ತಪ್ಪಿಸಲು ಮಳೆಯ ನೀರನ್ನು ಕೊಳವೆ ಬಾವಿಯ ಇಂಗು ಗುಂಡಿಗೆ ಹಿಂಗಿಸಿದರೆ ಬತ್ತಿಹೋದ ಕೊಳವೆಬಾವಿಯಲ್ಲಿ ಅಂತರ್ಜಲ,ಜಲ ಮರುಪೂರ್ಣ ವೃದ್ಧಿಯಾಗುತ್ತದೆ. ಎಂದು ರೈತರಿಗೆ ಹೇಳಿದರು
ನಿವೃತ್ತ ಇಂಜಿನೀಯರ್ ಸದಾನಂದ. ಕೆರೆ, ಬಾವಿ, ಕೊಳವೆಬಾವಿಯಲ್ಲಿನ ನೀರನ್ನು ಹೇಗೆ ಸಂರಕ್ಷಿಸಬೇಕು ಎಂಬುದರ ಕುರಿತು ವರದಿಯೊಂದನ್ನು ಶಾಸಕ ನೇಮಿರಾಜ್ ನಾಯ್ಕಗೆ ನೀಡಿದರು.
ಜಲ ತಜ್ಞ ವೈ, ಮಲ್ಲಿಕಾರ್ಜುನ, ಭೂಮಿಯಲ್ಲಿನ ಜಲವನ್ನು ಖರ್ಚುಮಾಡುವುದಷ್ಟೇ ರೈತರಿಗೆ ಗೊತ್ತಿರುವುದು. ಆದರೆ ಇದ್ದ ಜಲ ವನ್ನು ಹೇಗೆ ಸಂರಕ್ಷಿಸಬೇಕು ಎಂಬುದು ಗೊತ್ತಿಲ್ಲ. ಆದ್ದರಿಂದ ಕೊಳವೆಬಾವಿಗಳಿಗೆ ಜಲಮರುಪೂ ರ್ಣಗೊಳಿಸಿ ಕೃಷಿಮಾಡಲು ಹೇಳಿದರು.
ಈ ಸಂದರ್ಭದಲ್ಲಿ ಭೂಮಿ ಮಿತ್ರ ಸಾವಯವ ರೈತರ ಒಕ್ಕೂಟದ ಅಧ್ಯಕ್ಷ ಆಳವಂಡಿ ಕೊಟ್ರೇಶಪ್ಪ, ಇಒ ಆನಂದ ಕುಮಾರ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಯೋಗೀಶ್ವರ್ ದಿನ್ನೆ, ದೂಪದಹಳ್ಳಿ ಗೌರಮ್ಮ ಕಂದಗಲ್ಲು ನೀಲಕಂಠಪ್ಪ, ಮೂಗಪ್ಪ
ತಿಮ್ಮಲಾಪುರ. ಬಣಕಾರ ಚಂದ್ರಣ್ಣ ಉಪಸ್ಥಿತರಿದ್ದರು.
ಅಡವಿ ಬಸಪ್ಪ ಪ್ರಾರ್ಥಿಸಿದರು. ಇಕ್ರಾ ಸಂಸ್ಥೆ ಮುಖ್ಯಸ್ಥೆ ಗಾಯಿತ್ರಿ ಪ್ರಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ನಿರೂಪಿಸಿದರು.