SFI elects new Koppal District Committee office bearers
Shivakumar Echanal elected as President, Balaji Challari elected as Secretary.

ಗಂಗಾವತಿ: ಅಕ್ಟೋಬರ್-೧೨ ರಂದು ಗಂಗಾವತಿ ನಗರದಲ್ಲಿ ನಡೆದ ಜಿಲ್ಲೆಯ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗಾಗಿ ನಡೆದ ಎಸ್.ಎಫ್.ಐ ಜಿಲ್ಲಾ ಸಮಾವೇಶದಲ್ಲಿ ನೂತನ ಜಿಲ್ಲಾ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾಧ್ಯಕ್ಷರಾಗಿ ಶಿವುಕುಮಾರ್ ಈಚನಾಳ್, ಜಿಲ್ಲಾ ಕಾರ್ಯದರ್ಶಿಯಾಗಿ ಬಾಲಾಜಿ ಚಳ್ಳಾರಿ, ಉಪಾಧ್ಯಕ್ಷರಾಗಿ ನಾಗರಾಜು ಯು, ಹನುಮೇಶ್ ಮ್ಯಾಗೇಡಿ, ಷರೀಫ್ ಎಂ.ಪಿ., ಪೂಜಾ ಕೊಪ್ಪಳ, ಜಂಟಿ ಕಾರ್ಯದರ್ಶಿಗಳಾಗಿ ರೋಜಾ ಬಿ., ದರ್ಶನ್ ಹೊಸ್ಕೇರ, ಬಸಯ್ಯ ಹಿರೇಮಠ್, ಸದಸ್ಯರಾಗಿ ಮಾರುತಿ ಕನಕಗಿರಿ, ರಮೇಶ್ ಅಗಸಿಮುಂದಿನ ಕುಷ್ಟಗಿ, ಹನುಮೇಶ್ ಚಳ್ಳಾರಿ, ದೊಡ್ಡಬಸವ ಕುಷ್ಟಗಿ, ರಾಜು ಕೊಪ್ಪಳ, ಮೌನೇಶ್ ಕುಷ್ಟಗಿ, ದೀಪಾ ಚಲವಾದಿ, ವೈಶಾಲಿ ಹಣವಾಳ್, ಲಕ್ಷö್ಮಣ ಹೊಸಗುಡ್ಡ, ಶರಣಬಸವ. ಬಿ ಆಯ್ಕೆಯಾದರು.
ಈ ವೇಳೆ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿಯವರು, ಕೊಪ್ಪಳ ಜಿಲ್ಲೆಯಲ್ಲಿ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತದಲ್ಲಿದೆ, ಶಿಕ್ಷಣದ ಖಾಸಗೀಕರಣ ಹೆಚ್ಚುತ್ತಿದೆ. ಕನ್ನಡ ಸರ್ಕಾರಿ ಶಾಲಾ ಕಾಲೇಜುಗಳಿಗೆ ಮೂಲಭೂತ ಸೌಕರ್ಯಗಳಿಲ್ಲ, ಸೂಸಜ್ಜಿತ ಕಟ್ಟಡಗಳಿಲ್ಲ, ವಿದ್ಯಾರ್ಥಿಗಳ ಅನುಗುಣವಾಗಿ ಹಾಸ್ಟೆಲ್ ಸೌಲಭ್ಯವಿಲ್ಲ, ಗ್ರಾಮೀಣ ಭಾಗಗಳಿಗೆ ರಸ್ತೆ-ಬಸ್ ವ್ಯವಸ್ಥೆ ಇಲ್ಲ, ಹೀಗೆ ಹತ್ತಾರು ಸಮಸ್ಯೆಗಳು ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ ಉಳಿಯಲು ನೇರ ಕಾರಣವಾಗಿವೆ. ಸರ್ಕಾರಿ ಶಾಲೆಗಳನ್ನು ಹಂತ ಹಂತವಾಗಿ ಮುಚ್ಚುವ ದುಷ್ಟ ಯೋಜನೆಯು ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕತ್ತಲೆ ತರುತ್ತಿದೆ. ಶಿಕ್ಷಣದ ಹಕ್ಕು ಎಲ್ಲರಿಗೂ ಎನ್ನುವುದು ಸಂವಿಧಾನದ ಆಶಯ, ಆದರೆ ಸರ್ಕಾರ ಅದನ್ನು “ಹಣವಿದ್ದವರಿಗೆ ಮಾತ್ರ” ಎಂಬ ರೀತಿಗೆ ತರುತ್ತಿದೆ. ಭಾರತ ವಿದ್ಯಾರ್ಥಿ ಫೆಡರೇಶನ್ ಸಂಘಟನೆಯನ್ನು ಜಿಲ್ಲಾಧ್ಯಂತ ವಿಸ್ತರಿಸಿ, ಜಿಲ್ಲೆಯಲ್ಲಿರುವ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸಿ ಅನ್ಯಾಯದ ವಿರುದ್ಧ ವಿದ್ಯಾರ್ಥಿಗಳ ಧ್ವನಿಯಾಗಿ ಎಸ್.ಎಫ್.ಐ. ನೂತನ ಜಿಲ್ಲಾ ಸಮಿತಿಯು ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.