Labor leader Srimeher Pashanidhan

ಗಂಗಾವತಿ ನಗರದ ಕಾರ್ಮಿಕ ನಾಯಕರು, ಹಿರಿಯ ಮುಖಂಡರು ಹಾಗೂ ಗಂಗಾವತಿ ನಗರದಲ್ಲಿರುವ ಅಮರ್ ಭಗತ್ ಸಿಂಗ್ ನಗರಕ್ಕೆ ನಾಮಕರಣ ಮಾಡಲು ಕಾರಣಿಕರ್ತರಾದ ಎಸ್.ಎ.ಹೆಚ್.ಮೆಹೆರ್ ಪಾಶ ಅವರು ಇಂದು ಮಧ್ಯಾಹ್ನ 2:30ಕ್ಕೆ
ಡಾllಬಿ. ಆರ್. ಅಂಬೇಡ್ಕರ್ ನಗರದಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾಗಿರುವರು ಎಂಬುದು ಬಹಳ ದುಃಖದ ಸಂಗತಿ. ಇವರ ಜನನ 15/02/1942 ಮರಣ 09/10/2025 ಇವರ ವಯಸ್ಸು 83
ಅವರ ನಿಧನದಿಂದ ಗಂಗಾವತಿ ನಗರ ರಾಜಕೀಯ, ಸಾಮಾಜಿಕ ವಲಯವು ಒಬ್ಬ ಸಕ್ರಿಯ ನಾಯಕನನ್ನು ಕಳೆದುಕೊಂಡಿದೆ.
ಆ ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬಸ್ಥರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇವೆ.
ಮೃತರ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ 12:30ಕ್ಕೆ ಬೇರೊನಿ ಆಬಾದಿ ಮಸೀದಿಯ ಮುಸ್ಲಿಂ ಖಬರಸ್ಥಾನದಲ್ಲಿ ನೆರವೇರಲಿದೆ ಎಂದುಅವರ ಕುಟುಂಬ ವರ್ಗ ತಿಳಿಸಿದೆ ತಿಳಿಸಲಾಗಿದೆ.