Karnataka Dalit Sangharsh Samiti celebrates Shri Maharishi Valmiki Jayanti

ಗಂಗಾವತಿ: ನಗರದ ಶ್ರೀ ಕೃಷ್ಣದೇವರಾಯ ಕಲಾಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ ಸಂಘಟನೆಯಿಂದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಬುಧವಾರದಂದು ದೀಪ ಬೆಳಗಿಸುವುದರ ಮೂಲಕ ಅದ್ದೂರಿಯಿಂದ ಆಚರಿಸಲಾಯಿತು.ವೇದಿಕೆಯ ಅಧ್ಯಕ್ಷತೆಯನ್ನು ವಿಭಾಗೀಯ ಸಂಚಾಲಕ ಹಂಪೆಶ ಜಿ ಹರಿಗೋಲ್ ಮಾತನಾಡಿ ಹರಿಯುವ ನದಿಗಳಂತೆ ಸಂಘಟನೆಗಳು ಬೆಳೆಯಬೇಕು ಜೊತೆಗೆ ಶ್ರೀ ವಾಲ್ಮೀಕಿ ಸಮುದಾಯ ತೀರ ಕಡುಬಡತನ ದಿಂದ ಹಿಂದುಳಿದಿದೆ.ಇತ್ತೀಚಿನ ದಿನಗಳಲ್ಲಿ ಸರ್ಕಾರ ಆ ಸಮುದಾಯಕ್ಕೆ ಬೇರೊಂದು ಸಮುದಾಯವನ್ನು ಸೇರಿಸುವ ಹುನ್ನಾರ ನಡೆದಿದೆ ಎಂದು ಈಗಾಗಲೇ ಆ ಸಮುದಾಯದ ಮುಖಂಡರು ಹೋರಾಟ ಮಾಡಿ ಸರ್ಕಾರಕ್ಕೆ ಮನವರಿಕೆ ಮಾಡಿದ್ದಾರೆ. ಸರ್ಕಾರ ಮುಂದಿನ ದಿನಗಳಲ್ಲಿ ವಾಲ್ಮೀಕಿ ಸಮುದಾಯಕ್ಕೆ ಹೆಚ್ಚಿನ ಸೌಲಭ್ಯವನ್ನು ಕೊಡಬೇಕು, ಜೊತೆಗೆ ಮೀಸಲಾತಿಯನ್ನು ಹೆಚ್ಚಿಸಬೇಕೆಂದು ಹೇಳಿದರು. ರೈತ ಸಂಘಟನೆ ಹಾಗೂ ಹಸಿರು ಸೇನೆಯ ರಾಜ್ಯಧ್ಯಕ್ಷ ಶರಣಪ್ಪ ದೊಡ್ಡಮನಿ ಮಾತನಾಡಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಗಳು ಹಾಕಿಕೊಟ್ಟ ದಾರಿಯಲ್ಲಿ ಇಂದಿನ ಯುವ ಪೀಳಿಗೆ ನಡೆದರೆ ಜೀವನ ಪಾವನ ಆಗುವುದು. ಜೊತೆಗೆ ರಾಮಾಯಣವನ್ನು ಓದಿ. ಅವರ ಆದರ್ಶವನ್ನು ಪಾಲಿಸಿದರೆ ಪ್ರತಿಯೊಬ್ಬ ವ್ಯಕ್ತಿಯು ಸಮಾಜಮುಖಿಯಾಗಲು ಸಾಧ್ಯ ಎಂದು ಹೇಳಿದರು. ವೇದಿಕೆಯ ಉದ್ಘಾಟನೆಯನ್ನು ನೆರವೇರಿಸಿದ ಹನುಮಂತಪ್ಪ ನಾಯಕ ವಡ್ಡರಹಟ್ಟಿ ಮಾತನಾಡಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಗಳು ರಾಮಾಯಣದ ಮುಖ್ಯ ಕರ್ತೃ ಅವರು ರಾಮಾಯಣದ ಉಲ್ಲೇಖವನ್ನು ಜಗತ್ತಿಗೆ ಸಾರಿ ರಾಮಾಯಣವನ್ನು ಪರಿಚಯಿಸಿದ ಆದಿ ಮಹರ್ಷಿಯಾಗಿದ್ದಾರೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಸಂಘಟನೆ ಮುಖಂಡರುಗಳಾದ ಯಮನೂರಪ್ಪ ನಾಯಕ. ಬೆಟ್ಟಪ್ಪ ಹಿರೇಕುರುಬರ. ಪಂಪಾಪತಿ ಸಿದ್ದಾಪುರ. ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ ಸಂಘದ ದುರ್ಗೇಶ ಸಂಗಾಪುರ. ಬಸವರಾಜ ಇಳಿಗನೂರ ನೇತೃತ್ವದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ನಂತರ ನೂತನ ಪದಾಧಿಕಾರಿಗಳಾಗಿ ನರಸಾಪುರ ದುರ್ಗಪ್ಪ. ರಾಘವೇಂದ್ರ ಭಂಡಾರಿ ಈರಪ್ಪ ಗಟಾರಿ ಸೇರಿದಂತೆ ಸಂಘಟನೆಯ ಸದಸ್ಯರು ಇದ್ದರು.