Meghashree Bhushan assumes office as the acting president of Tiptur Municipal Council

ತಿಪಟೂರು :ನಗರಸಭಾ ಪ್ರಭಾರ ಅಧ್ಯಕ್ಷರಾಗಿ ಮೇಘಶ್ರೀ ಭೂಷಣ್ ಅಧಿಕಾರ ಸ್ವೀಕಾರ ಮಾಡಿದರು.
ಬಹುದಿನಗಳಿಂದ ಬಾರಿ ಚರ್ಚೆಗೆ ಗ್ರಾಸವಾಗಿದ್ದ ತಿಪಟೂರು ನಗರಸಭಾ ಅಧ್ಯಕ್ಷರ ರಾಜೀನಾಮೆ ವಿಚಾರವಾಗಿ ಇಂದು ತೆರೆ ಬಿದ್ದಿದ್ದು ರಾಜೀನಾಮೆ ಅಂಗೀಕಾರವಾದ ಹಿನ್ನೆಲೆಯಲ್ಲಿ ತಿಪಟೂರು ನಗರಸಭಾ ಉಪಾಧ್ಯಕ್ಷರಾದ ಶ್ರೀಮತಿ ಮೇಘಶ್ರೀ ಭೂಷಣ್ ರವರು ಇಂದು ತಿಪಟೂರು ನಗರಸಭಾ ಪ್ರಭಾರ ಅಧ್ಯಕ್ಷರಾಗಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ.
ತಿಪಟೂರು ನಗರಸಭೆಯಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿದ್ದ ಅಧ್ಯಕ್ಷರ ರಾಜೀನಾಮೆ ವಿಚಾರವಾಗಿ ಇಂದು ಅಂತಿಮ ತೆರೆ ಬಿದ್ದಿದ್ದು ಪ್ರಭಾರ ಅಧ್ಯಕ್ಷರಾಗಿ ಉಪಾಧ್ಯಕ್ಷರಾದ ಶ್ರೀಮತಿ ಮೇಘಶ್ರೀ ಭೂಷಣ್ ಇಂದು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು
ಈ ವೇಳೆ ಮಾತಾಡಿದ ಪ್ರಭಾರಾಧ್ಯಕ್ಷರಾದ ಶ್ರೀಮತಿ ಮೇಘಶ್ರೀ ಭೂಷಣ್ ಮಾತನಾಡಿ ನಗರದ ಸಮಗ್ರ ಅಭಿವೃದ್ಧಿಗೆ ಹಾಗೂ ಸ್ವಚ್ಛತೆಯ ಕಡೆಗೆ ಹೆಚ್ಚಿನ ಗಮನ ಹರಿಸಿ ತಿಪಟೂರು ನಗರವನ್ನು ಮಾದರಿ ನಗರಸಭೆಯನ್ನಾಗಿ ಮಾಡುವುದಾಗಿ ಇದೇ ವೇಳೆ ಅವರು ತಿಳಿಸಿದರು.
ಈ ವೇಳೆ ಕಾಂಗ್ರೆಸ್ ಮುಖಂಡರಾದ ಆರ್ ಡಿ ಬಾಬು ಕೋಟೆ ಪ್ರಭು ನಗರಸಭಾ ಸದಸ್ಯರಾದ ಊರ್ಬಾನು ಮೊದಲಾದವರು ಹಾಜರಿದ್ದರು