Koppal district is a hub of shoddy works, CM asks for attention

ವರದಿ: ಬ್ರಹ್ಮಾನಂದ್ ಮಳಿಯಪ್ಪ ಬಡಿಗೇರ
ಕೊಪ್ಪಳ ಅ,06: ಹೌದು ಕೊಪ್ಪಳ ಜಿಲ್ಲೆ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಇಂದಿಗೂ ಹಾಗೆ ಇದೆ. ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಿವರಾಜ್ ತಂಗಡಗಿ ರವರು ಮೂರು ಬಾರಿ ಸಚಿವರಾದರು ಜಿಲ್ಲೆ ಮಾತ್ರ ಅಭಿವೃದ್ಧಿಗೆ ಬಹುದೊಡ್ಡ ಹಿನ್ನಡೆಯಾಗಿದೆ. ಸ್ವತಃ ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿರವರ ಕ್ಷೇತ್ರದಲ್ಲಿಯೇ ಕಳಪೆ ರಸ್ತೆ ನಿರ್ಮಾಣ ಆಗುವ ಮೂಲಕ ಕೊಪ್ಪಳ ಜಿಲ್ಲೆ ಕಳಪೆ ಕಾಮಗಾರಿಗಳ ಕೇಂದ್ರವಾಗಿದೆ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ
ಮೂಡಿದೆ.ಹೀಗಾಗಿ ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವರ ಬದಲಾವಣೆಗೆ ಈಗ ಸಾರ್ವಜನಿಕರ ವಲಯದಲ್ಲಿ ಆಗ್ರಹ ಜೋರಾಗಿ ಕೇಳಿ ಬರುತ್ತಿದೆ.
ಕಳಪೆ ಕಾಮಗಾರಿಗಳ ಕೇಂದ್ರವಾದ ಕೊಪ್ಪಳ ಜಿಲ್ಲೆ
ಕೊಪ್ಪಳ ವಿಧಾನಸಭಾ ಕ್ಷೇತ್ರದ ಅಳವಂಡಿ ಹೋಬಳಿ ಹಾಗೂ ಗಂಗಾವತಿ ವಿಧಾನಸಭಾ ಕ್ಷೇತ್ರದ ಕೂಕನಪಳ್ಳಿ ಗ್ರಾಮದಲ್ಲಿ ಕೆ.ಐ.ಆರ್.ಡಿ.ಎಲ್ ಇಲಾಖೆಯ ಅನುದಾನದಲ್ಲಿ ನಿರ್ಮಾಣವಾದ ಸಿಸಿ ರಸ್ತೆ ಕಳಪೆ ಕಾಮಗಾರಿ ಆಗಿದೆ ಎಂಬ ದೂರುಗಳು ಜಿಲ್ಲಾ ಆಡಳಿತಕ್ಕೆ ಸಲ್ಲಿಕೆಯಾಗಿದೆ. ಇತ್ತ ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿ ರವರ ಸುಕ್ಷೇತ್ರದಲ್ಲಿನ ಮಲ್ಲಿಗೆವಾಡ,ಜೀರಾಳ ಹಾಗೂ ನವಲಿ ಸೇರಿದಂತೆ ಜಿಲ್ಲೆಯ ಅನೇಕ ಕಡೆ ಕಳಪೆ ಕಾಮಗಾರಿಗಳ ನಿರ್ಮಾಣವಾಗಿವೆ.
ಗಮನ ಕೊಡುತ್ತಾರೆ ಸಿ.ಎಂ ಸಿದ್ದರಾಮಯ್ಯ
ಇಂದು ಕೊಪ್ಪಳ ಜಿಲ್ಲೆಗೆ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಕೊಪ್ಪಳ ಜಿಲ್ಲೆಯ ಬಗ್ಗೆ ಹಾಗೂ ಜನರ ಬಗ್ಗೆ ಸಾಕಷ್ಟು ಒಳ್ಳೆಯ ಮಾತುಗಳನ್ನು ಆಡುತ್ತಾರೆ. ಆದರೆ ತಮ್ಮದೇ ಸರ್ಕಾರದ ಶಾಸಕರು ಹಾಗೂ ಸಚಿವರಾದ ಶಿವರಾಜ್ ತಂಗಡ ಗಿರವರ ಸುಕ್ಷೇತ್ರದಲ್ಲೇ ಡಾಂಬರ್ ರಸ್ತೆ ಕಳಪೆ ಕಾಮಗಾರಿ ಬಗ್ಗೆ ಗಮನ ಹರಿಸುತ್ತಾರಾ ಎನ್ನುವುದೇ ಎಕ್ಷ ಪ್ರಶ್ನೆಯಾಗಿದೆ. ಇನ್ನಾದರೂ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳು ಎಂದು ಕರೆಯಲ್ಪಡುವ ಸಿದ್ದರಾಮಯ್ಯರವರು ಕೊಪ್ಪಳ ಜಿಲ್ಲೆಯಲ್ಲಿ ಕೇಳಿ ಬರುತ್ತಿರುವ ಕಳಪೆ ಕಾಮಗಾರಿಗಳು ಹಾಗೂ ಜಿಲ್ಲೆಗೆ ಹಿನ್ನಡೆಯಾಗಿರುವ ಅಭಿವೃದ್ಧಿ ವಿಷಯದ ಬಗ್ಗೆ ಗಮನಹರಿಸಿ ಜಿಲ್ಲೆಯ ಅಭಿವೃದ್ಧಿಗೆ ಕಾರಣರಾಗಲಿ ಎನ್ನುವುದೇ ಸಾರ್ವಜನಿಕರ ಅಭಿಲಾಷೆಯಾಗಿದೆ.
ಕನಕಗಿರಿ ಕ್ಷೇತ್ರದಲ್ಲಿ ಅಕ್ರಮ ಮರಳು ಸಾಗಾಟ
ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಅಕ್ರಮ ಮರಳು ಹಾಗೂ ಮರಂ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದಕ್ಕೆ ಸ್ಪಷ್ಟನೆ ಎಂಬಂತೆ ಕೆಲ ದಿನಗಳ ಹಿಂದೆ ಕನಕಗಿರಿಯ ಪೊಲೀಸ್ ಠಾಣೆಯ ಪಿ.ಐ ಎಂ.ಡಿ ಫೈಜುಲ್ಲಾ ಹಾಗೂ ಸಾರ್ವಜನಿಕ ಸೋಮು ರವರ ನಡುವೆ ನಡೆದ ಆಡಿಯೋ ಸಂಭಾಷಣೆಯೊಂದು ಜಿಲ್ಲೆಯಲ್ಲಿ ವೈರಲ್ ಆಗಿತ್ತು. ಹೀಗಾಗಿ ಕನಕಗಿರಿ ಕ್ಷೇತ್ರದಲ್ಲೂ ಕೂಡ ಅಕ್ರಮ ಮರಳು ದಂಧೆ ಎಗ್ಗಿಲದೆ ನಡೆಯುತ್ತಿದ್ದರು ಸ್ವಕ್ಷೇತ್ರದ ಶಾಸಕರಾಗಿ, ಸಚಿವರಾದರು ಕೂಡ ಅಕ್ರಮ ದಂಧೆ ತಡೆಯುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬಲ್ಡೋಟ್ ಕಾರ್ಖಾನೆ ವಿಚಾರದಲ್ಲಿ ಕಮಿಷನ್ ಪಡೆದ ಆರೋಪ ಮಾಡಿದ ದಡೆಸುಗೂರು
ಕನಕಗಿರಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಬಿಜೆಪಿ ಪಕ್ಷದ ಕೊಪ್ಪಳ ಜಿಲ್ಲಾಧ್ಯಕ್ಷರಾದ ಬಸವರಾಜ್ ದಡೆಸುಗೂರ್ ರವರು ಬಿಜೆಪಿ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿ ರವರು ಬಲ್ದೋಟ ಕಾರ್ಖಾನೆ ಸ್ಥಾಪನೆ ವಿಚಾರದಲ್ಲಿ ಕಮಿಷನ್ ಪಡೆದಿದ್ದಾರೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ. ಹೀಗಾಗಿ ಕೊಪ್ಪಳ ಜಿಲ್ಲೆಯಲ್ಲಿ ಬಲ್ಡೋಟ್ ಕಾರ್ಖಾನೆ ವಿರೋಧಿಸುತ್ತಿರುವ ಹೋರಾಟಗಾರರು ಹಾಗೂ ಸಾರ್ವಜನಿಕರ ಮನಸ್ಸಿನಲ್ಲಿ ಈ ವಿಷಯ ಅನುಮಾನಕ್ಕೆ ಇಡು ಮಾಡಿಕೊಟ್ಟಿದೆ. ಆದರೆ ಈ ಆರೋಪ ಶಿವರಾಜ್ ತಂಗಡಗಿ ತಳ್ಳಿಹಾಕಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಸರಿಯಾಗಿ ಸಿಗದ ಅನುದಾನ
ಕಲಾವಿದರ ಕೈಗೆ ಚಂಬು ಕೊಟ್ಟ ಶಿವರಾಜು ತಂಗಡಗಿ ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿ ಪ್ರಕಟಣೆಗೊಂಡ ಹಿನ್ನಲೆ ಕೆಲ ಕೊಪ್ಪಳ ಕಲಾವಿದರಿಗೆ ಅನುದಾನ ಸಿಗಬೇಕಾಯಿತು. ಆದರೆ ಇನ್ನೂ ಅನೇಕ ಕಲಾವಿದರು ಅನುದಾನ ಸಿಗದೇ ಕಂಗಲಾಗಿರುವ ಘಟನೆ ಇದೆ.ಸ್ವ ಜಿಲ್ಲೆಯವರೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದರು ಜಿಲ್ಲೆಯ ಕಲಾವಿದರಿಗೆ ಅನುದಾನ ತರವಲ್ಲಿ ಅಥವಾ ಕೊಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಬಡ ಕಲಾವಿದರು ಇಡಿ ಶಾಪ ಹಾಕುತ್ತಿದ್ದಾರೆ. ಹಾಗೂ ಬೆಂಗಳೂರಿನಲ್ಲಿ ಹಿರಿಯ ಕಲಾವಿದರು ಪ್ರತಿಭಟನೆ ಮಾಡುವ ಮೂಲಕ ಶಿವರಾಜ್ ತಂಗಡಗಿ ರವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸ್ಥಾನದಿಂದ ಕೈ ಬಿಡುವಂತೆ ಪ್ರತಿಭಟನೆ ಮಾಡಿರುವ ಪ್ರಸಂಗವು ಇದೆ.
( ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿ ಮೂರು ಬಾರಿಯೂ ಸಚಿವರಾಗಿ ಶಿವರಾಜ್ ತಂಗಡಗಿರವರು ಕ್ಷೇತ್ರವನ್ನು ಅಭಿವೃದ್ಧಿ ಮಾಡಿಲ್ಲ. ಕನಕಗಿರಿ ಕ್ಷೇತ್ರದಲ್ಲಿ ಅತಿ ಹೆಚ್ಚು ಕಳಪೆ ಕಾಮಗಾರಿಗಳು ಆಗಿವೆ, ಹೀಗಿರುವಾಗ ಕೊಪ್ಪಳ ಜಿಲ್ಲೆ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ತಕ್ಷಣ ರಾಜ್ಯದ ಮುಖ್ಯಮಂತ್ರಿಗಳು ಕೊಪ್ಪಳ ಜಿಲ್ಲೆಯ ಉಸ್ತುವಾರಿಗಳನ್ನ ಬದಲಾವಣೆ ಮಾಡಿ ಜಿಲ್ಲೆ ಅಭಿವೃದ್ಧಿ ಆಗಲು ಕಾರಣೀಭೂತರಾಗಬೇಕು ಎಂದು ಮನವಿ ಮಾಡುತ್ತೇನೆ. ಯಮನೂರಪ್ಪ ನಾಯಕ್ ಮಲ್ಲಿಗೇವಾಡ, ಕರ್ನಾಟಕ ಜನಸೇನೆ ಜಿಲ್ಲಾ ಅಧ್ಯಕ್ಷರು ಕೊಪ್ಪಳ )
( ಶಿವರಾಜ್ ತಂಗಡಗಿ ರವರು ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಅಭಿವೃದ್ಧಿ ಮಾಡುವಲ್ಲಿ ವಿಫಲರಾಗಿದ್ದಾರೆ. ಜಿಲ್ಲೆಯಲ್ಲಿ ಸಾಕಷ್ಟು ಅಕ್ರಮ ದಂಧೆಗಳು ನಡೆದಿವೆ. ಕೊಪ್ಪಳ ಜಿಲ್ಲೆ ಅಭಿವೃದ್ಧಿ ಆಗಬೇಕಾದರೆ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳು ಎಂದು ಕರೆಸಿಕೊಂಡಿರುವ ಸಿದ್ದರಾಮಯ್ಯರವರು ಇಂದು ಕೊಪ್ಪಳಕ್ಕೆ ಭೇಟಿ ನೀಡುವುದರಿಂದ ಜಿಲ್ಲೆಯ ಉಸ್ತುವಾರಿ ಸಚಿವರನ್ನ ಬದಲಾವಣೆ ಮಾಡಿ ಜನರಿಗೆ ಗ್ಯಾರಂಟಿ ಅಭಿವೃದ್ಧಿ ಎಂಬ ಕೊಡುಗೆ ನೀಡಬೇಕು ಎಂದು ಮನವಿ ಮಾಡುತ್ತೇನೆ. ಪ್ರಶಾಂತ್ ಪ್ರಶಾಂತ್ ನಾಯಕ್ ಕಸ್ತೂರಿ ಕರ್ನಾಟಕ ಜನಪರ ಸೇನೆ ಅಧ್ಯಕ್ಷ)
ಕೊಪ್ಪಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಹಣ ಕೊಟ್ಟವರಿಗೆ ಕಾರ್ಯಕ್ರಮ, ಕನಕಗಿರಿ, ಆನೆಗುಂದಿ ಉತ್ಸವದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಇದೆ. ಈ ಬಗ್ಗೆ ಸುದ್ದಿಗೋಷ್ಠಿ ಮಾಡಲಾಗಿತ್ತು ತನಿಖೆ ಮಾಡಿಲ್ಲ,2019 ರಿಂದಲೂ ಕಲಾವಿದರಿಗೆ ಪ್ರಾಯೋಜಿತ ಕಾರ್ಯಕ್ರಮದ ಹಣ ಸಂದಾಯವಾಗಿಲ್ಲ. ನಮ್ಮ ಜಿಲ್ಲೆಯವರೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದರು ಹೆಚ್ಚಿನ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ. ಈ ಬಾರಿ ಕನಕಗಿರಿ ಆನೆಗುಂದಿ ಉತ್ಸವ ಕೂಡ ಮಾಡುವಲ್ಲಿ ಸಚಿವರ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ರಾಜ್ಯದ ಮುಖ್ಯಮಂತ್ರಿಗಳು ಕಲಾವಿದರ ಬಗ್ಗೆ ಆಸಕ್ತಿ ಇರುವ ಸಚಿವರನ್ನ ಇಲಾಖೆ ಸಚಿವರನ್ನಾಗಿ ನೇಮಕ ಮಾಡಲಿ- ಮಹೇಶ್ ಬಾಬು ಸುರ್ವೇ ಹಿರಿಯ ಕಲಾವಿದರು ಕೊಪ್ಪಳ)