52 mass marriages by HRG family in Hemagudda

ಗಂಗಾವತಿ: ಸಮೀಪದ ಹೇಮಗುಡ್ಡದಲ್ಲಿ ಪ್ರತಿ ವರ್ಷದಂತೆ ನವರಾತ್ರಿ ೯ ದಿನಗಳ ಕಾಲ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ಮಾಜಿ ಸಂಸದ ಹೆಚ್,ಜಿ.ರಾಮುಲು ಕುಟುಂಬದಿಂದ ಪ್ರತಿ ವರ್ಷದಂತೆ ಸಾಮೂಹಿಕ ವಿವಾಹ ನೆರವೇರಿದ್ದು ಆದರೆ ಈ ಬಾರಿ ೨೩ ನವ ಜೋಡಿಗಳು ಹಸೆ ಮಣಿ ಏರಿದವು. ಮೈಸೂರು ದಸರಾ ಮಾದರಿಯಲ್ಲಿ ಆನೆಯ ಮೇಲೆ ಅಂಬಾರಿ ಮೆರವಣೆಗೆಯು ಗಮನ ಸೆಳೆಯಿತು. ಹೆಚ್.ಆರ್.ಜಿ. ಪ್ರತಿ ಸದಸ್ಯರೂ ಪೂಜಾ ಕಂಕೈರ್ಯದಲಿ ಭಾಗಿಯಾಗಿ ಒಂಭತ್ತು ದಿನಗಳ ಕಾಲ ದೇವಿ ಆರಾಧನೆ ಮಾಡುವುದು ಇಲ್ಲಿನ ವಿಶೇಷ.
ಮಹಾನವಮಿಯ ಪ್ರಯುಕ್ತ ಶಾಸಕರಾದ ಶ್ರೀ ಗಾಲಿ ಜನಾರ್ದನ ರೆಡ್ಡಿ ಅವರು ಹೇಮಗುಡ್ಡದ ಪ್ರಸಿದ್ಧ ದಸರಾ ಜಂಬೂಸವಾರಿಗೆ ಚಾಲನೆ ನೀಡಿದರು, ಮೆರವಣಿಗೆಯಲ್ಲಿ ಪಾಲ್ಗೊಂಡು, ತದನಂತರ ತಾಯಿ ಶ್ರೀ ದುರ್ಗಾದೇವಿಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು.
ವಿಜಯನಗರ ಸಾಮ್ರಾಜ್ಯಕ್ಕೂ ಪೂರ್ವದಿಂದ ಹೇಮಗುಡ್ಡ ದಸರಾ ಹಬ್ಬವನ್ನು ಆಚರಿಸಲಾಗುತ್ತಿದ್ದು, ಪಾರಂಪರಿಕವಾಗಿ ಈ ಐತಿಹಾಸಿಕ ಆಚರಣೆಯನ್ನು ಮಾಡಿಕೊಂಡು ಬರಲಾಗುತ್ತಿದೆ. ಹಿರಿಯ ನಾಯಕರು, ಮಾಜಿ ಸಂಸದರಾದ ಎಚ್.ಜಿ ರಾಮುಲು ಅವರ ಪುತ್ರ ಹೆಚ್.ಆರ್.ಶ್ರೀನಾಥ್ ಅವರ ಇಡೀ ಕುಟುಂಬ ಹಾಗೂ ಹೇಮಗುಡ್ಡ ಗ್ರಾಮದ ಸಮಸ್ತ ಜನತೆಯ ಜೊತೆಯಲ್ಲಿ ಈ ಭಾಗದ ಶಾಸಕನಾಗಿ ಚಾಲನೆ ನೀಡಿರುವುದು ನನ್ನ ಪುಣ್ಯವೆಂದೆ ಭಾವಿಸುತ್ತೇನೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾಜಿ ಸಂಸದ ಹೆಚ್.ಜಿ.ರಾಮುಲು, ಹೆಚ್.ಆರ್.ಶ್ರೀನಾಥ್, ಹೆಚ್.ಆರ್.ಭರತ್, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಜಿಲ್ಲಾಧ್ಯಕ್ಷರಾದ ಬಸವರಾಜ್ ದಡೇಸುಗೂರು, ಪಕ್ಷದ ನಗರಮಂಡಲ ಅಧ್ಯಕ್ಷರಾದ ಚಂದ್ರು ಹಿರೂರು, ಗ್ರಾಮೀಣ ಮಂಡಲ ಅಧ್ಯಕ್ಷರಾದ ಡಿ.ಕೆ ಆಗೋಲಿ, ಮಾಜಿ ಕಾಡ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ, ಮುಖಂಡರಾದ ರಾಜಶೇಖರ್ ಮುಷ್ಟೂರು, ಮನೋಹರ ಗೌಡ ಹೇರೂರು, ಯಮನೂರು ಚೌಡ್ಕಿ, ವೀರೇಶ್ ಬಲಕುಂದಿ, ಆನಂದ ಗೌಡ, ಸಿದ್ದನಗೌಡ, ಹನುಮಂತಪ್ಪ ತಲ್ವಾರ್, ಸೈಯದ್ ಅಲಿ, ಭಾಷೂಸಾಬ್, ಮಂಜಪ್ಪ ಸೇರಿದಂತೆ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರು, ಕ್ಷೇತ್ರದ ಜನತೆ ಉಪಸ್ಥಿತರಿದ್ದರು.