Magalamani demands that Gali Janardhan Ruddy resign from his position as MLA.

ಗಂಗಾವತಿ :-2- ಗಂಗಾವತಿಯ ಮಹೇಬೂಬ್ ನಗರದ ನಾಲ್ಕು ವರ್ಷದ ಬಾಲಕ ಹಳ್ಳದಲ್ಲಿ ಬಿದ್ದು ಐದು ದಿನಗಳು ಕಳೆದರೂ ಪತ್ತೆಯಾಗಿಲ್ಲ. ಉಸ್ತುವಾರಿ ಮಂತ್ರಿ ಶಿವರಾಜ್ ತಂಗಡಗಿ ಹಾಗೂ ಮಾಜಿ ಶಾಸಕರ ಪರಣ್ಣ ಮುನವಳ್ಳಿ ಭೇಟಿ ನೀಡಿದರೂ ಸ್ಥಳೀಯ ಶಾಸಕರು ಇತ್ತ ಮುಖ ಮಾಡಿಲ್ಲ. ಅವರು ಸ್ಥಳದಲ್ಲಿ ನಿಂತು ವಿಶೇಷ ತಂತ್ರಜ್ಞಾನದ ಮೂಲಕ ಶೋಧನೆ ನಡೆಸಲು ಸರ್ಕಾರದ ಮೇಲೆ ಒತ್ತಡ ಮಾಡಿ ಮಗುವಿನ ಪತ್ತೆಗೆ ಪ್ರಯತ್ನ ಮಾಡದಿರುವದನ್ನು ಕೊಪ್ಪಳ ಜಿಲ್ಲಾ ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ತೀವ್ರವಾಗಿ ಖಂಡಿಸಿದ್ದಾರೆ. ಶಾಸಕರಾದಾಗಿನಿಂದ ಸಾಮಾನ್ಯ ಜನರ ಕೈಗೆ ಸಿಗುತ್ತಿಲ್ಲ. ಸಂಘಟನೆಗಳು ಮನವಿ ಸಲ್ಲಿಸುವದು ಕಷ್ಟಕರವಾಗಿದೆ. ವಿಶೇಷ ಕಾರ್ಯಕ್ರಮಗಳಲ್ಲಿ ಸಿಕ್ಕಾಗ ಮನವಿ ಸಲ್ಲಿಸಿದರೂ ಸ್ಪಂದನೆ ಮಾಡುತ್ತಿಲ್ಲ. ಅವರು ಕೊಟ್ಟ ಭರವಸೆಗಳು ಹುಸಿಯಾಗಿವೆ. ಗಂಗಾವತಿ ಯ ಇಡಿ ಇತಿಹಾಸದಲ್ಲಿ ಜನರ ಮಧ್ಯ ಇರದೇ ಇರುವ ಶಾಸಕ ಯಾರಾದ್ರೂ ಇದ್ದರೆ ಅದು ಜನಾರ್ಧನ್ ರಡ್ಡಿ ಎಂದು ಮ್ಯಾಗಳಮನಿ ಆರೋಪಿಸಿದ್ದಾರೆ. ಹಿಂದಿನ ಎಲ್ಲಾ ಶಾಸಕರು ಜನರ ಸಮಸ್ಯೆಗಳ ಕುರಿತು ಸ್ಪಂದನೆ ಮಾಡುತ್ತಿದ್ದರು. ಹೀಗಿನ ಶಾಸಕರು ಜನರಗೋಸ್ಕರ ಚುನಾವಣೆಗೆ ಸ್ಪರ್ಧೆ ಮಾಡದೇ ತಮ್ಮ ಸ್ವ ಹಿತಾಸಕ್ತಿಗೆ ಗೆದ್ದು ತಮ್ಮ ಆತಂಕಗಳ ನಿವಾರಣೆಗೆ ಮಾತ್ರ ಶಾಸಕರಾಗಿದ್ದಾರೆ. ಅವರು ಬಿಜೆಪಿ ಸೇರಿದ್ದು ಇದೆ ದ್ರಷ್ಟಿಯಿಂದ ಎಂದು ಮ್ಯಾಗಳಮನಿ ದೂರಿದ್ದಾರೆ. ಕೆ ಆರ್ ಪಿ ಪಿ ಪಕ್ಷವನ್ನು ಬಿಜೆಪಿ ಯಲ್ಲಿ ವಿಲೀನ ಮಾಡಿದಾಗಲೇ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಯಾಕೆಂದರೆ ಜನ,ಕೆ ಆರ್ ಪಿ ಪಿ ಗೆOದು ಮತ ಹಾಕಿದ್ದಾರೆ ವಿನಃ ಬಿಜೆಪಿ ಗೆOದುಕೊಂಡು ಜನ ಮತ ಹಾಕಿಲ್ಲ. ಅವಾಗಲೇ ರಾಜೀನಾಮೆ ಗೆ ಜನ ಒತ್ತಾಯ ಮಾಡಲಿಲ್ಲ. ಯಾಕಂದ್ರೆ ಅವರು ಕೊಟ್ಟ ಭರವಸೆ ಈಡೇರಿಸುತ್ತಾರೆ, ತಮ್ಮ ಸ್ವಂತ ಹಣದಿಂದ ಅಭಿವೃದ್ಧಿಯಾದರೂ ಮಾಡುತ್ತಾರೆಂದು ನಂಬಿಕೆ ಇಟ್ಟಿದ್ದರು. ಎಲ್ಲಾ ನಂಬಿಕೆಗಳು ಹುಸಿಯಾಗಿವೆ. ಮಾಜಿ ಶಾಸಕ ಪರಣ್ಣ ಮುನವಳ್ಳಿ ಎಲ್ಲಾ ಖಾಸಗಿಯಾಗಿ ಮಾಡುವ ಜಯಂತಿ ಮತ್ತು ವಿವಿಧ ಕಾರ್ಯಕ್ರಮ ಗಳಲ್ಲಿ ಬಾಗವಹಿಸಿ ಹಾಲಿ ಶಾಸಕರOತೆ ಜನರ ಮಧ್ಯ ಉತ್ಸಾಹದಿಂದ ಭಾಗವಹಿಸುತ್ತಾರೆ. ಅವರ ಈ ಕಾರ್ಯ ಮೆಚ್ಚುವಂತಹದ್ದು. ಈಗಿನ ಶಾಸಕರು ಬಹುತೇಕ ಕಾರ್ಯಕ್ರಮಗಳಿಂದ ದೂರ ಉಳಿದಿದ್ದಾರೆ.ಕ್ಷೆತ್ರದಲ್ಲಿದ್ದು ಜನರ ಸಮಸ್ಯೆ ಆಲಿಸದ ಇಂತಹ ಶಾಸಕರು ನಮಗೆ ಬೇಕಾಗಿಲ್ಲ. ಜನರು ತಿರುಗಿ ಬೀಳುವ ಹಾಗೂ ಸಂಘಟನೆಗಳು ಹೋರಾಟ ಮಾಡುವ ಮುನ್ನ ಅವರು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಬೇಕೆಂದು ಮ್ಯಾಗಳಮನಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಚಂದ್ರು ನಿಸರ್ಗ, ಜಡಿಯಪ್ಪ ಹಂಚಿನಾಳ, ರಾಘವೇಂದ್ರ ಕಡೆಬಾಗಿಲು, ದುರ್ಗೇಶ್ ಹೊಸಳ್ಳಿ, ಪಂಪಾಪತಿ ಕುರಿ, ರಾಮಣ್ಣ ರುದ್ರಾಕ್ಷಿ, ಬಸವರಾಜ್ ನಾಯಕ, ಮಂಜುನಾಥ್ ಚನ್ನಾದಾಸರ, ಮುತ್ತು, ಜಂಬಣ್ಣ ಶಿಂದೊಳ್ಳಿ, ನರಸಪ್ಪ, ಹುಲ್ಲೇಶ್ ಮತ್ತಿತರರು ಇದ್ದರು.