Body and eye donation by social worker and Kannada lover G. Ramakrishna

ಗಂಗಾವತಿ: ಗಂಗಾವತಿ ತಾಲೂಕಿನ ಶ್ರೀರಾಮನಗರದ ನಿವಾಸಿ, ಸಮಾಜ ಸೇವಕ ಹಾಗೂ ಸ್ವಾಮಿ ವಿವೇಕಾನಂದ ಸೇವಾ ಸಂಘದ ಅಧ್ಯಕ್ಷರಾದ ಕನ್ನಡಪ್ರೇಮಿ ಜಿ. ರಾಮಕೃಷ್ಣರವರು ತಮ್ಮ ಶರೀರವನ್ನು ಮರಣಾನಂತರ ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ದೇಹದಾನ ಹಾಗೂ ಕೊಪ್ಪಳದ ಎಂ.ಎA. ಜೋಶಿ ಕಣ್ಣಿನ ಆಸ್ಪತ್ರೆಗೆ ನೇತ್ರದಾನ ಮಾಡುವುದಾಗಿ ಪ್ರಮಾಣಪತ್ರ ನೀಡಿ ಸ್ಪಷ್ಟೀಕರಿಸಿರುತ್ತಾರೆ.
ಜಿ. ರಾಮಕೃಷ್ಣರವರು ೪೫ ವರ್ಷಗಳಿಂದ ವಿದ್ಯಾ, ಆರೋಗ್ಯ, ಸಾಮಾಜಿಕ, ಸಾಂಸ್ಕೃತಿಕ, ಕಾರ್ಮಿಕ ಮುಂತಾದ ಕಾರ್ಯಕ್ರಮಗಳಿಗೆ ನಿರಂತರ ಸೇವೆಯನ್ನು ಸಲ್ಲಿಸುತ್ತಾ ಬಂದಿರುತ್ತಾರೆ. ವಿಶೇಷವಾಗಿ ಬಡ ಜನರ ಕಲ್ಯಾಣಕ್ಕೋಸ್ಕರ ಉಚಿತ ವಿವಾಹಗಳು, ಬಡವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ, ಉತ್ತಮ ಶಿಕ್ಷಕರಿಗೆ ಸನ್ಮಾನ, ಯುವಜನಮೇಳ, ಮಕ್ಕಳಮೇಳ, ಸ್ಕೌಟ್ಸ್ ಗೈಡ್ಸ್ ರ‍್ಯಾಲಿಗಳು ಪ್ರತಿವರ್ಷ ಸಾಮೂಹಿಕ ವನಭೋಜನಗಳು, ನಿರುದ್ಯೋಗ ಮಹಿಳೆಯರಿಗೆ ಹೊಲಿಗೆ ಯಂತ್ರಗಳು, ಡ್ರೆöÊವರ್‌ಗಳಿಗೆ ಚಾಲನಾ ಪರವಾನಿಗೆ ಮಾಡಿಸುವುದು, ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಪಾಸ್‌ಪೋರ್ಟ್ ಮಾಡಿಸಿದ್ದು, ಅಂಗವಿಕಲರಿಗೆ, ವೃದ್ಧರಿಗೆ ಮಾಶಾಸನ ಸೌಲಭ್ಯ ಒದಗಿಸಿದ್ದು, ಬಡಕುಟುಂಬಗಳಿಗೆ ಉಚಿತ ಸಾಮೂಹಿಕ ವಿವಾಹ, ಬಡವರ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು, ಉಚಿತ ನೇತ್ರ ಚಿಕಿತ್ಸಾ ಶಿಬಿರ, ವೃದ್ಧರಿಗೆ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ಹೀಗೆ ಇನ್ನೂ ಹಲವಾರು ಸೇವೆಗಳನ್ನು ಸಲ್ಲಿಸುತ್ತಾ ಬಂದಿರುತ್ತಾರೆ.
ಅದೇ ರೀತಿ ಅವರು ತಮ್ಮ ಮರಣಾನಂತರವೂ ಕೂಡ ತಮ್ಮ ದೇಹವನ್ನು ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ಉಪಯೋಗವಾಗಲು ದಾನವಾಗಿ ಹಾಗೂ ಕೊಪ್ಪಳದ ಎಂ.ಎA. ಜೋಶಿ ಕಣ್ಣಿನ ಆಸ್ಪತ್ರೆಗೆ ನೇತ್ರದಾನ ಮಾಡಿ ತಮ್ಮ ಜೀವನದ ನಂತರವೂ ದೇಹ ಹಾಗೂ ಕಣ್ಣುಗಳು ಸಮಾಜಕ್ಕೆ ಉಪಯೋಗವಾಗುವಂತೆ ನಿಸ್ವಾರ್ಥತೆಯನ್ನು ಮೆರೆದಿದ್ದಾರೆ.